ಕರ್ನಾಟಕ ಪೋಸ್ಟಲ್ ಸರ್ಕಲ್ ನೇಮಕಾತಿ 2024: ಒಟ್ಟು 1940 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸ್ನೇಹಿತರೇ ಕರ್ನಾಟಕ ಅಂಚೆ ವ್ರತ್ತ ಇಲಾಖೆಯಿಂದ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ಎಬಿಪಿಎಂ) ಮತ್ತು ಡಾಕ್ ಸೇವಕರು ಸೇರಿದಂತೆ ಒಟ್ಟು 1940 ಹುದ್ದೆಗಳ ಭರ್ತಿ ಮಾಡಲು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತರು 15-07-2024 ರಿಂದ 05-08-2024 ರವರೆಗೆ ಆನ್ಲೈನ್ ನಲ್ಲಿ ಕರ್ನಾಟಕ ಪೋಸ್ಟಲ್ ಸರ್ಕಲ್ ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ನೇಮಕಾತಿಗೆ ಸಂಬಂದಿತ ಹೆಚ್ಚಿನ ಮಾಹಿತಿಯನ್ನುಈ ಲೇಖನದಲ್ಲಿ ನೀಡಲಾಗಿದ್ದು, ತಪ್ಪದೆ ಲೇಖನವನ್ನು ಪೂರ್ತಿಯಾಗಿ ಓದಿರಿ.
ಕರ್ನಾಟಕ ಪೋಸ್ಟಲ್ ಸರ್ಕಲ್ ನೇಮಕಾತಿ 2024 ಕ್ಕೆ ಸಂಬಂದಿತ ಸಂಪೂರ್ಣ ವಿವರಗಳು
- ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ (ಜಿಡಿಎಸ್).
- ಜವಾಬ್ದಾರಿ: ಹೊಣೆಗಾರಿಕೆಯಲ್ಲಿ ಅಂಚೆ ಚೀಟಿಗಳ ಮಾರಾಟ, ಅಂಚೆ ವಿತರಣಾ ಕಾರ್ಯ, ಅಂಚೆ ಕಾರ್ಯಗಳಲ್ಲಿ ಸಹಾಯ, ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಟ್ರಾನ್ಸಾಕ್ಷನ್‌ಗಳ ನಿರ್ವಹಣೆ ಕಾರ್ಯ ಇರುತ್ತದೆ.
- ಉದ್ಯೋಗ ಸ್ಥಳ: ನಾಮಿತ ವಿಭಾಗದ ವಿವಿಧ ಅಂಚೆ ಕಚೇರಿಗಳು ಮತ್ತು ಶಾಖೆಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
ವೇತನ:
- ಗ್ರಾಮೀಣ ಡಾಕ್ ಸೇವಕರ (GDS) ವೇತನವು ಸಮಯ ಸಂಬಂಧಿತ ನಿರಂತರತೆ ಭತ್ಯೆ (TRCA) ಸ್ಲ್ಯಾಬ್‌ಗಳನ್ನು ಆಧರಿಸಿದೆ.
- ಬ್ರಾಂಚ್ ಪೋಸ್ಟ್‌ಮಾಸ್ಟರ್‌ಗಳಿಗೆ (ಬಿಪಿಎಂ), ಟಿಆರ್‌ಸಿಎ ಸ್ಲ್ಯಾಬ್ ರೂ. 12,000 ರಿಂದ ರೂ. 29,380 ಇರುತ್ತದೆ.
- ಸಹಾಯಕ ಶಾಖೆಯ ಪೋಸ್ಟ್‌ಮಾಸ್ಟರ್‌ಗಳು (ABPM) ಮತ್ತು ಡಾಕ್ ಸೇವಕರಿಗೆ, ಸ್ಲ್ಯಾಬ್ ರೂ. 10,000 ರಿಂದ ರೂ. 24,470 ಇರುವುದು.
ಶೈಕ್ಷಣಿಕ ಅರ್ಹತೆಗಳು: ಅಗತ್ಯವಿರುವ ಅರ್ಹತೆಗಳು ಮತ್ತು ಅನುಭವ
- ಗ್ರಾಮೀಣ ಡಾಕ್ ಸೇವಕನಿಗೆ (GDS) ಅಗತ್ಯವಿರುವ ಶೈಕ್ಷಣಿಕ ಅರ್ಹತೆ: 10 ನೇ ತರಗತಿಯ ಪ್ರೌಢ ಶಾಲಾ ಪರೀಕ್ಷೆಯಲ್ಲಿ (SSLC) ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.
- 10 ನೇ ತರಗತಿ ಪ್ರಮಾಣಪತ್ರವು ಭಾರತ ಸರ್ಕಾರ/ರಾಜ್ಯ ಸರ್ಕಾರಗಳು/ಭಾರತದ ಕೇಂದ್ರಾಡಳಿತ ಪ್ರದೇಶಗಳಿಂದ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಇರಬೇಕು.
- ಹೆಚ್ಚುವರಿಯಾಗಿ, ಇಲಾಖೆಯು ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಅರ್ಜಿದಾರರಿಗೆ ಸ್ಥಳೀಯ ಭಾಷೆಯ ಜ್ಞಾನವು ಅವಶ್ಯಕ.
ವಿವಿಧ ವರ್ಗಗಳಿಗೆ ವಯಸ್ಸಿನ ಮಿತಿ ಮತ್ತು ವಯಸ್ಸಿನ ಸಡಿಲಿಕೆ
- ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಅರ್ಜಿದಾರರ ವಯಸ್ಸಿನ ಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು.
- ಅಧಿಸೂಚನೆಯಲ್ಲಿ ವಿವಿಧ ವರ್ಗಗಳಿಗೆ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದ್ದು, SC/ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳು, OBC 3 ವರ್ಷಗಳು ಮತ್ತು ಅಂಗವಿಕಲರಿಗೆ (PwD) 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.
- ಅಭ್ಯರ್ಥಿಯು PwD + OBC ವರ್ಗದಲ್ಲಿ ಪರಿಗಣಿಸಿದರೆ, ಅಂತವರಿಗೆ 13 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದ್ದು, PwD + SC/ST ಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದೆ.
ಅರ್ಜಿ ಶುಲ್ಕ
- ಮಹಿಳಾ ಅರ್ಜಿದಾರರಿಗೆ, SC/ST ಅರ್ಜಿದಾರರಿಗೆ, PwD ಅರ್ಜಿದಾರರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿಶುಲ್ಕ ರೂ.100 ಆಗಿದೆ.
- ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಮತ್ತು ಯೂಪಿಐ ನಂತಹ ವಿವಿಧ ಆನ್‌ಲೈನ್ ಮೋಡ್‌ಗಳ ಮೂಲಕ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸಬಹುದು.
- ಒಮ್ಮೆ ಶುಲ್ಕವನ್ನು ಪಾವತಿಸಿದರೆ, ಅದನ್ನು ಮರುಪಾವತಿಸಲಾಗುವುದಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಮೊದಲು ಅರ್ಜಿದಾರರು ತಮ್ಮ ಬಳಕೆಯಲ್ಲಿರುವ ಸಕ್ರಿಯ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಜಿಡಿಎಸ್ ಆನ್‌ಲೈನ್ ಎಂಗೇಜ್‌ಮೆಂಟ್ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.
- ನಂತರ ಆನ್‌ಲೈನ್ ನಲ್ಲಿ ಅರ್ಜಿ ನಮೂನೆಯನ್ನು ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಬೇಕು ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
- ಯಾವುದೇ ಪ್ರಶ್ನೆಗಳಿಗೆ, ವಿಭಾಗವಾರು ಸಹಾಯ ಕೇಂದ್ರ ಮತ್ತು ಮೊಬೈಲ್ ಸಂಖ್ಯೆಗಳನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದ್ದು ಯಾವುದೇ ತರಹದ ಗೊಂದಲವಿದ್ದರೆ ಅಭ್ಯರ್ಥಿಗಳು ಸಂಪರ್ಕಿಸಬಹುದು.
- ಹೊಸ ಅಪ್‌ಡೇಟ್‌ಗಳಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು.
ಉದ್ಯೋಗ ಕರ್ತವ್ಯಗಳು ಮತ್ತು ಪ್ರಯೋಜನಗಳು:
- ಸಹಾಯಕ ಬ್ರಾಂಚ್ ಪೋಸ್ಟ್‌ಮಾಸ್ಟರ್‌ಗಳಿಗೆ (ABPMs) ಅಂಚೆಚೀಟಿಗಳ ಮಾರಾಟ, ಅಂಚೆ ವಿತರಣೆ ಮತ್ತು ಇಲಾಖೆಯ ನಿರ್ದೇಶನದಂತೆ ಅಂಚೆ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡುವ ಕರ್ತವ್ಯವನ್ನು ನೀಡಲಾಗುತ್ತದೆ.
- ಗ್ರಾಮೀಣ ಡಾಕ್ ಸೇವಕರಿಗೆ (ಜಿಡಿಎಸ್) ವೇತನವು ವಾರ್ಷಿಕ ಹೆಚ್ಚಳದೊಂದಿಗೆ ಸಮಯ ಸಂಬಂಧಿತ ನಿರಂತರ ಭತ್ಯೆ (ಟಿಆರ್‌ಸಿಎ), ತುಟ್ಟಿಭತ್ಯೆ ಮತ್ತು ಸರ್ಕಾರದ ನಿಯಮಗಳ ಪ್ರಕಾರ ಇತರ ಭತ್ಯೆಗಳಿಗೆ ಒಳಪತ್ತಿರುತ್ತದೆ.
- ಗ್ರಾಮೀಣ ಡಾಕ್ ಸೇವಕರಿಗೆ ಹೊಸ ಪಿಂಚಣಿ ಯೋಜನೆಯಂತೆ ಜಿಡಿಎಸ್ ಗ್ರಾಚ್ಯುಟಿ ಮತ್ತು ಸೇವಾ ಡಿಸ್ಚಾರ್ಜ್ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.