ಬಜೆಟ್ 2024: ಹೊಸ ತೆರಿಗೆ ಯೋಜನೆ ಆಯ್ಕೆ ಮಾಡುವವರಿಗೆ ರೂ 17500 ಉಳಿತಾಯ! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ

ಬಜೆಟ್ 2024: ಹೊಸ ತೆರಿಗೆ ಯೋಜನೆ ಆಯ್ಕೆ ಮಾಡುವವರಿಗೆ ರೂ 17500 ಉಳಿತಾಯ! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ

2024 ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ಹಣಕಾಸು ವರ್ಷದ ಹೊಸ ತೆರಿಗೆ ಯೋಜನೆಯ ಉದ್ದೇಶಕ್ಕಾಗಿ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನು ತಿದ್ದುಪಡಿ ಮಾಡಿದ್ದಾರೆ. ಹೊಸ ಆದಾಯ ತೆರಿಗೆ ಸ್ಲ್ಯಾಬ್ ಗಳು ಈ ಕೆಳಗಿನಂತಿವೆ:

  • ₹3 ಲಕ್ಷದವರೆಗೆ: ಯಾವುದೇ ತೆರಿಗೆ ಇಲ್ಲ
  • ₹3 ಲಕ್ಷದಿಂದ ₹7 ಲಕ್ಷದವರೆಗೆ: 5%
  • ₹7 ಲಕ್ಷದಿಂದ ₹10 ಲಕ್ಷದವರೆಗೆ: 10%
  • ₹10 ಲಕ್ಷದಿಂದ ₹12 ಲಕ್ಷದವರೆಗೆ: 15%
  • ₹12 ಲಕ್ಷದಿಂದ ₹15 ಲಕ್ಷದವರೆಗೆ: 20%
  • ₹15 ಲಕ್ಷಕ್ಕಿಂತ ಹೆಚ್ಚು: 30%

ಯಾರು 3 ಲಕ್ಷದವೆರೆ ಆದಾಯವನ್ನು ಹೊಂದಿರುತ್ತಾರೋ ಅಂತವರು ಯಾವುದೇ ತೆರಿಗೆಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಈ ಮಹತ್ವದ ಬದಲಾವಣೆಗಳಿಂದ ಹೊಸ ತೆರಿಗೆ ಯೋಜನೆ ಆಯ್ಕೆ ಮಾಡುವವರಿಗೆ ₹17,500 ವರೆಗೆ ಉಳಿತಾಯ ಸಾಧ್ಯವಾಗಲಿದೆ.

ಸ್ಟಾಂಡರ್ಡ್ ಕಡತದ ಏರಿಕೆ

ಹೊಸ ತೆರಿಗೆ ಯೋಜನೆಯಲ್ಲಿ ಜನರ ತೆರಿಗೆಯ ಸ್ಟಾಂಡರ್ಡ್ ಕಡತವನ್ನು ₹50,000 ರಿಂದ ₹75,000ಕ್ಕೆ ಹೆಚ್ಚಿಸಲಾಗಿದೆ. ಕುಟುಂಬ ಪಿಂಚಣಿ ಪಡಿತರದಾರರಿಗಾಗಿ, ಸ್ಟಾಂಡರ್ಡ್ ಕಡಿತವನ್ನು ₹15,000 ರಿಂದ ₹25,000ಕ್ಕೆ ಹೆಚ್ಚಿಸಲಾಗಿದೆ.

ಏಪ್ರಿಲ್ 01, 2020 ರಂದು ಅನುಷ್ಟಾನಕ್ಕೆ ತಂದ ಈ ಯೋಜನೆಯ ಉಪಯೋಗ ಪಡೆಯಲು ತೆರಿಗೆದಾರರು ಆರಂಭದಲ್ಲಿ ವಿಶೇಷವಾಗಿ ಹೊಸ ತೆರಿಗೆ ಯೋಜನೆಯ ಆಯ್ಕೆ ಮಾಡಬೇಕಿತ್ತು. ಆದರೆ ಏಪ್ರಿಲ್ 01, 2023 ರಿಂದ ಇದೀಗ ಹೊಸ ತೆರಿಗೆ ಯೋಜನೆ ಡಿಫಾಲ್ಟ್ ಆಗಿದೆ. ಅಂದರೆ ತೆರಿಗೆ ಪಾವತಿಸುವ ಎಲ್ಲ ತೆರಿಗೆದಾರರಿಗೆ ಹಳೆ ತೆರಿಗೆ ಯೊಜನೆಯ ಆಯ್ಕೆ ಮಾಡದೆ ಇದ್ದರೆ, ತೆರಿಗೆದಾರರ ತೆರಿಗೆ ಲಯಬಿಲಿಟೀಸ್ ಗಳನ್ನು ಹೊಸ ತೆರಿಗೆ ಯೋಜನೆಯಡಿಯಲ್ಲಿ ಲೆಕ್ಕಹಾಕಲಾಗುವುದು.

ಒಂದೇ ವೇಳೆ ನಿವೇನಾದರೂ ಹಳೆ ತೆರಿಗೆ ಯೋಜನೆಯಡಿ ತೆರಿಗೆ ವಿನಾಯಿತಿ ಮತ್ತು ಕಡತಗಳನ್ನು ಪಡೆಯಲು ಬಯಸಿದರೆ ವಿಶೇಷವಾಗಿ ಹಳೆ ತೆರಿಗೆ ಯೋಜನೆಯ ಆಯ್ಕೆಯನ್ನು ITR ಸಲ್ಲಿಸುವಾಗ ” ಸೆಕ್ಷನ್ 115BAC ಹೊಸ ತೆರಿಗೆ ಯೋಜನೆಯಡಿಯಲ್ಲಿ ಆಯ್ಕೆ ಮಾಡವುದಿಲ್ಲ” ಎನ್ನುವ ಆಯ್ಕೆ ಬಳಸಬೇಕು.

ತೆರಿಗೆದಾರರಿಗೆ ಪ್ರತಿ ವರ್ಷ ಹೊಸ ಮತ್ತು ಹಳೆ ತೆರಿಗೆ ಯೋಜನೆಗೆ ಬದಲಾಯಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದಿಲ್ಲ, ಒಂದು ಬಾರಿ ಯಾವುದೇ ಒಂದು ಯೋಜನೆಯನ್ನು ಆಯ್ಕೆ ಮಾಡಿದ ಬಳಿಕ ನಂತರ ಅವರು ಮತ್ತೆ ಬೇರೆ ತೆರಿಗೆ ಯೋಜನೆಗೆ ಮರಳಲು ಸಾಧ್ಯವಿಲ್ಲ.

Leave a Comment