ಬೆಂಗಳೂರು ಮೆಟ್ರೋ ರೈಲು ನೇಮಕಾತಿ 2024: ಅಭ್ಯರ್ಥಿಗಳಿಗೆ ಬಿ‌ಎಮ್‌ಆರ್‌ಸಿ ಯಲ್ಲಿ ಉದ್ಯೋಗಾವಕಾಶ

ಸ್ನೇಹಿತರೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRC) ಸಂಸ್ಥೆಯಲ್ಲಿ ಖಾಲಿ ಇರುವ ಸಲಹೆಗಾರ/ಮುಖ್ಯ ಎಂಜಿನಿಯರ್ (ಸಿವಿಲ್), ಮುಖ್ಯ ಡೆಪ್ಯುಟಿ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್ (ಟ್ರ್ಯಾಕ್), ಸಹಾಯಕ ಎಂಜಿನಿಯರ್ / ವಿಭಾಗ ಎಂಜಿನಿಯರ್ (ಟ್ರ್ಯಾಕ್) ನ ಒಟ್ಟು 11 ಹುದ್ದೆಗಳ ಭರ್ತಿ ಮಾಡಲು ಸಂಸ್ಥೆಯು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ರೈಲು ನೇಮಕಾತಿ 2024 (Bangalore Metro Rail Recruitment 2024) ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 31.07.2024 ಆಗಿರುತ್ತದೆ ಹೀಗಾಗಿ, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿರಿ.

ಬೆಂಗಳೂರು ಮೆಟ್ರೋ ರೈಲು ನೇಮಕಾತಿ 2024 ರ ಶೀರ್ಷಿಕೆ:

  • ಸಂಸ್ಥೆಯ ಹೆಸರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRC)
  • ಹುದ್ದೆಯ ಹೆಸರು: ಸಲಹೆಗಾರ/ಮುಖ್ಯ ಎಂಜಿನಿಯರ್ (ಸಿವಿಲ್), ಮುಖ್ಯ ಡೆಪ್ಯುಟಿ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್ (ಟ್ರ್ಯಾಕ್), ಸಹಾಯಕ ಎಂಜಿನಿಯರ್ / ವಿಭಾಗ ಎಂಜಿನಿಯರ್ (ಟ್ರ್ಯಾಕ್) ಹುದ್ದೆಗಳು
  • ಒಟ್ಟು ಖಾಲಿ ಹುದ್ದೆಗಳು: 11
  • ಅರ್ಜಿಯ ವಿಧಾನ: ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ
  • ಉದ್ಯೋಗದ ಸ್ಥಳ: ಬೆಂಗಳೂರು

ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: 01.07.2024
  • ಅರ್ಜಿಯ ಕೊನೆಯ ದಿನಾಂಕ: 31.07.2024

ವಯೋಮಿತಿ:

ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ 55 ವರ್ಷ ಮತ್ತು ಕನಿಷ್ಠ 35 ವರ್ಷದ ವಯೋಮಿತಿಯು ಹೊಂದಿರಬೇಕಾಗುತ್ತದೆ.

ವಿದ್ಯಾರ್ಹತೆ ಮತ್ತು ವೇತನ

1) ಸಲಹೆಗಾರ/ಮುಖ್ಯ ಎಂಜಿನಿಯರ್ (ಸಿವಿಲ್)

  • ಅರ್ಹತೆ: ಸಿವಿಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಬಿ‌ಈ ಅಥವಾ ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು
  • ವೇತನ: ರೂ. 40,000 ರಿಂದ ರೂ. 2,10,693 ಪ್ರತಿ ತಿಂಗಳು

2) ಡೆಪ್ಯುಟಿ ಮುಖ್ಯ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್ (ಟ್ರ್ಯಾಕ್)

  • ಅರ್ಹತೆ: ಸಿವಿಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಬಿ‌ಈ ಅಥವಾ ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು
  • ಅಥವಾ ಕನಿಷ್ಠ 12 ವರ್ಷದ ಅನುಭವ ಹೊಂದಿರುವ ಬಿ‌ಈ ಅಥವಾ ಬಿ.ಟೆಕ್ ಪದವಿದರರಿಗೆ ಆದ್ಯತೆ ನೀಡಲಾಗುವು
  • ವೇತನ: ರೂ. 40,000 ರಿಂದ ರೂ. 2,10,693 ಪ್ರತಿ ತಿಂಗಳು

3) ಸಹಾಯಕ ಎಂಜಿನಿಯರ್ / ವಿಭಾಗ ಎಂಜಿನಿಯರ್ (ಟ್ರ್ಯಾಕ್)

  • ಅರ್ಹತೆ: ಬಿ‌ಈ ಅಥವಾ ಬಿ.ಟೆಕ್ ಪದವಿ or ಸಿವಿಲ್ ಇಂಜಿನೀರಿಂಗ್ ವಿಭಾಗದಲ್ಲಿ ಡಿಪ್ಲೋಮಾ ಮುಗಿಸಿರಬೇಕು
  • ವೇತನ: ರೂ. 40,000 ರಿಂದ ರೂ. 2,10,693 ಪ್ರತಿ ತಿಂಗಳು

ಬೆಂಗಳೂರು ಮೆಟ್ರೋ ರೈಲು ನೇಮಕಾತಿ 2024 ರ ವಿದ್ಯಾರ್ಹತೆ ಮತ್ತು ವೇತನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೆಳಗಡೆ ನೀಡಿರುವ ಅಫೀಷಿಯಲ್ ನೋಟಿಫಿಕೇಶನ್ ಲಿಂಕಿನ ಮೇಲೆ ಒತ್ತಿರಿ.

ಆಯ್ಕೆ ಪ್ರಕ್ರಿಯೆ:

ಬೆಂಗಳೂರು ಮೆಟ್ರೋ ರೈಲು ನಿಗಮ (BMRC) ಸಂಸ್ಥೆಯ ವತಿಯಿಂದ ಅರ್ಜಿಗಳ ಪರಿಶೀಲನೆ ನಡೆದ ನಂತರ ಪೂರಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ.ಸಂದರ್ಶನದಲ್ಲಿನ ನಿಮ್ಮ ಪ್ರದರ್ಶನವನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿಯ ನಮೂನೆಯನ್ನು ಪಡೆದುಕೊಂಡು,
ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಾಖಲೆಗಳೊಂದಿಗೆ, ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸಿ. ಅಭ್ಯರ್ಥಿಗಳು ಸ್ಪೀಡ್ ಪೋಸ್ಟ್/ಕೊರಿಯರ್ ಹಾಳೆ ಮೇಲೆ ಅರ್ಜಿ ಸಲ್ಲಿಸಲು ಬಯಸುವ ನಿರ್ದಿಷ್ಟ ಹುದ್ದೆಯ ಉಲ್ಲೇಖ ಮಾಡ ಬೇಕಾಗುತ್ತದೆ.

ಅರ್ಜಿ ಸಲ್ಲಿಕೆಯ ವಿಳಾಸ

ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
III ಮಹಡಿ, BMTC ಸಂಕೀರ್ಣ, K.H. ರಸ್ತೆ, ಶಾಂತಿನಗರ, ಬೆಂಗಳೂರು 560027

Leave a Comment