ಎನ್‌ಪಿ‌ಸಿ‌ಐ‌ಎಲ್ ನೇಮಕಾತಿ 2024: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಎನ್‌ಪಿ‌ಸಿ‌ಐ‌ಎಲ್ ನೇಮಕಾತಿ 2024: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸ್ನೇಹಿತರೇ ನ್ಯೂಕ್ಲಿಯರ್ ಪವರ್ ಕೊರ್ಪರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಸಂಸ್ಥೆಯಲ್ಲಿ ಖಾಲಿ ಇರುವ ಸ್ಟಿಪೆಂಡಿಯರಿ ಟ್ರೈನಿ ಮತ್ತು ನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಎನ್‌ಪಿ‌ಸಿ‌ಐ‌ಎಲ್ ಸಂಸ್ಥೆಯು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದ್ದು, ಉದ್ಯೋಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಂತಾಗಿದೆ. ನೇಮಕಾತಿಗೆ ಸಂಬಂದಿತ ಅಭ್ಯರ್ಥಿಗಳ ವಿದ್ಯಾರ್ಹತೆ, ವೇತನ, ಅರ್ಜಿಶುಲ್ಕ ಇನ್ನಿತರ ಹೆಚ್ಚುವರಿ ಅಂಶಗಳ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದ್ದು, ತಪ್ಪದೆ ಲೇಖನವನ್ನು ಪೂರ್ತಿಯಾಗಿ ಓದಿರಿ

ಎನ್‌ಪಿ‌ಸಿ‌ಐ‌ಎಲ್ ನೇಮಕಾತಿ 2024 ಹುದ್ದೆಗಳ ವಿವರ

ಎನ್‌ಪಿ‌ಸಿ‌ಐ‌ಎಲ್ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಈ ಕುರಿತು ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.

  • ಸ್ಟಿಪೆಂಡಿಯರಿ ಟ್ರೈನಿ / ಸೈಟಿಫಿಕ್ ಅಸಿಸ್ಟೆಂಟ್ : 12 ಹುದ್ದೆಗಳು
  • ಸೈಟಿಫಿಕ್ ಅಸಿಸ್ಟೆಂಟ್/ (ಎಸ್‌ಟಿ/ಟಿ‌ಎನ್): 60 ಹುದ್ದೆಗಳು
  • ನರ್ಸ್ ಏ: 01 ಹುದ್ದೆ
  • ಎಕ್ಸ್-ರೇ ಟೆಕ್ನಿಶಿಯನ್: 01 ಹುದ್ದೆ

ಎನ್‌ಪಿ‌ಸಿ‌ಐ‌ಎಲ್ ವಿದ್ಯಾರ್ಹತೆ

  • ಸ್ಟಿಪೆಂಡಿಯರಿ ಟ್ರೈನಿ / ಸೈಟಿಫಿಕ್ ಅಸಿಸ್ಟೆಂಟ್ ಮತ್ತು ನರ್ಸ್ ಏ ಹುದ್ದೆಗಳಿಗೆ 12 ನೇ ತರಗತಿ, ಡಿಪ್ಲೋಮಾ ಅಥವಾ ಬಿ‌ಎಸ್‌ಸಿ ಪದವಿಯನ್ನು ಪೂರ್ಣಗೊಳಿಸಿರಬೇಕು
  • ಸೈಟಿಫಿಕ್ ಅಸಿಸ್ಟೆಂಟ್/ (ಎಸ್‌ಟಿ/ಟಿ‌ಎನ್) ಮತ್ತು ಎಕ್ಸ್-ರೇ ಟೆಕ್ನಿಶಿಯನ್ ಹುದ್ದೆಗಳಿಗೆ 10ನೇ ತರಗತಿ, ಐ‌ಟಿ‌ಐ ಅಥವಾ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು

ಎನ್‌ಪಿ‌ಸಿ‌ಐ‌ಎಲ್ ವಯೋಮಿತಿ

  • ಸ್ಟಿಪೆಂಡಿಯರಿ ಟ್ರೈನಿ / ಸೈಟಿಫಿಕ್ ಅಸಿಸ್ಟೆಂಟ್ ಮತ್ತು ಎಕ್ಸ್-ರೇ ಟೆಕ್ನಿಶಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿಯು 25 ವರ್ಷ.
  • ಸೈಟಿಫಿಕ್ ಅಸಿಸ್ಟೆಂಟ್/ (ಎಸ್‌ಟಿ/ಟಿ‌ಎನ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿಯು 24 ವರ್ಷ.
  • ನರ್ಸ್ ಏ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿಯು 30 ವರ್ಷ.
  • ವಯೋ ಸಡಲಿಕೆ: ಎನ್‌ಪಿ‌ಸಿ‌ಐ‌ಎಲ್ ನಿಯಮಾವಳಿಗಳ ಪ್ರಕಾರ ನೇಮಕಾತಿಯಲ್ಲಿ ಮೀಸಲಾತಿ ವರ್ಗಗಳಿಗೆ ವಯೋಸಡಳಿಕೆ ನೀಡಲಾಗಿದ್ದು ಓ‌ಬಿ‌ಸಿ ಅಭ್ಯರ್ಥಿಗಳಿಗೆ 03 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 05 ವರ್ಷ ವಯೋಸಡಲಿಕೆ ನೀಡಲಾಗಿದೆ.

ಅರ್ಜಿಶುಲ್ಕ

  • ಸೈಟಿಫಿಕ್ ಅಸಿಸ್ಟೆಂಟ್/ (ಎಸ್‌ಟಿ/ಟಿ‌ಎನ್) ಮತ್ತು ನರ್ಸ್ ಏ ಹುದ್ದೆಯ ಅರ್ಜಿ ಸಲ್ಲಿಕೆಗೆ ಅರ್ಜಿಶುಲ್ಕವು ರೂ. 150
  • ಸ್ಟಿಪೆಂಡಿಯರಿ ಟ್ರೈನಿ / ಸೈಟಿಫಿಕ್ ಅಸಿಸ್ಟೆಂಟ್ ಮತ್ತು ಎಕ್ಸ್-ರೇ ಟೆಕ್ನಿಶಿಯನ್ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಅರ್ಜಿಶುಲ್ಕವು ರೂ. 100
  • ಪಿ‌ಡಬಲ್ಯು‌ಬಿ‌ಡಿ/ ಎಕ್ಸ್ ಸೇರ್ವಿಸ್ ಮ್ಯಾನ್/ಮಹಿಳೆಯರು/ಎಸ್‌ಸಿ/ಎಸ್‌ಟಿ/ಎನ್‌ಪಿ‌ಸಿ‌ಐ‌ಎಲ್ ನೌಕರರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ವೇತನ

  • ಸ್ಟಿಪೆಂಡಿಯರಿ ಟ್ರೈನಿ / ಸೈಟಿಫಿಕ್ ಅಸಿಸ್ಟೆಂಟ್ : ರೂ 24,000-53,100
  • ಸೈಟಿಫಿಕ್ ಅಸಿಸ್ಟೆಂಟ್/ (ಎಸ್‌ಟಿ/ಟಿ‌ಎನ್): ರೂ. 20,000-32,550
  • ನರ್ಸ್ ಏ: ರೂ. 44,900-67,350
  • ಎಕ್ಸ್-ರೇ ಟೆಕ್ನಿಶಿಯನ್: ರೂ 25,500-38,250

ಪರೀಕ್ಷೆಯ ಮಾದರಿ

ಅಭ್ಯರ್ಥಿಗಳಿಗೆ OMR ಆಧಾರಿತ ಅಥವಾ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ 50 ಬಹು ಆಯ್ಕೆ ಪ್ರಶ್ನೆಗಳಿದ್ದು, ಪ್ರತಿಯೊಂದು ಪ್ರಶ್ನೆಗೆ ನಾಲ್ಕು ಉತ್ತರಗಳ ಆಯ್ಕೆ ನೀಡಲಾಗುತ್ತದೆ. ಸರಿಯಾದ ಉತ್ತರಗಳಿಗೆ 3 ಅಂಕಗಳು ನೀಡಲಾಗುತ್ತವೆ, ಮತ್ತು ತಪ್ಪಾದ ಉತ್ತರಗಳಿಗೆ 1 ಅಂಕದ ಕಡಿತವಾಗುತ್ತದೆ.

ಆಯ್ಕೆ ಪ್ರಕ್ರಿಯೆ

  • OMR ಆಧಾರಿತ ಅಥವಾ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ/ಶಾರೀರಿಕ ಪ್ರಮಾಣನದ ಪರೀಕ್ಷೆಗೆ ಒಳಪಡಿಸಲಾಗುವುದು.
  • ವೈಯಕ್ತಿಕ ಸಂದರ್ಶನ/ಕೌಶಲ್ಯ ಪರೀಕ್ಷೆ: ದಾಖಲೆ ಪರಿಶೀಲನೆ/ಶಾರೀರಿಕ ಪ್ರಮಾಣನದ ಪರೀಕ್ಷೆಗೆ ಒಳಪಟ್ಟ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ವೈಯಕ್ತಿಕ ಸಂದರ್ಶನ/ಕೌಶಲ್ಯ ಪರೀಕ್ಷೆಯನ್ನು ನಡೆಸಿ ಅಂತಿಮ ಆಯ್ಕೆಯನ್ನು ಮಾಡಲಾಗುವು

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: 16-17-2024
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 05-08-2024

ಅರ್ಜಿ ಸಲ್ಲಿಕೆಗೆ ಅಧಿಕ್ರತ ಲಿಂಕ್

ಇಲ್ಲಿ ಒತ್ತಿ

Leave a Comment