ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಮೀಸಲಾತಿ

ಸ್ನೇಹಿತರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕ್ಕೆ ಒಪ್ಪಿಗೆ ನೀಡಿದ್ದಾರೆ.

ಹೌದು, ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಮತ್ತು ಕನ್ನಡದ ನೆಲದಲ್ಲಿ ಕನ್ನಡಿಗರು ಉದ್ಯೋಗ ವಂಚಿತರಾಗಬಾರದು ಅನ್ನುವ ಕಲ್ಪನೆಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದು, ಖಾಸಗಿ ವಲಯದದಲ್ಲಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ 100% ಮೀಸಲಾತಿಯನ್ನು ನೀಡಲಾಗಿದೆ.

ಕೆಲ ವರದಿಯ ಪ್ರಕಾರ ರಾಜಧಾನಿ ಬೆಂಗಳೂರು, ಮೈಸೂರುಗಳಂತಹ ಕರ್ನಾಟಕದ ಪ್ರಮುಖ ನಗರಗಳ ಖಾಸಗಿ ಕಂಪನಿಗಳಲ್ಲಿ ನೆರೆ ಮತ್ತು ಉತ್ತರ ಭಾರತದ ರಾಜ್ಯಗಳ ವಲಸೆ ನೌಕರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ಕನ್ನಡಿಗರ ಸಂಖ್ಯೆ ತುಂಬಾ ಕಡಿಮೆ ಮಟ್ಟಕ್ಕೆ ಇಳಿದಿದೆ. ಹೀಗಾಗಿ ಕನ್ನಡಿಗರು ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಈ ನಿರ್ಧಾರದ ಮೂಲ ಉದ್ದೇಶ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ (x) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಾಗಾದರೆ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಮೀಸಲಿಟ್ಟ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳು ಯಾವುವು ಅಂತ ತಿಳಿಯೋನ ಬನ್ನಿ.

ಗ್ರೂಪ್ ‘ಸಿ’ ಹುದ್ದೆಗಳು

ಖಾಸಗಿ ಕಂಪನಿಗಳಲ್ಲಿನ ಗ್ರೂಪ್ C ಪೋಸ್ಟ್‌ಗಳು ವಿಶಿಷ್ಟವಾಗಿ ಸಂಸ್ಥೆಯ ಕಾರ್ಯನಿರ್ವಹಣೆ ಮತ್ತು ಕಾರ್ಯಾಚರಣೆಗಳನ್ನು ಬೆಂಬಲಿಸುವ ವಿವಿಧ ಪಾತ್ರಗಳನ್ನು ಒಳಗೊಂಡಿರುತ್ತವೆ. ಅದರಲ್ಲಿ ಪ್ರಮುಖವಾಗಿ ಆಡಳಿತ ಸಹಾಯಕರು, ಜೂನಿಯರ್ ಅಕೌಂಟೆಂಟ್‌ಗಳು, ಡೇಟಾ ಎಂಟ್ರಿ ಆಪರೇಟರ್‌ಗಳು, ಗ್ರಾಹಕ ಸೇವಾ ಪ್ರತಿನಿಧಿ, ತಾಂತ್ರಿಕ ಬೆಂಬಲ ಸಿಬ್ಬಂದಿ, ಲ್ಯಾಬ್ ಸಹಾಯಕರು, ಜೂನಿಯರ್ ತಂತ್ರಜ್ಞ, ಸಹಾಯಕರು, ಕಿರಿಯ ಲೆಕ್ಕಗಾರರು, ಗ್ರಾಹಕ ಸೇವಾ ಪ್ರತಿನಿಧಿಗಳು, ತಾಂತ್ರಿಕ ಬೆಂಬಲ ಸಿಬ್ಬಂದಿ, ಪ್ರಯೋಗಾಲಯ ಸಹಾಯಕರು, ಕಿರಿಯ ತಂತ್ರಜ್ಞರು, ಕಚೇರಿ ಲಿಪಿಕರು, ರಿಸೆಪ್ಷನಿಸ್ಟ್‌ಗಳು ಮತ್ತು ಮಾನವ ಸಂಪನ್ಮೂಲ ಸಹಾಯಕರು ಸೇರಿದ್ದಾರೆ.

ಗ್ರೂಪ್ ‘ಡಿ’ ಹುದ್ದೆಗಳು

ಗ್ರೂಪ್ ‘ಡಿ’ ಹುದ್ದೆಗಳಲ್ಲಿ ಪ್ರಮುಖವಾಗಿ ಪ್ಯೂನ್ ಗಳು, ಭದ್ರತಾ ಗಾರ್ಡುಗಳು, ಸ್ವೀಪರ್‌ಗಳು, ಗೃಹಪಾಲಕ ಸಿಬ್ಬಂದಿ, ಚಾಲಕರು, ತೋಟಗಾರರು, ನಿರ್ವಹಣಾ ಕಾರ್ಮಿಕರು, ಲೋಡರ್‌ಗಳು, ಸಹಾಯಕರು ಮತ್ತು ಕಚೇರಿ ಸಹಾಯಕರು ಸೇರಿದ್ದಾರೆ

Leave a Comment