ಯುವನಿಧಿ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ
ಸ್ನೇಹಿತರೇ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯು (Yuvanidhi Scheme) ಸಹ ಒಂದು. ರಾಜ್ಯ ಸರ್ಕಾರವು ಯುವನಿಧಿ ಯೋಜನೆಯ ಮುಖಾಂತರ ಡಿಪ್ಲೋಮಾ ಮತ್ತು ಡಿಗ್ರಿ ಪದವಿ ಪೂರ್ಣಗೊಳಿಸಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು 2 ವರ್ಷಗಳವರೆಗೆ ಮಾಸಿಕ ಆರ್ಥಿಕ ನೆರವನ್ನು (stipend) ನೀಡುತ್ತದೆ.
- ಡಿಗ್ರಿ ಪೂರ್ಣಗೊಳಿಸಿ ಅಭ್ಯರ್ಥಿಯು ಉದ್ಯೋಗ ನಿರತರಾಗಿದ್ದಾರೆ ಅಂತಹ ಅಭ್ಯರ್ಥಿಗಳು ಮಾಸಿಕ 3,000 ರೂ ಪಡೆಯಲು ಅರ್ಹರಾಗಿರುತ್ತಾರೆ.
- ಡಿಪ್ಲೋಮಾ ಪೂರ್ಣಗೊಳಿಸಿ ಅಭ್ಯರ್ಥಿಯು ಉದ್ಯೋಗ ನಿರತರಾಗಿದ್ದಾರೆ ಅಂತಹ ಅಭ್ಯರ್ಥಿಗಳು ಮಾಸಿಕ 1,500 ರೂ ಪಡೆಯಲು ಅರ್ಹರಾಗಿರುತ್ತಾರೆ.
ಹೌದು ಈಗಾಗಲೇ ರಾಜ್ಯ ಸರ್ಕಾರ ಡಿಗ್ರಿ ಮತ್ತು ಡಿಪ್ಲೋಮಾ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಆರಂಭಗೊಳಿಸಿದ್ದು, ಅರ್ಹ ಅಭ್ಯರ್ಥಿಗಳು ಸ್ಟಿಪೆಂಡ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಜನವರಿ 12, 2024 ರಂದು ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ಸಾಕಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಮಾಡಿದ್ದು, ಯುವನಿಧಿ ಯೋಜನೆಯ ಅಡಿಯಲ್ಲಿ ಹಣ ಬರುತ್ತದೋ ಅಥವಾ ಇಲ್ಲವೋ ಅನ್ನುವುದು ಗೊಂದಲ ಇರುತ್ತದೆ. ಒಮ್ಮೆ ನೀವು ಅರ್ಜಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರ ನಿಮ್ಮ ಅರ್ಜಿಯನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆ ನಡೆಸಿ ಖಾತೆಗೆ ಹಣ ಜಮೆ ಮಾಡಲು 6 ತಿಂಗಳ ಸಮಯವನ್ನು ತೆಗೆದುಕೊಳ್ಳುತ್ತದೆ.
ಮೊದಲಿಗೆ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ತಾಂತ್ರಿಕ ದೋಷಗಳ ಕಾರಣದಿಂದ ಸಾಕಷ್ಟು ತೊಂದರೆಯಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ದಿನಾಂಕ 20-2-2024 ರಂದು ಯುವನಿಧಿ ಯೋಜನೆಯ ವಿಶೇಷ ಲಿಂಕ್ ಬಿಡುಗಡೆ ಮಾಡಿದ್ದು, ಇಂದು ಅಭ್ಯರ್ಥಿಗಳು ತಮ್ಮ ಯುವನಿಧಿ ಯೋಜನೆ ಅರ್ಜಿಯ ಸ್ಟೇಟಸ್ ಅನ್ನು ತುಂಬಾ ಸರಳವಾಗಿ ಸೇವಾ ಸಿಂಧು ಪೋರ್ಟಲ್ (Seva Sindhu Portal) ಮುಖಾಂತರ ಪರಿಶೀಲಿಸಬಹುದಾಗಿದೆ.
ಯುವನಿಧಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ವಿಧಾನ
- ಸ್ನೇಹಿತರೇ, ಮೊದಲಿಗೆ ಇಲ್ಲಿ ನೀಡಿರುವ ಅಧಿಕ್ರತ ಸೇವ ಸಿಂಧು ಅಧಿಕ್ರತ ಪೋರ್ಟಲ್ ಗೆ (sevasindhuservices.karnataka.gov.in) ಭೇಟಿ ನೀಡಿ ನಿಮ್ಮ ಲಾಗಿನ್ ಐಡಿ ಮುಖಾಂತರ ಲಾಗಿನ್ ಆಗಿ.
- ನಂತರ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯ ಎಡಭಾಗದ ಮೆನುವಿನಲ್ಲಿ ‘ಅಪ್ಲೈ ಫಾರ್ ಆಲ್ ಸೆರ್ವಿಸಸ್’ (apply for all services) ಆಯ್ಕೆಯು ಕಾಣುವುದು ಅದರ ಮೇಲೆ ಒತ್ತಿದ ಬಳಿಕ ಕೆಳಗೆ ‘ವಿವ್ ಆಲ್ ಅವೈಲೆಬಲ್ ಸೆರ್ವಿಸಸ್’ ( view all available services) ಆಯ್ಕೆಯು ಪ್ರದರ್ಶನ ವಾಗುವುದು ಆದರ ಮೇಲೆ ಒತ್ತಿರಿ.
- ಈವಾಗ ಸರ್ಚ್ ಬಾರ್ ಅಲ್ಲಿ ‘ಯುವನಿಧಿ ಅರ್ಜಿ ಸ್ಥಿತಿ ಪರಿಶೀಲನೆ’ (Yuvanidhi Application Status Check) ಆಯ್ಕೆಯನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
- ಸ್ನೇಹಿತರೇ ಈವಾಗ ನೀವು ಯುವನಿಧಿ ಅರ್ಜಿ ಸಲ್ಲಿಸುವ ವೇಳೆ ಪಡೆದಿರುವ ನೋಂದಣಿ ಅರ್ಜಿ ಉಲ್ಲೇಖ ಸಂಖ್ಯೆ (yuvanidhi registration application reference number) ಮತ್ತು ತಿಂಗಳನ್ನು ನಮೂದಿಸಿ.
- ಕೊನೆಯಲ್ಲಿ ‘ಕ್ಲಿಕ್ ಹಿಯರ್ ಟು ಗೆಟ್ ಪೆಮೆಂಟ್ ಡೀಟೆಲ್ಸ್’ ಆಯ್ಕೆಯ ಮೇಲೆ ಒತ್ತಿ
ಈ ಮೇಲಿನ ಎಲ್ಲ ಹಂತಗಳನ್ನು ನೀವು ತಪ್ಪದೆ ಅನುಸರಿಸಿದ್ದಲ್ಲಿ ನಿಮಗೆ ನಿಮ್ಮ ಯುವನಿಧಿ ಯೋಜನೆಯ ಅರ್ಜಿ ಸ್ಟೇಟಸ್ ಪ್ರದರ್ಶನ ವಾಗುವುದು.
ಹಣ ಬರದೇ ಇರುವುದಕ್ಕೆ ಕಾರಣ
ಒಂದು ವೇಳೆ ನಿಮ್ಮ ಯುವ ನಿಧಿ ಹಣವನ್ನು ನೀವು ಈವರೆಗೆ ಸ್ವೀಕರಿಸದಿದ್ದರೆ, ಇದಕ್ಕೆ ಕಾರಣ, ಸಂಬಂಧಿಸಿದ DDPI ಅಥವಾ ರಿಜಿಸ್ಟ್ರಾರ್ ನಿಂದ ಅರ್ಜಿಯ ಅನುಮೋದನೆ ಇನ್ನೂ ಬಾಕಿ ಉಳಿದಿರಬಹುದು, ಅಥವಾ ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ (DBT) ಗೆ ಪಾವತಿಯನ್ನು(payment) ಪ್ರಕ್ರಿಯೆಗೊಳಿಸಲಾಗಿಲ್ಲ ಎಂದು ಅರ್ಥೈಸಬೇಕು.