1.73 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ವಿಲೇವಾರಿ: ನಗರ ಪ್ರದೇಶಗಳಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು ಹಾಗೂ ಅರ್ಹತೆ ಏನು
ಸ್ನೇಹಿತರೇ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ವಿಧಾನ ಪರಿಷತ್ ಸಭೆಯಲ್ಲಿ ಬಿಜೆಪಿ ಶಾಸಕ ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ಉತ್ತರಿಸಿ “ಪ್ರಸ್ತುತ 2.95 ಲಕ್ಷ ಹೊಸ ರೇಷನ್ ಕಾರ್ಡ್ ಅರ್ಜಿಗಳು ಬಂದಿದ್ದು, ಅದರಲ್ಲಿ ಒಟ್ಟು 2.36 ಲಕ್ಷ ಅರ್ಜಿಗಳು ಮಾತ್ರ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು”.
1.73 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿದಾರರಿಗೆ ಶೀಘ್ರದಲ್ಲೇ ಬಿಪಿಎಲ್ ಕಾರ್ಡ್ ವಿಲೇವಾರಿ ಮಾಡಲಾಗುವುದು ಅಂತ ಪ್ರಸ್ತಾಪಿಸಿದರು.
ಹಾಗಾದರೆ ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬೇಕಾಗಿರುವ ದಾಖಲೆಗಳೇನು? ಸ್ನೇಹಿತರೇ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗಿಂತ ನಗರ ಪ್ರದೇಶದಲ್ಲಿ ವಾಸಿಸುವ ಜನರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹೆಚ್ಚು ದಾಖಲೆಗಳನ್ನು ಒದಗಿಸಬೇಕಾಗುತ್ತೆ. ಇವುಗಳನ್ನು ಒಂದೊಂದಾಗಿ ತಿಳಿಯೊಣ ಬನ್ನಿ.
ನಗರ ಪ್ರದೇಶಗಳಲ್ಲಿ (ಬೆಂಗಳೂರು) ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು
- ಅರ್ಜಿದಾರರ ಎಲ್‌ಪಿಜಿ (LPG) ಸಂಪರ್ಕದ ವಿವರಗಳು
- ವಾರ್ಷಿಕ ಆದಾಯ ವಿವರಗಳು (ಆದಾಯ ಪ್ರಮಾಣ ಪತ್ರ)
- ಅರ್ಜಿದಾರರ ಫೋಟೋ
- ಗುರುತಿನ ಪುರಾವೆ (ಆಧಾರ್ ಕಾರ್ಡ್)
- ಉದ್ಯೋಗದ ವಿವರಗಳು
- ಇತ್ತೀಚಿನ ವಿದ್ಯುತ್ ಬಿಲ್ ವಿವರಗಳು
- ಆಹಾರ ಇಲಾಖೆಯ ಪ್ರದೇಶದ ವಿವರ
- ಕುಟುಂಬದ ಸದಸ್ಯರ ಹೆಸರುಗಳು
- ಕುಟುಂಬ ಸದಸ್ಯರೊಂದಿಗೆ ಅರ್ಜಿದಾರರ ಸಂಬಂಧದ ವಿವರಗಳು
- ಪಿನ್ ಕೋಡ್ ವಿಳಾಸ
- ಅರ್ಜಿದಾರರ ವಸತಿ ವಿಳಾಸದ ಮಾಹಿತಿ
- ಅರ್ಜಿದಾರರು ಅವಿವಾಹಿತರಾಗಿದ್ದರೆ ಪೋಷಕರ ವಿಳಾಸ
ನಗರಗಳಲ್ಲಿ (ಬೆಂಗಳೂರು) ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಯಾರು ಅರ್ಹರು
- ಹೊಸದಾಗಿ ಮದುವೆಯಾದ ದಂಪತಿಗಳು
- ಅವಿಭಜಿತ ಕುಟುಂಬಕ್ಕೆ ಸೇರಿದ ಸದಸ್ಯರು
- ಈವರೆಗೆ ಪಡಿತರ ಚೀಟಿ ಇಲ್ಲದ ಕುಟುಂಬಗಳು
ಈ ಮೇಲೆ ತಿಳಿಸಿದ ನಗರ ಪ್ರದೇಶದಲ್ಲಿರುವ ಜನರ ಎಲ್ಲ ದಾಖಲೆಗಳು ನೈಜವಾಗಿದ್ದಾರೆ ಮತ್ತು ಸೂಕ್ತ ಅರ್ಹತೆಯನ್ನು ಹೊಂದಿರುವಂತಹ ಜನ ಯಾವುದೇ ಗೊಂದಲವಿಲ್ಲದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಸೂಚನೆ: ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಆರಂಭಗೊಳ್ಳುವ ದಿನಾಂಕವನ್ನು ಘೋಷಿಸಿರುವುದಿಲ್ಲ, ಆದರೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಅವರ ನೇತ್ರತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಹಿಂದೆ ಸಲ್ಲಿಸಿದ ಅರ್ಜಿಗಳನ್ನು ಮೊದಲು ಪರಿಶೀಲಿಸಿ ಪಡಿತರ ಚೀಟಿಯನ್ನು ವಿಲೇವಾರಿ ಮಾಡಿ ನಂತರ ಇನ್ನುಳಿದ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಿಸಲು ಆದೇಶ ನೀಡಿದ್ದಾರೆ.