ಎಸ್‌ಬಿಐ ಅಮೃತ ವೃಷ್ಟಿ ಯೋಜನೆ: ಇಲ್ಲಿದೆ ನೋಡಿ ಠೇವಣಿಯ ಮೇಲೆ ಆಕರ್ಷಕ ಬಡ್ಡಿದರ ನೀಡುವ ಎಸ್‌ಬಿ‌ಐ ಬ್ಯಾಂಕಿನ ಏಕೈಕ ಯೋಜನೆ

ಎಸ್‌ಬಿಐ ಅಮೃತ ವೃಷ್ಟಿ ಯೋಜನೆ: ಇಲ್ಲಿದೆ ನೋಡಿ ಠೇವಣಿಯ ಮೇಲೆ ಆಕರ್ಷಕ ಬಡ್ಡಿದರ ನೀಡುವ ಎಸ್‌ಬಿ‌ಐ ಬ್ಯಾಂಕಿನ ಏಕೈಕ ಯೋಜನೆ

ಸ್ನೇಹಿತರೇ ಎಸ್‌ಬಿ‌ಐ ಬ್ಯಾಂಕ್ ಹೊಸ ವಿಶೇಷ ಅವಧಿ ಠೇವಣಿ ಪ್ಲಾನ್ ಪರಿಚಯಿಸುವದರ ಮೂಲಕ ದೇಶದ ಎಲ್ಲ ನಾಗರಿಕರಿಗೆ ಸಿಹಿಸುದ್ದಿ ನೀಡಿದೆ. ಅದುವೇ ಅಮೃತ ವ್ರಷ್ಟಿ ಯೋಜನೆ (Amrita Vrishti scheme). ಹೌದು ಈ ವಿಶೇಷ ಅವಧಿ ಠೇವಣಿಯು ಸಾಮಾನ್ಯ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಆಕರ್ಷಕ ಮತ್ತು ಲಾಭದಾಯಕ ಬಡ್ಡಿದರವನ್ನು ನೀಡಲು ರೂಪಿತವಾಗಿರುತ್ತದೆ. ಹಾಗಾದರೆ ಎಸ್‌ಬಿ‌ಐ ಬ್ಯಾಂಕ್ ಮಾರ್ಚ್, 2024 ರಲ್ಲಿ ಪರಿಚಯಿಸಿದ ಅಮೃತ ವ್ರಷ್ಟಿ ಯೋಜನೆಯ ವಿಶೇಷತೆಗಳೇನು ಅಂತ ತಿಳಿಯೋನ ಬನ್ನಿ.

ಬಡ್ಡಿದರ

ಅಮೃತ ವ್ರಷ್ಟಿ ಯೋಜನೆಯ ಸಾಮಾನ್ಯ ನಾಗರಿಕರಿಗೆ ಮೂಲ ವಾರ್ಷಿಕ ಬಡ್ಡಿದರವು 7.25% ಆಗಿದ್ದು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 0.50% ನೀಡಲಾಗುತ್ತದೆ. ಒಟ್ಟಾರೆ ಹಿರಿಯ ನಾಗರಿಕರಿಗೆ ವಾರ್ಷಿಕ ಬಡ್ಡಿದರವು 7.75% ಆಗಿರುತ್ತದೆ.

ಠೇವಣಿ ಅವಧಿ

ಅಮೃತ ವ್ರಷ್ಟಿ ಯೋಜನೆಯು ಜುಲೈ 15,2024 ರಿಂದ ಮಾರ್ಚ್ 31, 2025 ರವರೆಗೆ ದೇಶದ ಎಲ್ಲ ನಾಗರಿಕರಿಗೆ ಠೇವಣಿ ಇಡಲು ಲಭ್ಯವಿದ್ದು, ನಿಶ್ಚಿತ ಠೇವಣಿಯ ಅವಧಿಯು 444 ದಿನಗಳು

ಠೇವಣಿಗಳ ಪ್ರಕಾರ:

  • ಸ್ಥಳೀಯ ಖಾತೆ ಠೇವಣಿಗಳು: ಭಾರತದಲ್ಲಿ ವಾಸಿಸುವ ವ್ಯಕ್ತಿಗಳು ಮಾಡಿದ ಠೇವಣಿಗಳು.
  • ಎನ್‌ಆರ್‌ಐ ರೂಪಾಯಿ ಠೇವಣಿಗಳು: ಭಾರತೀಯ ರೂಪಾಯಿಯಲ್ಲಿ ಎನ್‌ಆರ್‌ಐ (ಅಂತಾರಾಷ್ಟ್ರೀಯ ಭಾರತೀಯ) ಗಳಿಂದ ಮಾಡಿದ ಠೇವಣಿಗಳು.

ಠೇವಣಿಯ ಮಿತಿಯು:

  • ಈ ಯೋಜನೆಯ ಅಡಿಯಲ್ಲಿ ನೀವು 3 ಕೋಟಿಯ ವರೆಗೆ ಹೂಡಿಕೆ ಮಾಡಬಹುದು.
  • ಹೊಸ ಠೇವಣಿಗಳು: ನೀವು ಈ ಯೋಜನೆಯ ಅಡಿಯಲ್ಲಿ ಹೊಸ ಟರ್ಮ್ ಡೆಪಾಸೀಟ್ ತೆಗೆಯಬಹುದು ಅಥವಾ ನಿಮ್ಮ ಬಳಿ ಈಗಾಗಲೇ ಇರುವ ಟರ್ಮ್ ಡೆಪಾಸೀಟ್ ಅನ್ನು ಈ ಯೋಜನೆಯ ಅಡಿಯಲ್ಲಿ ಪುನರಾವರ್ತಿಸಬಹುದು.

ಈ ಯೋಜನೆ ಅಡಿಯಲ್ಲಿ ಈ ಕೆಳಗಿನ ಠೇವಣಿಗಳು ಒಳಗೊಂಡಿಲ್ಲ:

  • ರಿಕರಿಂಗ್ ಠೇವಣಿಗಳು: ನೀವು ನಿಯಮಿತ ಮಾಸಿಕ ಪಾವತಿಗಳನ್ನು ಮಾಡುವ ಠೇವಣಿಗಳು.
  • ಟಾಕ್ಸ್ ಸೇವಿಂಗ್ ಠೇವಣಿಗಳು: ತೆರಿಗೆ ಕಡಿತಕ್ಕಾಗಿ ವಿನ್ಯಾಸಗೊಳಿಸಿದ ಠೇವಣಿಗಳು.
  • ಅನ್ಯುಟಿ ಠೇವಣಿಗಳು: ನೀವು ಒಂದು ನಿರ್ದಿಷ್ಟ ಅವಧಿಗೆ ನಿಯಮಿತ ಪಾವತಿಗಳನ್ನು ನೀಡುವ ಠೇವಣಿಗಳು.

ಬಡ್ಡಿಪಾವತಿ

ಸಾಮಾನ್ಯ ಠೇವಣಿಗಳಿಗೆ ತಿಂಗಳ, ತ್ರೈಮಾಸಿಕ, ಅರ್ಧವಾರ್ಷಿಕ ಗಾಲಿನಲ್ಲಿ ಬಡ್ಡಿಯನ್ನು ಪಾವತಿಸಬಹುದಾಗಿದೆ.

ತುರ್ತು ಹಿಂಪಡೆಯುವ ನಿಯಮಗಳು:

ತುರ್ತು ಹಿಂಪಡೆಯುವ ದಂಡವು ನಿಮ್ಮ ಠೇವಣಿಯು 5 ಲಕ್ಷದವರೆಗೆ ಇದ್ದರೆ ಎಲ್ಲಾ ಅವಧಿಗೆ 0.50%ರಷ್ಟು ಆದರೆ ಠೇವಣಿಯು 5 ಲಕ್ಷದ ಮೇಲೆ ಮತ್ತು 3 ಕೋಟಿಯ ಒಳಗೆ ಇಲ್ಲದೆ ಎಲ್ಲಾ ಅವಧಿಗೆ 1%.ರಷ್ಟು ದಂಡ ಭರಿಸಬೇಕು. ದಂಡವನ್ನು ಕಡಿಮೆ ಮಾಡುವ ಅಥವಾ ತಪ್ಪಿಸಲು ಯಾವುದೇ ವಿನಾಯಿತಿ ಇಲ್ಲರುವುದಿಲ್ಲ.

ಹೂಡಿಕೆ ಚಾನೆಲ್‌ಗಳು:

ಹೂಡಿಕೆದಾರರು ಅಮೃತ ವೃಷ್ಟಿ ಯೋಜನೆಯಲ್ಲಿ ಹೂಡಿಕೆ ಮಾಡಲು ವಿವಿಧ ಚಾನೆಲ್‌ಗಳ ಬಳಕೆ ಮಾಡಬಹುದು ಅದರಲ್ಲಿ,

  • SBI ಶಾಖೆಗಳು
  • YONO SBI (ಮೊಬೈಲ್ ಬ್ಯಾಂಕಿಂಗ್ ಆಪ್)
  • YONO Lite (ಮೊಬೈಲ್ ಬ್ಯಾಂಕಿಂಗ್ ಆಪ್)
  • SBI ಇಂಟರ್ನೆಟ್ ಬ್ಯಾಂಕಿಂಗ್ (INB)

ಅರ್ಹತೆಗಳು

ಅಮೃತ ವೃಷ್ಟಿ ಯೋಜನೆಯ ಹೂಡಿಕೆಯು ದೇಶದ ಎಲ್ಲ ರಿಟೇಲ್ ಹೂಡಿಕೆದಾರರಿಗೆ ಮತ್ತು ಎನ್‌ಆರ್‌ಐ (NRI) ಗಳಿಗೆ ಮುಕ್ತವಾಗಿದ್ದು ಅನುಕೂಲಕ್ಕೆ ತಕ್ಕಂತೆ ಹೂಡಿಕೆದಾರರು ರೂ 3 ಕೋಟಿಗಳ ವರೆಗೆ ಠೇವಣಿ ಮಾಡಿಸಬಹುದಾಗಿದೆ.

ಅಮೃತ ವೃಷ್ಟಿ ಯೋಜನೆಯ ಲಾಭಗಳು

  • ಆಕರ್ಷಕ ಬಡ್ಡಿದರಗಳು ವಿಶೇಷವಾಗಿ ಹಿರಿಯ ನಾಗರಿಕರಿಗೆ 7.75% ಬಡ್ಡಿದರದ ಸೌಲಭ್ಯ
  • ಹೂಡಿಕೆದಾರರಿಗೆ ಬಡ್ಡಿದಾರ ಪಾವತಿಯ ಆಯ್ಕೆಗಳ ಸೌಕರ್ಯ

ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಾಗಿ ಆಸಕ್ತರು ಹತ್ತಿರದ ಎಸ್‌ಬಿ‌ಐ ಶಾಖೆಗೆ ಭೇಟಿ ನೀಡಿ ಅಥವಾ ಎಸ್‌ಬಿ‌ಐ ಎಸ್‌ಬಿಐ ಅಮೃತ ವೃಷ್ಟಿ ಯೋಜನೆಯ ಅಧಿಕ್ರತ ಲಿಂಕ್ ನೀಡಲಾಗಿದ್ದು ಅದರ ಮೇಲೆ ಒತ್ತಿ

Leave a Comment