7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಅನುಮತಿ ನೀಡಿದ ಸಿದ್ದರಾಮಯ್ಯ ಸರ್ಕಾರ! ಸರ್ಕಾರಿ ನೌಕರರ ವೇತನದಲ್ಲಿ 27.5% ಹೆಚ್ಚಳ
ಸ್ನೇಹಿತರೇ ದಿನಾಂಕ 15-07-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದಂತಹ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ನಿರ್ಧರಿಸಿದೆ.
ಹೌದು, ಕಳೆದ ಮಾರ್ಚ್ ನಲ್ಲಿ ಡಾ.ಕೆ ಸುಧಾಕರ್ ಅವರ ಆಯೋಗ 250 ಕ್ಕೂ ಹೆಚ್ಚು ಪುಟಗಳ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಅದಾದ ಬಳಿಕ ಸಿದ್ದರಾಮಯ್ಯ ಅವರ ಸರ್ಕಾರ ಈ 7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ ಹೆಚ್ಚು ಚರ್ಚೆಗಳು ನಡೆದಿರಲ್ಲ.
ಇದು ರಾಜ್ಯದ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿತ್ತು. ಆದರೆ ಇದೀಗ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಬಹುದಿನಗಳ ಮತ್ತು ವ್ರತ್ತಿ ಜೀವನದ ಪ್ರಮುಖ ಬೇಡಿಕೆ ಈಡೇರಿಸಲು ಸಿದ್ದರಾಮಯ್ಯ ಅವರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನ ವರದಿಯಂತೆ ಸರ್ಕಾರಿ ನೌಕರರ ವೇತನವನ್ನು 27.5% ಹೆಚ್ಚಿಸಲಾಗಿದ್ದು, ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ಕಳೆದ ಮಾರ್ಚ್ ನಿಂದ 17% ಸರ್ಕಾರಿ ನೌಕರರ ಮಧ್ಯಂತರ ವೇತನ ಹೆಚ್ಚಳವನ್ನು ಘೋಷಿಸಿದೆ. ಹೀಗಾಗಿ ಉಳಿದ 10.5% ವೇತನ ಹೆಚ್ಚಳವನ್ನು ಪ್ರಸ್ತುತ ಸಿದ್ದರಾಮಯ್ಯ ಅವರ ಸರ್ಕಾರ ಮಾಡಬೇಕಿದೆ.
ಆಗೋಗದ ವರದಿಯಲ್ಲಿ ಉಲ್ಲೇಖಿಸಿರುವಂತೆ ರಾಜ್ಯ ಸರ್ಕಾರಿ ನೌಕರರ ಮೂಲವೇತನವನ್ನು 17,000ರೂ ನಿಂದ 27,000ರೂ ವರೆಗೆ ಪರಿಷ್ಕರಿಸಲಾಗುವುದು. ಒಟ್ಟಾರೆ ಸರ್ಕಾರಿ ನೌಕರ ಪ್ರಸ್ತುತ ವೇತನದಲ್ಲಿ ಆಗಸ್ಟ್ 01 ರಿಂದ 27.5% ಏರಿಸಲಾಗುವುದು.
ಸಿದ್ದರಾಮಯ್ಯ ಅವರ ಸರ್ಕಾರದ ವೇತನ ಪರಿಷ್ಕರಣೆಯ ನಿರ್ಧಾರವನ್ನು ರಾಜ್ಯದ ಸರ್ಕಾರಿ ನೌಕರರು ಸ್ವಾಗತಿಸಿದ್ದು, ಸರ್ಕಾರಿ ನೌಕರರ ಬಹುದಿನಗಳ ಹೋರಾಟಕ್ಕೆ ಪ್ರತಿಫಲ ದೊರಕಿದಂತಾಗಿದೆ.