7ನೇ ವೇತನ ಆಯೋಗ: ಅನಿರ್ಧಿಷ್ಟಾವಧಿ ಮುಷ್ಕರ!ಸರ್ಕಾರಿ ನೌಕರರ ಬೇಡಿಕೆಗಳು ಮತ್ತು ಅದರ ಸವಾಲುಗಳು

ಸ್ನೇಹಿತರೇ 7ನೇ ವೇತನ ಆಯೋಗದ (7th pay commission) ಅನುಷ್ಠಾನವು ಪ್ರತಿ ದಿನ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರಿ ನೌಕರ ಸಂಘ ಇದೀಗ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿ ಜಾರಿಯಾಗದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಹೌದು, ಡಾ. ಕೆ ಸುಧಾಕರ್ ನೇತ್ರತ್ವದ 7ನೇ ವೇತನ ಆಯೋಗದ ತಂಡವು ಕಳೆದ ಮಾರ್ಚ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವರದಿಯನ್ನು ಸಾಲಿಸಿತ್ತು. ಅಂದಿನಿಂದ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮೇಲೆ ವರದಿ ಅನುಷ್ಟಾನಗೊಳಿಸಲು ತೀವ್ರ ಬೇಡಿಕೆಯನ್ನಿಟ್ಟಿದ್ದಾರೆ.

ರಾಜ್ಯ ಸರ್ಕಾರ ಈ ಹಿಂದೆ ನಡೆದ ಎರಡು ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಚರ್ಚಿಸದೆ ಇರುವುದು ಸರ್ಕಾರಿ ನೌಕರರ ವೇತನ ಹೆಚ್ಚಳದ ನಿರೀಕ್ಷೆಯನ್ನು ಒಡೆದಾಕಿದೆ.

ಈಗಾಗಲೇ ಬಿ‌ಜೆ‌ಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಸರ್ಕಾರಿ ನೌಕರರ 17% ಮದ್ಯಂತರ ವೇತನವನ್ನು ಹೆಚ್ಚಿಸಲು ಘೋಷಣೆ ಮಾಡಿದ್ದು, 7ನೇ ವೇತನ ಆಯೋಗದ ವರದಿಯ ಪ್ರಕಾರ ಇನ್ನೂ ಮೂಲ ವೇತನದಲ್ಲಿ 10.5% ಹೆಚ್ಚಳವಾಗಬೇಕಿದೆ.

ಸರ್ಕಾರಿ ನೌಕರರ ಬೇಡಿಕೆಗಳು ಮತ್ತು ಅದರ ಸವಾಲುಗಳು

ಹಾಗಾದರೆ ಸರ್ಕಾರಿ ನೌಕರರು ಬೇಡಿಕೆಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ ಈ ಲೇಖನದಲ್ಲಿ ತಿಳಿಯೋಣ.

1) 7ನೇ ವೇತನ ಆಯೋಗದ ವರದಿ ಜಾರಿ: ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಏನೆಂದರೆ ಅದು ನೌಕರ ಮೂಲ ವೇತನದಲ್ಲಿ 27% ಹೆಚ್ಚಳ

2) ಹಳೆ ಪಿಂಚಣಿ ಯೋಜನೆ ಜಾರಿ: ಈ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರರ ಸಂಬಳ ಯಾವುದೇ ಕಡಿತಗಳಿಗೆ ಅನ್ವಯಿಸುದಿಲ್ಲ, ಹೀಗಾಗಿ ಓ‌ಪಿ‌ಎಸ್ ಉದ್ಯೋಗಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಓ‌ಪಿ‌ಎಸ್ ಅಡಿಯಲ್ಲಿ ಪಿಂಚಣಿ ಆದಾಯದಿಂದ ಯಾವುದೇ ತೆರಿಗೆಗಳು ಕಡಿತಗೊಳಿಸಲಾಗುವುದಿಲ್ಲ. ಈ ಕಾರಣದಿಂದ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕು ಅನ್ನುವ ಬೇಡಿಕೆಯನ್ನಿಟ್ಟಿದ್ದಾರೆ.

ಮಾಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗ್ಲೆ ಬಜೆಟ್ ಲ್ಲಿ ಸರ್ಕಾರಿ ನೌಕರ ವೇತನ ಹೆಚ್ಚಳಕ್ಕಾಗಿ ಸುಮಾರು ರೂ.14 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದು 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿದರೆ ಸರ್ಕಾರಕ್ಕೆ 17 ರಿಂದ 18 ಸಾವಿರ ಕೋಟಿ ರೂ ಖರ್ಚಾಗಲಿದೆ ಅಂತ ಹಣಕಾಸು ಇಲಾಖೆ ತಿಳಿಸಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪೂರೈಕೆಗೆ ಹಣ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ವೇತನ ಆಯೋಗದ ವರದಿ ಜಾರಿಗೊಳಿಸಿದರೆ ಸರ್ಕಾರಕ್ಕೆ ಸಾಕಷ್ಟು ನಷ್ಟ ಆಗಲಿದೆ. ಹೀಗಾಗಿ ರಾಜ್ಯ ಸರ್ಕಾರ ವರದಿ ಜಾರಿಯ ಮಾಡಲು ಹೆಚ್ಚು ಆಸಕ್ತಿ ತೋರುತ್ತಿಲ್ಲ ಅಂತ ಕೆಲವರು ಆರೋಪ ಮಾಡಿದ್ದಾರೆ.

ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ?

ಭಾನುವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಅಧ್ಯಕ್ಷ್ಯ ಎಸ್. ಷಡಾಕ್ಷರಿ ಅವರು ಸರ್ಕಾರಿ ನೌಕರರ ಮುಂದಿನ ಹೋರಾಟದ ರೂಪುರೇಶಗಳನ್ನು ಚರ್ಚಿಸಿ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಇದೆ ತರಹ ನಿರ್ಲಕ್ಷ್ಯ ತೋರಿಸಿದರೆ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Leave a Comment