ಗುಡ್ ನ್ಯೂಸ್: ರೈತರ ಸಾಲಮನ್ನಾ ಮಾಡಲು ರೂ 232 ಕೋಟಿ ಅನುದಾನ ಬಿಡುಗಡೆ! ಪಟ್ಟಿಯಲ್ಲಿ ಹೆಸರು ವೀಕ್ಷಿಸಲು ಹೀಗೆ ಮಾಡಿ

ಗುಡ್ ನ್ಯೂಸ್: ರೈತರ ಸಾಲಮನ್ನಾ ಮಾಡಲು ರೂ 232 ಕೋಟಿ ಅನುದಾನ ಬಿಡುಗಡೆ! ಪಟ್ಟಿಯಲ್ಲಿ ಹೆಸರು ವೀಕ್ಷಿಸಲು ಹೀಗೆ ಮಾಡಿ

ಸ್ನೇಹಿತರೇ ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಒಟ್ಟು ರೂ 232 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಹೌದು ಸ್ನೇಹಿತರೇ 2017 ಮತ್ತು 2018 ರಲ್ಲಿ ಘೋಷಣೆ ಮಾಡಲಾಗಿದ್ದ ಸಾಲಮನ್ನಾ ಪ್ರಯೋಜನವನ್ನು ರಾಜ್ಯದ 31 ಸಾವಿರ ರೈತರು ಪಡೆದುಕೊಂಡಿರಲಿಲ್ಲ. ವಿಧಾನ ಪರಿಷತ್ ಸದನದಲ್ಲಿ ನಡೆದ ಚರ್ಚೆಯಲ್ಲಿ ಬಿ‌ಜೆ‌ಪಿ ಶಾಸಕ ಸುನಿಲ್ ಪಲ್ಯಾಪುರೆ ಅವರ ಪ್ರಶ್ನೆಗೆ ಸಹಕಾರಿ ಸಚಿವ ಕೆ‌ಎನ್ ರಾಜಣ್ಣ ಹೀಗೆ ಉತ್ತರಿಸಿದ್ದಾರೆ.

”ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಒದಗಿಸಲಾಗಿದ್ದ 50,000ರೂ ಸಾಲಮನ್ನಾ ಯೋಜನೆಯ ಪ್ರಯೋಜನವನ್ನು ಒಟ್ಟು 21.57 ಲಕ್ಷ ರೈತರು ಪಡೆದುಕೊಂಡಿರುತ್ತಾರೆ ಹಾಗೂ 2018ನೇ ಇಸವಿಯಲ್ಲಿ ಬಿಡುಗಡೆ ಮಾಡಲಾಗಿದ್ದ 1 ಲಕ್ಷ ಸಾಲಮನ್ನಾ ಯೋಜನೆಯ ಪ್ರಯೋಜನವನ್ನು ಒಟ್ಟು 17.37 ಲಕ್ಷ ರೈತರು ಪಡೆದುಕೊಂಡಿರುತ್ತಾರೆ.

ಈ ಎರಡು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಾಲಮನ್ನಾಕ್ಕಾಗಿ ರೂ 7,662.26 ಕೋಟಿ ಹಾಗೂ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘಗಳ ಸಾಲಮನ್ನಾಕ್ಕಾಗಿ ರೂ 7,987.47 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಇನ್ನೂ 31 ಸಾವಿರ ರೈತರ ಸಾಲಮನ್ನಾವನ್ನು ಕೆಲವು ತಾಂತ್ರಿಕ ಕಾರಣಗಳಿಂದ ಬಿಡುಗಡೆ ಮಾಡಿರುದಿಲ್ಲ. ಹೀಗಾಗಿ ರೂ 232 ಕೋಟಿ ಅನುದಾನಯನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು.

ಹಾಗಾದರೆ ರೈತರ ಸಾಲಮನ್ನಾ ಮಾಡಿರುವ ಅಥವಾ ಖಾತೆಗೆ ಹಣ ಬಂದಿರುವ ಮಾಹಿತಿಯನ್ನು ಪಡೆಯುವುದು ಹೇಗೆ? ಚಿಂತಿಸಬೇಡಿ, ಏಕೆಂದರೆ ರಾಜ್ಯ ಸರ್ಕಾರದ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಸಾಲಮನ್ನಾ ಆಗಿದೆಯೋ ಅಥವಾ ಇಲ್ಲ ಎನ್ನುವುದನ್ನು ತಿಳಿಯಬಹುದು. ರೈತರ ಸಾಲಮನ್ನಾ ಸ್ಟಿತಿಯನ್ನು ಪರಿಶೀಲಿಸಲು ಈ ಕೆಳಗೆ ನೀಡಿರುವ ಕ್ರಮಗಳನ್ನು ಅನುಸರಿಸಿ.

ವಾಣಿಜ್ಯ ಬ್ಯಾಂಕ್ ಸಾಲಮನ್ನಾ ಪರಿಶೀಲನೆ

  • ಮೊದಲು ಸರ್ಕಾರದ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಬೇಕು. ಲಿಂಕಣ್ಣು ಕೆಳಭಾಗದಲ್ಲಿ ನೀಡಲಾಗಿದೆ.
  • ಮುಖಪುಟದಲ್ಲಿ ಕಾಣುವ “ಕಂದಾಯ ಇಲಾಖೆ ಸೇವೆಗಳು” ಆಯ್ಕೆಯ ಮೇಲೆ ಒತ್ತಿ.
  • ಹೊಸ ಪುಟ ತೆರೆಯುವುದು, “ವಾಣಿಯ ಬ್ಯಾಂಕ್ ಸಾಲಮನ್ನಾ ವರದಿ” ಆಯ್ಕೆ ಇರುವುದು ಅದರ ಮೇಲೆ ಒತ್ತಿ.
  • ರೈತನ ಆಯ್ಕೆ ಮಾಡಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮದ ಮಾಹಿತಿಯನ್ನು ನಮೂದಿಸಿ ಸಲ್ಲಿಸು ಬಟಲ್ ಮೇಲೆ ಕ್ಲಿಕ್ ಮಾಡಿ.
  • ಈ ವರದಿಯಲ್ಲಿ ನೀವು ವಾಣಿಜ್ಯ ಬ್ಯಾಂಕ್ ಸಾಲಮನ್ನಾ ಆಗಿರುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಸಾಲಮನ್ನಾ ವರದಿ ಪಡೆಯುವ ಲಿಂಕ್: ಇಲ್ಲಿ ಒತ್ತಿ

ಪ್ರಾಥಮಿಕ ಕ್ರಷಿ ಸಹಕಾರ ಸಂಘಗಳ ಸಾಲಾ ಮನ್ನಾ ವರದಿ ಪರಿಶೀಲನೆ

  • ಮೊದಲು ಸರ್ಕಾರದ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಬೇಕು. ಲಿಂಕಣ್ಣು ಕೆಳಭಾಗದಲ್ಲಿ ನೀಡಲಾಗಿದೆ.
  • ಮುಖಪುಟದಲ್ಲಿ ಕಾಣುವ “ಕಂದಾಯ ಇಲಾಖೆ ಸೇವೆಗಳು” ಆಯ್ಕೆಯ ಮೇಲೆ ಒತ್ತಿ.
  • ಹೊಸ ಪುಟ ತೆರೆಯುವುದು, “ಪ್ರಾಥಮಿಕ ಕ್ರಷಿ ಸಹಕಾರ ಸಂಘಗಳ ಸಾಲಾ ಮನ್ನಾ ವರದಿ” ಆಯ್ಕೆ ಇರುವುದು ಅದರ ಮೇಲೆ ಒತ್ತಿ.
  • ರೈತನ ಆಯ್ಕೆ ಮಾಡಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮದ ಮಾಹಿತಿಯನ್ನು ನಮೂದಿಸಿ ಸಲ್ಲಿಸು ಬಟಲ್ ಮೇಲೆ ಕ್ಲಿಕ್ ಮಾಡಿ.
  • ಈ ವರದಿಯಲ್ಲಿ ನೀವು ಪ್ರಾಥಮಿಕ ಕ್ರಷಿ ಸಹಕಾರ ಸಂಘಗಳ ಸಾಲಮನ್ನಾ ಆಗಿರುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಸಾಲಮನ್ನಾ ವರದಿ ಪಡೆಯುವ ಲಿಂಕ್: ಇಲ್ಲಿ ಒತ್ತಿ

Leave a Comment