ಸಾಗರ್ಮಾಲಾ ಡೆವಲಪ್ಮೆಂಟ್ ಕಂಪನಿ ನೇಮಕಾತಿ 2024: ಕೂಡಲೇ ಅರ್ಜಿ ಸಲ್ಲಿಸಿ

ಸಾಗರ್ಮಾಲಾ ಡೆವಲಪ್ಮೆಂಟ್ ಕಂಪನಿ ನೇಮಕಾತಿ 2024: ಕೂಡಲೇ ಅರ್ಜಿ ಸಲ್ಲಿಸಿ

ಸಾಗರ್ಮಾಲಾ ಡೆವಲಪ್ಮೆಂಟ್ ಕಂಪನಿಯು (SDCL) ಆಸಕ್ತ ಮತ್ತು ಅನುಭವ ಹೊಂದಿರುವ ವೃತ್ತಿಪರರಿಂದ ಜನರಲ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್ ಮತ್ತು ಎಕ್ಸ್‌ಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಕೂಡಲೆ ನೇಮಕಾತಿಗೆ ಸಂಬಂದಿತ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಒಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 2, 2024 ಆಗಿದ್ದು ನಿಗದಿತ ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿ ಸಲ್ಲಿಸಿ.

SDCL ನೇಮಕಾತಿ 2024

  • ಸಂಸ್ಥೆ: ಸಾಗರ್ಮಾಲಾ ಡೆವಲಪ್ಮೆಂಟ್ ಕಂಪನಿಯು (SDCL)
  • ವೆಬ್ಸೈಟ್: www.sdclindia.com
  • ಒಟ್ಟು ಖಾಲಿ ಹುದ್ದೆಗಳು: 07
  • ಅರ್ಜಿಯ ಸಲ್ಲಿಕೆಯ ಕೊನೆಯ ದಿನಾಂಕ: 2nd ಆಗಸ್ಟ್ 2024

SDCL ನೇಮಕಾತಿ 2024 ರ ಹುದ್ದೆ ವಿವರಗಳು

  • ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್ಸ್): 01 ಹುದ್ದೆ
  • ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು): 02 ಹುದ್ದೆಗಳು
  • ಮ್ಯಾನೇಜರ್ (ಪ್ರಾಜೆಕ್ಟ್ಸ್): 01 ಹುದ್ದೆ
  • ಅಸಿಸ್ಟಂಟ್ ಮ್ಯಾನೇಜರ್ (ಪ್ರಾಜೆಕ್ಟ್ಸ್): 01 ಹುದ್ದೆ
  • ಎಕ್ಸ್‌ಕ್ಯೂಟಿವ್ (ಪ್ರಾಜೆಕ್ಟ್ಸ್): 02 ಹುದ್ದೆಗಳು

SDCL ನೇಮಕಾತಿ 2024 ವಯೋಮಿತಿ

  • ಜನರಲ್ ಮ್ಯಾನೇಜರ್: 50 ವರ್ಷ
  • ಮ್ಯಾನೇಜರ್: 40 ವರ್ಷ
  • ಅಸಿಸ್ಟಂಟ್ ಮ್ಯಾನೇಜರ್: 35 ವರ್ಷ
  • ಎಕ್ಸ್‌ಕ್ಯೂಟಿವ್: 30 ವರ್ಷ

SDCL ನೇಮಕಾತಿ 2024 ವೇತನ ಶ್ರೇಣಿ

  • ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು): E-8 ₹ 1,20,000 – ₹ 2,80,000/-
  • ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು): E-2 ₹ 50,000 – ₹ 1,60,000/-
  • ಮ್ಯಾನೇಜರ್ (ಪ್ರಾಜೆಕ್ಟ್ಸ್): E-4 ₹ 70,000 – ₹ 2,00,000/-
  • ಅಸಿಸ್ಟಂಟ್ ಮ್ಯಾನೇಜರ್ (ಪ್ರಾಜೆಕ್ಟ್ಸ್): E-2 ₹ 50,000 – ₹ 1,60,000/-
  • ಎಕ್ಸ್‌ಕ್ಯೂಟಿವ್ (ಪ್ರಾಜೆಕ್ಟ್ಸ್): E-1 ₹ 40,000 – ₹ 1,40,000/-

SDCL ನೇಮಕಾತಿ 2024 ರ ಅರ್ಹತಾ ಮಾನದಂಡಗಳು

1) ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು)

  • ವಿದ್ಯಾರ್ಹತೆ: CA/ICWA/MBA (ಫೈನಾನ್ಸ್)
  • ಅನುಭವ: ಸಂಬಂಧಿತ ಪ್ರದೇಶದಲ್ಲಿ ಕಾರ್ಯನಿರ್ವಹಣಾ ಶ್ರೇಣಿಯ 20 ವರ್ಷಗಳ ಅನುಭವ

2) ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು)

  • ವಿದ್ಯಾರ್ಹತೆ: CA/ICWA/MBA (ಫೈನಾನ್ಸ್)
  • ಅನುಭವ: ಸಂಬಂಧಿತ ಪ್ರದೇಶದಲ್ಲಿ ಕಾರ್ಯನಿರ್ವಹಣಾ ಶ್ರೇಣಿಯ 5 ವರ್ಷಗಳ ಅನುಭವ

3) ಮ್ಯಾನೇಜರ್ (ಪ್ರಾಜೆಕ್ಟ್ಸ್)

  • ವಿದ್ಯಾರ್ಹತೆ: 1st ಕ್ಲಾಸ್ (60% ಅಥವಾ ಹೆಚ್ಚು) B.E/B. Tech ಇಲೆಕ್ಟ್ರಿಕಲ್/ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ
  • ಅನುಭವ: ಸಂಬಂಧಿತ ಪ್ರದೇಶದಲ್ಲಿ ಕಾರ್ಯನಿರ್ವಹಣಾ ಶ್ರೇಣಿಯ 10 ವರ್ಷಗಳ ಅನುಭವ

4) ಅಸಿಸ್ಟಂಟ್ ಮ್ಯಾನೇಜರ್ (ಪ್ರಾಜೆಕ್ಟ್ಸ್)

  • ವಿದ್ಯಾರ್ಹತೆ: 1st ಕ್ಲಾಸ್ (60% ಅಥವಾ ಹೆಚ್ಚು) B.E/B. Tech (SC/ST ಅರ್ಜಿದಾರರಿಗೆ 55% ಅಂಕಗಳು)
  • ಅನುಭವ: ಸಂಬಂಧಿತ ಪ್ರದೇಶದಲ್ಲಿ ಕಾರ್ಯನಿರ್ವಹಣಾ ಶ್ರೇಣಿಯ 5 ವರ್ಷಗಳ ಅನುಭವ

5) ಎಕ್ಸ್‌ಕ್ಯೂಟಿವ್ (ಪ್ರಾಜೆಕ್ಟ್ಸ್)

  • ವಿದ್ಯಾರ್ಹತೆ: B.E/B. Tech ಸಿವಿಲ್/ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 55% ಅಂಕಗಳು
  • ಅನುಭವ: ಸಂಬಂಧಿತ ಪ್ರದೇಶದಲ್ಲಿ ಕಾರ್ಯನಿರ್ವಹಣಾ ಶ್ರೇಣಿಯ 2 ವರ್ಷಗಳ ಅನುಭವ

ಹುದ್ದೆಗೆ ಸಂಬಂದಿತ ಕಾರ್ಯಗಳು

ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು): ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಆರ್ಥಿಕ ಯೋಜನೆಗಳನ್ನು ರೂಪಿಸಲು, ಹಣಕಾಸು ವರದಿಗಳನ್ನು ತಿದಿಯಲು, ಬಜೆಟ್‌ಗಳನ್ನು ನಿರ್ವಹಿಸಲು ಮತ್ತು ಹಣಕಾಸು ತಂಡವನ್ನು ನೇತೃತ್ವ ವಹಿಸುತ್ತಾರೆ.

ಅಸಿಸ್ಟಂಟ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್‌ಗಳು): ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಹಣಕಾಸು ವಿಶ್ಲೇಷಣೆಯಲ್ಲಿ ಸಹಾಯ, ದಿನನಿತ್ಯದ ಲೆಕ್ಕಗಳಲ್ಲಿ ನಿರ್ವಹಣೆ, ಬಜೆಟ್‌ಗಳಲ್ಲಿ ಸಹಾಯ ಮಾಡುತ್ತಾರೆ.

ಮ್ಯಾನೇಜರ್ (ಪ್ರಾಜೆಕ್ಟ್ಸ್): ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಯೋಜನೆಗಳನ್ನು ರೂಪಿಸಲು, ಕಾರ್ಯಗತಗೊಳಿಸಲು, ವಿಭಾಗಗಳೊಂದಿಗೆ ಸಂಯೋಜಿಸಲು, ಅಪಾಯಗಳನ್ನು ನಿರ್ವಹಿಸಲು ಮತ್ತು ಪ್ರಗತಿ ವರದಿಗಳನ್ನು ಒದಗಿಸಲು ಸಹಾಯ ಮಾಡುತ್ತಾರೆ.

ಅಸಿಸ್ಟಂಟ್ ಮ್ಯಾನೇಜರ್ (ಪ್ರಾಜೆಕ್ಟ್ಸ್): ಈ ಹುದ್ದೆಯವರು ಯೋಜನೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಸಹಾಯ, ಪ್ರಗತಿಯನ್ನು ಗಮನಿಸುವುದು, ದಾಖಲೆಗಳನ್ನು ನಿರ್ವಹಿಸುವುದು ಮತ್ತು ಸ್ಥಿತಿ ವರದಿಗಳನ್ನು ತಯಾರಿಸಲು ಜವಾಬ್ದಾರರಾಗಿದ್ದಾರೆ.

ಎಕ್ಸ್‌ಕ್ಯೂಟಿವ್ (ಪ್ರಾಜೆಕ್ಟ್ಸ್): ಈ ಹುದ್ದೆಯವರು ಯೋಜನೆಯ ಕಾರ್ಯಗತಗೊಳಿಸುವಿಕೆಯಲ್ಲಿ ಸಹಾಯ, ದಾಖಲೆಗಳನ್ನು ನಿರ್ವಹಿಸುವುದು, ಮೈಲ್ ಸ್ಟೋನ್ ಟ್ರ್ಯಾಕ್ ಮಾಡುವುದು ಮತ್ತು ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಲು ಜವಾಬ್ದಾರರಾಗಿದ್ದಾರೆ.

SDCL ನೇಮಕಾತಿ 2024 ಅರ್ಜಿ ಶುಲ್ಕ

  • ಜನರಲ್/OBC: ₹ 590/- (₹ 500 + GST 18%)
  • SC/ST/PwBD: ವಿನಾಯಿತಿ ( ಅರ್ಜಿ ಶುಲ್ಕ ಇಲ್ಲ )
  • ಪಾವತಿ ವಿಧಾನ: ಸಾಗರ್ಮಾಲಾ ಡೆವಲಪ್ಮೆಂಟ್ ಕಂಪನಿಯ ಮೇಲಿನ ಡಿಮ್ಯಾಂಡ್ ಡ್ರಾಫ್ಟ್ (DD) ಮುಖಾಂತರ

SDCL ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

  • ಅರ್ಜಿದಾರರನ್ನು ಅವರ ಅರ್ಹತೆ ಮತ್ತು ಅನುಭವ ಆಧಾರದ ಮೇಲೆ 1:5 ಅನುಪಾತದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುವುದು.
  • ನಂತರ ಶಾರ್ಟ್‌ಲಿಸ್ಟ್ ಮಾಡಿದ ಅರ್ಜಿದಾರರಿಗೆ ಇಮೇಲ್ ಮೂಲಕ ಅವರ ಆಯ್ಕೆಯ ಪ್ರಕ್ರಿಯೆಯ ಮಾಹಿತಿ ನೀಡಲಾಗುವುದು.
  • ಕೊನೆಯಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
  • ಸಂದರ್ಶನದ ವೇಳಾಪಟ್ಟಿಯನ್ನು SDCL ವೆಬ್ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

SDCL ನೇಮಕಾತಿ 2024 ಗೆ ಹೇಗೆ ಅರ್ಜಿ ಸಲ್ಲಿಸಬೇಕು

  • ಅರ್ಹ ಅಭ್ಯರ್ಥಿಗಳು SDCL ವೆಬ್ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  • ಅದರಲ್ಲಿ ಅಗತ್ಯ ಮತ್ತು ಹೆಚ್ಚುವರಿ ಅರ್ಹತೆ, ವಯಸ್ಸು, ಅನುಭವ, ಆಧಾರ್ ಕಾರ್ಡ್ ಮತ್ತು ಎಲ್ಲಾ ಅರ್ಹತೆಗಳ ಮಾರ್ಕ್ ಶೀಟುಗಳ ಅಟೆಸ್ಟೆಡ್ ಪ್ರತಿಗಳನ್ನು ಸಲ್ಲಿಸಿ.
  • ವೈಯಕ್ತಿಕ ವಿವರಗಳಾದ ದಿನಾಂಕ, ಸಂಪರ್ಕ ಮಾಹಿತಿ, ವಿಳಾಸ ಮತ್ತು ಅರ್ಹತೆಗಳ ವಿವರಗಳನ್ನು (ಪಾಸಿಂಗ್ ವರ್ಷದೊಂದಿಗೆ ಮತ್ತು ಅಂಕಗಳ ಶೇಕಡಾವಾರು) ಒದಗಿಸಿ.
  • ಪ್ರಾವೀಣ್ಯತೆ ವಿವರಗಳು: ಕಂಪನಿಯ ಹೆಸರು, ಉದ್ಯೋಗಾವಧಿ, ಕೆಲಸದ ಸ್ಥಳ ಮತ್ತು ವೇತನ ಶ್ರೇಣಿಗಳನ್ನು ಸೇರಿಸಿ.
  • ಅರ್ಜಿ ಶುಲ್ಕ: ಸಂಬಂದಿತ ವರ್ಗದ ಆಧಾರದ ಮೇಲೆ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸೇರಿಸಿ.

ಅರ್ಜಿಯ ಸಲ್ಲಿಕೆ

ಅರ್ಜಿಗಳನ್ನು ಮತ್ತು ಅಗತ್ಯ ದಾಖಲೆಗಳನ್ನು ಈ ವಿಳಾಸಕ್ಕೆ ಕಳುಹಿಸಿ:

ಅಸಿಸ್ಟಂಟ್ ಮ್ಯಾನೇಜರ್ (HR)
ಸಾಗರ್ಮಾಲಾ ಡೆವಲಪ್ಮೆಂಟ್ ಕಂಪನಿ
1st Floor, Thapar House, Gate No. 2, 124,
ಜನ್‌ಪಾತ್, ನ್ಯೂ ಡೆಹಲಿ -110001

ಪ್ರಮುಖ ಲಿಂಕ್ ಗಳು

ಅರ್ಜಿ ನಮೂನೆ ಲಿಂಕ್: ಇಲ್ಲಿ ಒತ್ತಿ

SDCL ನೇಮಕಾತಿ 2024 ರ ಬಗ್ಗೆ ಪ್ರಶ್ನೆ-ಉತ್ತರ (FAQs)

ಪ್ರಶ್ನೆ: SDCL ನೇಮಕಾತಿಯ ಆಯ್ಕೆ ಪ್ರಕ್ರಿಯೆ ಏನು?
ಉತ್ತರ: ಆಯ್ಕೆ ಪ್ರಕ್ರಿಯೆಯು ಶಾರ್ಟ್‌ಲಿಸ್ಟಿಂಗ್ ಮತ್ತು ನಂತರ ಸಂದರ್ಶನ ಅಥವಾ ವ್ಯಕ್ತಿಗತ ಮೌಲ್ಯಮಾಪನ ನಡೆಸಲಾಗುವುದು.

ಪ್ರಶ್ನೆ: ವಿವಿಧ ಹುದ್ದೆಗಳ ವಯೋಮಿತಿ ಯಾವುದು?
ಉತ್ತರ: ಜನರಲ್ ಮ್ಯಾನೇಜರ್: 50 ವರ್ಷ, ಮ್ಯಾನೇಜರ್: 40 ವರ್ಷ, ಅಸಿಸ್ಟಂಟ್ ಮ್ಯಾನೇಜರ್: 35 ವರ್ಷ, ಎಕ್ಸ್‌ಕ್ಯೂಟಿವ್: 30 ವರ್ಷ.

ಪ್ರಶ್ನೆ: SDCL ಹುದ್ದೆಗಳಿಗಾಗಿ ನಾನು ಹೇಗೆ ಅರ್ಜಿ ಸಲ್ಲಿಸಬೇಕು?
ಉತ್ತರ: ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು, ಅಗತ್ಯ ದಾಖಲೆಗಳನ್ನು ಸೇರಿಸಬೇಕು ಮತ್ತು ಕೊನೆಯ ದಿನಾಂಕದ ಮುಂಚೆ ಇಲ್ಲಿ ನೀಡಲಾದ ವಿಳಾಸಕ್ಕೆ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಬೇಕು.

SDCL ನೇಮಕಾತಿ 2024 ಸಂಪರ್ಕ ಮಾಹಿತಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಇಮೇಲ್: sdcl.recruitment@sdclindia.com
ಫೋನ್: 1800-123-4567 (ಟೋಲ್-ಫ್ರೀ)
ವೆಬ್ಸೈಟ್: www.sdclindia.com

Leave a Comment