ಫಾಸ್ಟ್ಯಾಗ್ ಹೊಸ ನಿಯಮ: ಈ ನಿಯಮ ಪಾಲಿಸದೆ ಇದ್ದರೆ ಡಬಲ್ ಟೋಲ್ ಶುಲ್ಕ ಭರಿಸಬೇಕಾಗುತ್ತದೆ ಹುಷಾರ್!
ಸ್ನೇಹಿತರೇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವು (NHAI) ಟೋಲ್ ಪ್ಲಾಜಾಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಂಭವನೀಯ ನಷ್ಟವನ್ನು ತಪ್ಪಿಸಲು ಹೊಸ ಫಾಸ್ಟ್ಯಾಗ್ ನಿಯಮಗಳ ಆದೇಶಕ್ಕೆ ಕರೆ ನೀಡಿದೆ. ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಸಂಸ್ಥೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎನ್‌ಎಚ್‌ಎಮ್‌ಸಿಎಲ್ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ
ಹೊಸ ಫಾಸ್ಟ್ಯಾಗ್ ಹೊಸ ನಿಯಮ
ಹೌದು, ನಿವೇನಾದರೂ ಫಾಸ್ಟ್ಯಾಗ್ ಹೊಂದಿದ್ದರೆ ಅದನ್ನು ನಿಮ್ಮ ವಾಹನದ ವಿಂಡ್ ಶೀಲ್ಡ್ ಮೇಲೆ ಅಂಟಿಸುವುದು ಇನ್ನುಮುಂದೆ ಕಡ್ಡಾಯವಾಗಿದೆ. ಚಾಲಕರು ಇದನ್ನು ಮಾಡಲು ವಿಫಲರಾದರೆ, ಫಾಸ್ಟ್ಯಾಗ್ ಹೊಂದಿದ್ದರು ಡಬಲ್ ಟೋಲ್ ಶುಲ್ಕವನ್ನು ಭರಿಸಬೇಕಾಗುತ್ತದೆ. ಈ ಕ್ರಮವನ್ನು ರಾಷ್ಟೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್ ಅನ್ನು ವಿಂಡ್ ಶೀಲ್ಡ್ ಮೇಲೆ ಇಡದೆ ಟೋಲ್ ಪಾವತಿಸಲು ತಪ್ಪಿಸುವ ಪ್ರಯತ್ನವನ್ನು ತಡೆಯಲು ಜಾರಿಗೊಳಿಸಿರುವುದಾಗಿದೆ.
ಈ ನಿಯಮದ ಅಗತ್ಯತೆ
ಸ್ನೇಹಿತರೇ ದೇಶದ ಪ್ರಮುಖ ಎಕ್ಸ್ಪ್ರೆಸ್ ವೇ ಮತ್ತು ಗ್ರೀನ್ ಫೀಲ್ಡ್ ಹೆದ್ದಾರಿಗಳಂತಹ ಪ್ರಮುಖ ಮಾರ್ಗಗಳಲ್ಲಿ ವಾಹನ ಚಾಲಕರು ಟೋಲ್ ಶುಲ್ಕವನ್ನು ತಪ್ಪಿಸಲು ಪ್ರಯತ್ನಿಸುವ ಘಟನೆಗಳು ಬೆಳಕಿಗೆ ಬಂದಿವೆ. ಕಾನೂನಾತ್ಮಕವಾಗಿ ತಮ್ಮಲ್ಲಿರುವ ಫಾಸ್ಟ್ಯಾಗ್ ಅನ್ನು ತೋರಿಸುವ ಬದಲು ಜೇಬಿನಲ್ಲಿಟ್ಟುಕೊಳ್ಳುತ್ತಾರೆ. ಈ ಪ್ರಕ್ರಿಯೆಯು ಟೋಲ್ ಸಂಗ್ರಹಣಾ ವ್ಯವಸ್ಥೆಯ ಆದಾಯ ನಷ್ಟಕ್ಕೆ ಕಾರಣವಾಗಿದೆ.
ಡಬಲ್ ಟೋಲ್ ಶುಲ್ಕ
ಎನ್‌ಎಚ್‌ಎಮ್‌ಸಿಎಲ್ ಪ್ರಕಟಗೊಳಿಸಿರುವ ಸುತ್ತೋಲೆ ಪ್ರಕಾರ ಫಾಸ್ಟ್ಯಾಗ್ ಲೇನ್ ಮೇಲೆ ಪ್ರವೇಶಿಸುವ ಯಾವುದೇ ವಾಹನಕ್ಕೆ, ವಿಂಡ್ ಶೀಲ್ಡ್ ಮೇಲೆ ಫಾಸ್ಟ್ಯಾಗ್ ಇಲ್ಲದೆ ಹೋದರೆ ದಂಡ ಶುಲ್ಕವನ್ನು ದ್ವಿಗುಣಗೊಳಿಸಲಾಗುವುದು.
ಫಾಸ್ಟ್ಯಾಗ್ ಸರಿಯಾಗಿ ಬಳಕೆ ಮಾಡುವುದರಿಂದ ಆಗುವ ಲಾಭಗಳು
ನಿಮ್ಮ ಕಾರಿನ ವಿಂಡ್ ಶೀಲ್ಡ್ ಮೇಲೆ ಫಾಸ್ಟ್ಯಾಗ್ ಅಳವಡಿಸುವುದರಿಂದ ಆಗುವ ಪ್ರಯೋಜನಗಳೆಂದರೆ,
- ನಿಮ್ಮ ವಾಹನ ಟೋಲ್ ಬಳಿ ಬಂದಾಗ ಫಾಸ್ಟ್ಯಾಗ್ ಅನ್ನು ಸ್ಕ್ಯಾನರ್ ಸ್ವಯಂಚಾಲಿತವಾಗಿ ಓದಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಇದರಿಂದ ಟೋಲ್ ತೆರಿಗೆ ಕಡಿತವಾಗುತ್ತದೆ.
- ವಿಂಡ್ ಶೀಲ್ಡ್ ಮೇಲೆ ಫಾಸ್ಟ್ಯಾಗ್ ಅಳವಡಿಸುವುದರಿಂದ ಟ್ರಾಫಿಕ್ ದಟ್ಟಣೆಯನ್ನು ತಡೆಯಬಹುದು.
ಸರಿಯಾದ ಫಾಸ್ಟ್ಯಾಗ್ ಅಳವಡಿಕೆಗೆ ಸಲಹೆಗಳು
- ಫಾಸ್ಟ್ಯಾಗ್ ಅನ್ನು ವಿಂಡ್ ಶೀಲ್ಡ್ ಮುಂಭಾಗದಲ್ಲಿ ಅಳವಡಿಸುವುದರಿಂದ ಸ್ಕ್ಯಾನರ್ ಉಪಕರಣಗಳು ಅದನ್ನು ಸುಲಭವಾಗಿ ಓದಲು ಸಹಾಯಕಾರಿಯಾಗುತ್ತದೆ.
- ಫಾಸ್ಟ್ಯಾಗ್ ವಿಂಡ್ ಶೀಲ್ಡ್ ನ ಮೇಲೆ ಯಾವುದೇ ಟಿಂಟ್ ಅಥವಾ ಸ್ಟಿಕ್ಕರ್ ಗಳಿಂದ ಆಡ್ಡಿಯಾಗದಂತೆ ನೋಡಿಕೊಳ್ಳಿ.
ಸ್ನೇಹಿತರೇ, ಟೋಲ್ ಸಂಗ್ರಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಹೊಸ ನಿಯಮವನ್ನು ಘೋಷಿಸಿದ್ದು, ಫಾಸ್ಟ್ಯಾಗ್ ನ ಹೊಸ ನಿಯಮಗಳು ವಾಹನ ಚಾಲಕರು ಪಾಲಿಸದೆ ಇದ್ದರೆ ಡಬಲ್ ಟೋಲ್ ಶುಲ್ಕದ ಜೊತೆಗೆ ಸಂಸ್ಥೆಯು ಇನ್ನಷ್ಟು ಕಠಿಣ ಕಾನೂನು ಕ್ರಮಗಳನ್ನು ಅನುಸರಿಸಬಹುದು. ಹೀಗಾಗಿ ಈ ಹೊಸ ಮಾರ್ಗಸೂಚಿಯನ್ನು ಪಾಲಿಸುವುದು ಅಗತ್ಯ