ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಟ್ರೈನಿ ನೇಮಕಾತಿ 2024

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಟ್ರೈನಿ ನೇಮಕಾತಿ 2024

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)ಆಸಕ್ತ ಮತ್ತು ಅರ್ಹ ಅಭ್ಯರ್ತಿಗಳನ್ನು ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್) ಸ್ಥಾನಕ್ಕೆ ಭರ್ತಿ ಮಾಡಲು ಆದೇಶ ಹೊರಡಿಸಿದ್ದು, ಎಸ್‌ಏ‌ಐಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಉದ್ಯೋಕಾಂಕ್ಷಿಗಳು ಕೂಡಲೇ ಅರ್ಜಿ ಸಲ್ಲಿಸ ಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತಾದ್ಯಂತ SAIL ಘಟಕಗಳು ಮತ್ತು ಗಣಿ ಉದ್ಯಮಗಳ ವಿವಿಧ ಶಾಖೆಗಳಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗುವುದು.

ಸೇಲ್ (SAIL) ಪರಿಚಯ

SAIL ಭಾರತದ ಅತಿದೊಡ್ಡ ಉಕ್ಕು ತಯಾರಿಕಾ ಕಂಪನಿಗಳಲ್ಲಿ ಒಂದು. ದೇಶದ ಕೇಂದ್ರ ಸಾರ್ವಜನಿಕ ವಲಯ ಉದ್ಯಮಗಳಲ್ಲಿ ಪ್ರಮುಖ ಪಾತ್ರವಹಿಸಿದ್ದು ದೇಶದ ಆರ್ಥಿಕ ಬೆಳೆವಣಿಗೆಯಲ್ಲಿ ಸಹಾಯಕಾರಿಯಾಗಿದೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್) ನೇಮಕಾತಿ 2024 ಓವರ್ವೀವ್

  • ಸಂಸ್ಥೆ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)
  • ಹುದ್ದೆ: ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್)
  • ಗ್ರೇಡ್: E-1
  • ಒಟ್ಟು ಹುದ್ದೆಗಳು: 249
  • ಆನ್‌ಲೈನ್ ನೋಂದಣಿ ಪ್ರಾರಂಭ ದಿನಾಂಕ: 5 ಜುಲೈ 2024
  • ಆನ್‌ಲೈನ್ ನೋಂದಣಿ ಕೊನೆ ದಿನಾಂಕ: 25 ಜುಲೈ 2024

ಹುದ್ದೆಗಳ ವಿವರ

  • ಖೆಮಿಕಲ್: 10
  • ಸಿವಿಲ್: 21
  • ಕಂಪ್ಯೂಟರ್: 09
  • ಎಲೆಕ್ಟ್ರಿಕಲ್: 61
  • ಎಲೆಕ್ಟ್ರಾನಿಕ್ಸ್: 05
  • ಉಪಕರಣಗಳ ನಿಯಂತ್ರಣ: 11
  • ಯಾಂತ್ರಿಕ: 69
  • ಲೋಹಶಾಸ್ತ್ರ: 63

ವೇತನ

  • ಮೂಲ ವೇತನ ಶ್ರೇಣಿ: ₹50,000/- ಪ್ರತಿ ತಿಂಗಳು
  • ವೇತನ ಶ್ರೇಣಿ: ₹50,000 – 1,60,000/-
  • ತರಬೇತಿ ನಂತರ: ಸಹಾಯಕ ವ್ಯವಸ್ಥಾಪಕ E1 ಗ್ರೇಡ್ (₹60,000 – 1,80,000/-)

ವಯೋಮಿತಿ

  • ಸಾಮಾನ್ಯ ವರ್ಗ: 28 ವರ್ಷ
  • OBC (NCL): 31 ವರ್ಷ
  • SC/ST: 33 ವರ್ಷ
  • PwBD: 10 ವರ್ಷಗಳ ಹೆಚ್ಚುವರಿ ಸಡಿಲಿಕೆ
  • ಇಲಾಖಾ ಅಭ್ಯರ್ಥಿಗಳು: 45 ವರ್ಷ

ಶೈಕ್ಷಣಿಕ ಅರ್ಹತೆ

ಸಂಬಂಧಿತ ಇಂಜಿನಿಯರಿಂಗ್ ವಿಭಾಗಗಳಾದ ರಾಸಾಯನಿಕ, ನಾಗರಿಕ, ಕಂಪ್ಯೂಟರ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಉಪಕರಣಗಳ ನಿಯಂತ್ರಣ, ಯಾಂತ್ರಿಕ, ಲೋಹಶಾಸ್ತ್ರದಲ್ಲಿ 65% ಅಂಕಗಳೊಂದಿಗೆ (ಎಲ್ಲಾ ಸೆಮಿಸ್ಟರ್‌ಗಳ ಸರಾಸರಿ) ಇಂಜಿನಿಯರಿಂಗ್ ಪದವಿ (B.E.) ಪೂರ್ಣಗೊಳಿಸಬೇಕು

ಆಯ್ಕೆ ಪ್ರಕ್ರಿಯೆ

SAIL ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್) 2024 ಕ್ಕೆ ಆಯ್ಕೆ ಪ್ರಕ್ರಿಯೆಯು ಈ ಕೆಳಗಿಂದ ಹೊಂದ್ತಗಳಲ್ಲಿ ನಡೆಯಲಿದೆ:

  • GATE (ಗೇಟ್) 2024 ಪರೀಕ್ಷಾ ಅಂಕಗಳು
  • ಗುಂಪು ಚರ್ಚೆ
  • ಸಂದರ್ಶನ
  • ಬಯೋಮೆಟ್ರಿಕ್ ಪರಿಶೀಲನೆ

ಅರ್ಜಿ ಶುಲ್ಕ

  • UR/EWS/OBC: ₹700/-
  • SC/ST/PwBD/ಮಾಜಿ ಸೈನಿಕರು: ₹200/-
  • ಪಾವತಿ ವಿಧಾನ: ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್

ಹೇಗೆ ಅರ್ಜಿ ಸಲ್ಲಿಸಬೇಕು

  • ಅರ್ಹ ಅಭ್ಯರ್ಥಿಗಳು ಕೇವಲ SAIL ಕೇರಿಯರ್ ಪೇಜ್ sail.ucanapply.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
  • ಪ್ರಸ್ತುತ ಬಳಕೆಯಲ್ಲಿರುವ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯ ಮೂಳಕ ಲಾಗಿನ್ ಆಗಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಡಿಜಿಟಲ್ ಸ್ವರೂಪದಲ್ಲಿರುವ ಸಹಿಯ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ.
  • ಅರ್ಜಿ ಸಲ್ಲಿಸಿದ ನಂತರ ನೋಂದಣಿ ಸ್ಲಿಪ್/ಅರ್ಜಿಯನ್ನು ಡೌನ್‌ಲೋಡ್ ಮಾಡಿ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ನೊಂದಣಿ ಪ್ರಾರಂಭ ದಿನಾಂಕ: 5 ಜುಲೈ 2024
  • ಆನ್‌ಲೈನ್ ನೊಂದಣಿ ಕೊನೆ ದಿನಾಂಕ: 25 ಜುಲೈ 2024
  • ಗುಂಪು ಚರ್ಚೆ/ಸಂದರ್ಶನದ ದಿನಾಂಕ: ನಂತರ ತಿಳಿಸಲಾಗುವುದು. ನಿರಂತರ ಅಪ್ಡೇಟ್ ಪಡೆಯಲು ಸೇಲ್ ಅಧಿಕ್ರತ ಪೋರ್ಟಲ್ ಭೇಟಿ ನೀಡಿ

ಪ್ರಮುಖ ಲಿಂಕ್ ಗಳು

ಸೇಲ್ (SAIL) ಅಫೀಷಿಯಲ್ ನೋಟಿಫಿಕೇಶನ್: ಇಲ್ಲಿ ಒತ್ತಿ

ಸೇಲ್ (SAIL) ನೇಮಕಾತಿ ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ

ಅವಶ್ಯಕ ಪ್ರಶ್ನೆಗಳು (FAQs)

ಪ್ರಶ್ನೆ 1: SAIL ಮ್ಯಾನೇಜ್‌ಮೆಂಟ್ ಟ್ರೈನಿ (ಟೆಕ್ನಿಕಲ್) ಆಯ್ಕೆ ಪ್ರಕ್ರಿಯೆ ಹೇಗೆ?

ಉತ್ತರ: ಆಯ್ಕೆ ಪ್ರಕ್ರಿಯೆ GATE ಪರೀಕ್ಷಾ 2024 ಅಂಕಗಳು, ಗುಂಪು ಚರ್ಚೆ, ಸಂದರ್ಶನ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಒಳಗೊಂಡಿದೆ.

ಪ್ರಶ್ನೆ 2: ವಿವಿಧ ವರ್ಗಗಳ ವಯೋಮಿತಿಗಳು ಏನು?

ಉತ್ತರ: ಸಾಮಾನ್ಯ: 28 ವರ್ಷ, OBC (NCL): 31 ವರ್ಷ, SC/ST: 33 ವರ್ಷ, PwBD: ಹೆಚ್ಚುವರಿ 10 ವರ್ಷಗಳ ಸಡಿಲಿಕೆ, ಇನ್‌ಸ್ಟಿಟ್ಯೂಷನಲ್ ಅಭ್ಯರ್ಥಿಗಳು: 45 ವರ್ಷ.

ಪ್ರಶ್ನೆ 3: ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಉತ್ತರ: ಅರ್ಹ ಅಭ್ಯರ್ಥಿಗಳು SAIL ಕೇರಿಯರ್ ಪೇಜ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನವನ್ನು ಮೇಲಿನ ಲೇಖನದಲ್ಲಿ ನೀಡಲಾಗಿದ್ದು ಅದನ್ನು ಅನುಸರಿಸಿ.

Leave a Comment