ಮುಖ್ಯಮಂತ್ರಿ ಸಿದ್ದರಾಮಯ್ಯ: ಹೊಸ ರೇಷನ್ ಕಾರ್ಡ್ ವಿತರಣೆಗೆ ಆದೇಶ!

ಸ್ನೇಹಿತರೇ ಎರಡು ದಿನಗಳ ಹಿಂದೆ ನಡೆದ ಜಿಲ್ಲಾಧಿಕಾರಿ ಮತ್ತು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಪಿ‌ಡಿ‌ಓಗಳ (PDO) ಸಭೆಯಲ್ಲಿ ಹೊಸ ಬಿ‌ಪಿ‌ಎಲ್ ರೇಷನ್ ಅರ್ಜಿ ಸಲ್ಲಿಕೆ ಕುರಿತಾದ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.

ಹೌದು, ಎರಡು ದಿನಗಳ ಹಿಂದೆ ನಡೆದ ಜಿಲ್ಲಾಧಿಕಾರಿ ಮತ್ತು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಪಿ‌ಡಿ‌ಓಗಳ (PDO) ಸಭೆಯಲ್ಲಿ ಎಲ್ಲ ಜಿಲ್ಲೆಗಳ ವರದಿ ಪರಿಶೀಲನೆ ಸಂದರ್ಭದಲ್ಲಿ ನೀಡಿರುವ ಹೇಳಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿರುವ ಪ್ರಕಾರ ಆಹಾರ ಇಲಾಖೆಯಲ್ಲಿ ಒಟ್ಟು 2.95 ಲಕ್ಷ ಹೊಸ ಬಿ‌ಪಿ‌ಎಲ್ ಕಾರ್ಡ್ ಅರ್ಜಿಗಳು ಪೆಂಡಿಂಗ್ ಇರುತ್ತವೆ. ಮತ್ತು 2021 ರಿಂದ 2024 ರವರೆಗೆ ಇಲಾಖಾ ಅಧಿಕಾರಿಗಳು ಒಟ್ಟು 6.17 ಲಕ್ಷ ಬೊಗಸ್ ಬಿ‌ಪಿ‌ಎಲ್ ಕಾರ್ಡ್ ಗಳನ್ನು ಪಟ್ಟಿ ತಯಾರಿಸಿ ಅವುಗಳನ್ನು ರದ್ದುಗೊಳಿಸಲಾಗಿದೆ.

ರಾಜ್ಯದಲ್ಲಿ ಕಾನೂನು ಬಾಹಿರವಾಗಿ ವಿತರಣೆಯಾದ ಬೊಗಸ್ ಬಿ‌ಪಿ‌ಎಲ್ ಕಾರ್ಡ್ ಗಳನ್ನು (BPL card) ನಿಷ್ಕ್ರಿಯಗೊಳಿಸಿ, ಯಾರು ನಿಜವಾಗಿಯು ಅದರ ಅರ್ಹತೆಯನ್ನು ಪಡೆದಿರುತ್ತಾರೋ ಅಂತಹ ಕುಟುಂಬಸ್ತರಿಗೆ ಹೊಸ ಬಿ‌ಪಿ‌ಎಲ್ ರೇಷನ್ ಕಾರ್ಡ್ ಶೀಘ್ರದಲ್ಲೇ ವಿತರಣೆ ಮಾಡಬೇಕು ಅಂತ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ 80% ಜನ ಬಿ‌ಪಿ‌ಎಲ್ ರೇಷನ್ ಕಾರ್ಡ್ ಬಳಕೆದಾರರು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆಯ ರಾಜ್ಯದ ಉದಾಹರಣೆ ನೀಡಿ, ತಮಿಳುನಾಡು ರಾಜ್ಯದಲ್ಲಿ ಕೇವಲ 40% ಜನರು ಬಿ‌ಪಿ‌ಎಲ್ ಕಾರ್ಡ್ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ಪಡೆಯುತ್ತಾರೆ ಆದರೆ ರಾಜ್ಯದ 4.67 ಕೋಟಿ ಜನರು ಅಂದರೆ ಒಟ್ಟು ಜನಸಂಖ್ಯೆಯ 80% ರಷ್ಟು ಜನರು ಬಿ‌ಪಿ‌ಎಲ್ ಕಾರ್ಡ್ ಯೋಜನೆ ಅಡಿಯಲ್ಲಿ ಬರುತ್ತಾರೆ ಅಂತ ಹೇಳಿದರು.

ನೀತಿ ಆಯೋಗದ ನಿಯಮದ ಪ್ರಕಾರ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯ 5.67% ರಷ್ಟು ಜನರಿಗೆ ಮಾತ್ರ ಬಿ‌ಪಿ‌ಎಲ್ ಕಾರ್ಡ್ ವಿತರಣೆ ಆಗಬೇಕು ಆದರೆ ರಾಜ್ಯದಲ್ಲಿ ಒಟ್ಟು 1.47 ಕೋಟಿ ಕುಟುಂಬದ 4.67 ಕೋಟಿ ಜನರು ಬಿ‌ಪಿ‌ಎಲ್ ಕಾರ್ಡ್ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ.

ಹೀಗಾಗಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅನರ್ಹರು ಬಿ‌ಪಿ‌ಎಲ್ ಕಾರ್ಡ್ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಅಂತವರ ಬಿ‌ಪಿ‌ಎಲ್ ರೇಷನ್ ಕಾರ್ಡ್ ಕೂಡಲೇ ರದ್ದುಗೊಳಿಸಿ, ದಾಖಲೆಗಳ ಪರಿಶೀಲನೆ ನಡೆಸಿ ಅರ್ಹತೆಯನ್ನು ಪಡೆದಿರುವ ಕುಟುಂಬಸ್ತರಿಗೆ ಹೊಸ ಬಿ‌ಪಿ‌ಎಲ್ ರೇಷನ್ ಕಾರ್ಡ್ (New BPL ration card) ವಿತರಣೆ ಮಾಡಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Leave a Comment