ಸ್ನೇಹಿತರೇ ಭಾರತ ರಕ್ಷಣಾ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುವ ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ನಲ್ಲಿ (Bharat Electronic Limited) ಖಾಲಿ ಇರುವ ಟೆಕ್ನಿಶಿಯನ್ ಸಿ(C), ಇಂಜಿನೀರಿಂಗ್ ಅಸಿಸ್ಟಂಟ್ ಟ್ರೈನಿ ಮತ್ತು ಜೂನೀಯರ್ ಅಸಿಸ್ಟಂಟ್ ನ ಒಟ್ಟು 32 ಹುದ್ದೆಗಳ ಭರ್ತಿ ಮಾಡಲು ಸಂಸ್ಥೆಯು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ನೇಮಕಾತಿ 2024 (BEL Recruitment 2024) ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.
ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 11, 2024 ಆಗಿರುತ್ತದೆ ಹೀಗಾಗಿ, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿರಿ.
ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ನೇಮಕಾತಿ 2024 ರ ಶೀರ್ಷಿಕೆ:
- ಸಂಸ್ಥೆಯ ಹೆಸರು: ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್
- ಹುದ್ದೆಯ ಹೆಸರು: ಟೆಕ್ನಿಶಿಯನ್ ಸಿ(C) (11), ಇಂಜಿನೀರಿಂಗ್ ಅಸಿಸ್ಟಂಟ್ ಟ್ರೈನಿ (12) ಮತ್ತು ಜೂನೀಯರ್ ಅಸಿಸ್ಟಂಟ್ (3) ಹುದ್ದೆಗಳು
- ಒಟ್ಟು ಖಾಲಿ ಹುದ್ದೆಗಳು: 32
- ಅರ್ಜಿಯ ವಿಧಾನ: ಆನ್ಲೈನ್
- ಉದ್ಯೋಗದ ಸ್ಥಳ: ಭಾರತದಾದ್ಯಂತ ಸಂಸ್ಥೆಯ ಎಲ್ಲಾ ಕೇಂದ್ರಗಳಲ್ಲಿ
ಪ್ರಮುಖ ದಿನಾಂಕಗಳು:
- ಅರ್ಜಿಯ ಪ್ರಾರಂಭ ದಿನಾಂಕ: ಜೂನ್ 25, 2024
- ಅರ್ಜಿಯ ಕೊನೆಯ ದಿನಾಂಕ: ಜುಲೈ 11, 2024
ವಯೋಮಿತಿ:
ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ 28 ವರ್ಷ ಮತ್ತು ಕನಿಷ್ಠ 18 ವರ್ಷ ವಯೋಮಿತಿಯು ಹೊಂದಿರಬೇಕಾಗುತ್ತದೆ.
- ಎಸ್ಸಿ/ಎಸ್ಟಿ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ 5 ವರ್ಷದ ವಯೋ ಸಡಳಿಕೆಯ ನಿಯಮ ಅನ್ವಯವಾಗುವುದು
- 2ಏ/2ಬಿ/3ಏ/3ಬಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷದ ವಯೋ ಸಡಳಿಕೆಯ ನಿಯಮ ಅನ್ವಯವಾಗುವುದು
- ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋ ಸಡಲಿಕೆ ಇರುತ್ತದೆ
ವಿದ್ಯಾರ್ಹತೆ:
- ಇಂಜಿನೀರಿಂಗ್ ಅಸಿಸ್ಟಂಟ್ ಟ್ರೈನಿ: ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಜಿನಿಯರಿಂಗ್ನಲ್ಲಿ 3 ವರ್ಷಗಳ ಡಿಪ್ಲೊಮಾ.
- ಟೆಕ್ನಿಷಿಯನ್ ‘ಸಿ’: SSLC + ITI + ಒಂದು ವರ್ಷದ ಶಿಕ್ಷಣ ಅಥವಾ SSLC + 3 ವರ್ಷಗಳ ರಾಷ್ಟ್ರೀಯ ಶಿಕ್ಷಣ ಕೋರ್ಸ್ ಪ್ರಮಾಣಪತ್ರ
- ಜೂನೀಯರ್ ಅಸಿಸ್ಟಂಟ್: ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ B.Com / BBM (ಮೂರು ವರ್ಷದ ಕೋರ್ಸ್).
ವೇತನ:
ಸ್ನೇಹಿತರೇ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ವಿವಿಧ ಹುದ್ದೆಗಳ ವೇತನ ಶ್ರೇಣಿ ಈ ರೀತಿ ಇದೆ.
- ಟೆಕ್ನಿಶಿಯನ್ ಸಿ(C) – ₹24,500- ₹90,000
- ಇಂಜಿನೀರಿಂಗ್ ಅಸಿಸ್ಟಂಟ್ ಟ್ರೈನಿ ಮತ್ತು ಜೂನೀಯರ್ ಅಸಿಸ್ಟಂಟ್ – ₹21,500 – ₹82,000
ಅರ್ಜಿ ಶುಲ್ಕ:
ಜನರಲ್/ಓಬಿಸಿ/ಈಡಬಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ ರೂ 250 ಅರ್ಜಿ ಶುಲ್ಕ + 18% GST ಇರುತ್ತದೆ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಸಿ, ಎರಡನೇ ಹಂತದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿನ ನಿಮ್ಮ ಪ್ರದರ್ಶನವನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ:
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ 11, ಜುಲೈ 2024 ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗುತ್ತಾರೆ. ಅರ್ಜಿ ಸಲ್ಲಿಕೆಯ ಲಿಂಕನ್ನು ಕೆಳಗೆ ನೀಡಲಾಗಿದೆ.