7ನೇ ರಾಜ್ಯ ವೇತನ ಆಯೋಗದ ವೇತನ ಪರಿಷ್ಕರಣೆಯ ಸಂಪೂರ್ಣ ಮಾಹಿತಿ: ಯಾರ್ಯಾರಿಗೆ ಎಷ್ಟು ವೇತನ ಹೆಚ್ಚಳ ಗೊತ್ತಾ
ಸ್ನೇಹಿತರೇ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆ ಬೇಡಿಕೆಗಳನ್ನು ಪರಿಷ್ಕರಿಸಲು ದಿನಾಂಕ 19-11-2022 ರಂದು 7ನೇ ರಾಜ್ಯ ವೇತನ ಆಯೋಗವನ್ನು ನೀವ್ರತ್ತ ಅಧಿಕಾರಿ ಡಾ ಸುಧಾಕರ್ ರಾವ್ ಅವರ ನೇತ್ರತ್ವದಲ್ಲಿ ರಚಿಸಿ, ಈ ಕುರಿತು ವರದಿ ಸಲ್ಲಿಕೆಗೆ ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.
ಅದರಂತೆ 7ನೇ ವೇತನ ಆಯೋಗವು ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡಿ 24-03-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವರದಿ ಸಲ್ಲಿಸಿರುತ್ತದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರ ವೇತನವನ್ನು 27.7% ಹೆಚ್ಚಳ ಮಾಡಬೇಕಾಗಿರುತ್ತದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತ್ರತ್ವದಲ್ಲಿ ಸರ್ಕಾರಿ ನೌಕರರಿಗೆ 17% ಮಧ್ಯಂತರ ವೇತನ ಹೆಚ್ಚಳಕ್ಕೆ ಆದೇಶ ನೀಡಿದಾಗಿದ್ದು, ಸಿದ್ದರಾಮಯ್ಯ ಅವರ ಸರ್ಕಾರ ಉಳಿದ 10.5% ಅಂಕಗಳ ವೇತನ ಹೆಚ್ಚಳವನ್ನು ಮಾಡಬೇಕಾಗಿರುತ್ತದೆ.
ಹೌದು ದಿನಾಂಕ 15-07-2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ವೇತನ ಹೆಚ್ಚಳ ಕುರಿತು ಶುಭ ಸುದ್ದಿ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ವಿಧಾನ ಸಭೆಯ ಭಾಷಣದಲ್ಲಿ ಈ ರೀತಿ ಹೇಳಿದ್ದಾರೆ.
ತುಟಿ ಭತ್ಯೆ, ಪಿಟ್ಮೆಂಟ್ ಮತ್ತು ಮನೆ ಬಾಡಿಗೆ ಭತ್ಯೆಯಲ್ಲಿ ಹೆಚ್ಚಳ
ದಿನಾಂಕ 1-08-2024 ರಿಂದ ಸರ್ಕಾರಿ ನೌಕರರ ಮೂಲ ವೇತನಕ್ಕೆ 31% ತುಟಿ ಭತ್ಯೆ ಮತ್ತು 27.50% ರಷ್ಟು ಫಿಟ್ಮೆಂಟ್ ಸೇರಿಸಿ ವೇತನ ಮತ್ತು ಪಿಂಚನಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚನಿಯಲ್ಲಿ 58.50% ರಷ್ಟು ಹೆಚ್ಚಳವಾಗಲಿದೆ ಮತ್ತು ಮನೆ ಬಾಡಿಗೆ ಭತ್ಯೆಯಲ್ಲಿ 32% ಹೆಚ್ಚಳವಾಗಲಿದೆ ಅಂತ ತಿಳಿಸಿದರು.
ಪಿಂಚಣಿಯಲ್ಲಿ ಹೆಚ್ಚಳ
ಹೆಚ್ಚುವರಿಯಾಗಿ ಸರ್ಕಾರಿ ನೌಕರರ ಕನಿಷ್ಠ ವೇತನ ರೂ. 17,000 ದಿಂದ ರೂ. 27,000 ರವರೆಗೆ ಮತ್ತು ಗರಿಷ್ಠ ವೇತನವು ರೂ 1,50,600 ದಿಂದ ರೂ 2,40,200 ರಷ್ಟು ಪರಿಷ್ಕರಿಸಲಾಗುವುದು. ಇದರ ಜೊತೆಗೆ ಸರ್ಕಾರಿ ನೌಕರ ಕನಿಷ್ಠ ಪಿಂಚಣಿಯು ರೂ 8,500 ರಿಂದ ರೂ. 13,500ಕ್ಕೆ ಮತ್ತು ಗರಿಷ್ಠ ಪಿಂಚಣಿಯು ರೂ 75,300 ರಿಂದ ರೂ 1,20,600 ಕ್ಕೆ ಪರಿಸ್ಕರಣೆ ಆಗುವುದು.
7ನೇ ವೇತನ ಆಯೋಗದ ವೇತನ ಪರಿಷ್ಕರಣೆಯು ಅನುದಾನಿತ ಶಿಕ್ಷಣ ಸಂತೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವ ವಿದ್ಯಾಲಯಗಳ ಭೋದಕೇತರ ಸಿಬ್ಬಂದಿ ವರ್ಗಕ್ಕೂ ಅನ್ವಯವಾಗಲಿದೆ. ಸರ್ಕಾರಿ ನೌಕರರ ಈ ವೇತನ ಪರಿಷ್ಕರಣೆಯನ್ನು ಪೂರೈಸಲು ವಾರ್ಷಿಕ ರೂ. 20,208 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಇದನ್ನು ಭರಿಸಲಿದೆ. ಇದರಿಂದ 7 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಸಿಹಿಸುದ್ದಿ ದೊರಕಿದೆ ಅಂತ ಹೇಳಬಹುದು.