ನಿಮ್ಮ ರೇಷನ್ ಕಾರ್ಡ್ ಅರ್ಜಿ ತಿರಸ್ಕರಿಸಲು ಕಾರಣ ಏನು ಗೊತ್ತಾ! ಇಲ್ಲಿವೆ ನೋಡಿ ನೀವು ಮಾಡಿರುವಂತಹ ಕಾಮನ್ ಮಿಸ್ಟೆಕ್ಸ್
ಸ್ನೇಹಿತರೇ ರಾಜ್ಯ ಸರ್ಕಾರ ಈ ಹಿಂದೆ ಹಲವಾರು ಬಾರಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಮತ್ತು ತಿದ್ದುಪಡಿಗಾಗಿ ಅವಕಾಶ ಮಾಡಿಕೊಟ್ಟಿದ್ದು ಇನ್ನೂ ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿರುತ್ತಾರೆ. ಆದರೆ ಇವರಿಗೆ ಈವರೆಗೆ ಪಡಿತರ ಚೀಟಿಯನ್ನು ಪಡೆದುಕೊಂಡಿರಲ್ಲ. ಹಾಗಾದರೆ ಇದಕ್ಕೆ ಮೂಲ ಕಾರಣಗಳೇನು ಮತ್ತು ಅವುಗಳಿಗೆ ಪರಿಹಾರ ಏನು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಮೊದಲನೆಯದಾಗಿ ಅರ್ಜಿದಾರರು ಆದಾಯ,ಗುರುತಿನ ಚೀಟಿ, ವಾಸ್ತವ ಪ್ರಮಾಣ ಪತ್ರ ಇನ್ನಿತರ ಅಗತ್ಯ ದಾಖಲೆಗಳನ್ನು ನೀಡದೆ ಇದ್ದರೆ ಅರ್ಜಿ ತಿರಸ್ಕಾರವಾಗಬಹುದು. ಹೀಗಾಗಿ ಎಲ್ಲ ಅಗತ್ಯ ನೈಜ ದಾಖಲೆಗಳನ್ನು ಅರ್ಜಿದಾರರು ಒದಗಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳ ಪಟ್ಟಿಯನ್ನು ಮೊದಲು ಪರಿಶೀಲಿಸಿ ಅವುಗಳ ನಕಲನ್ನು ಕಚೇರಿಗೆ ಸಲ್ಲಿಸಿ.
ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿಯನ್ನು ನೀಡದರೆ ಅರ್ಜಿ ತಿರಸ್ಕಾರವಾಗುತ್ತದೆ. ಆದರಿಂದ ಅರ್ಜಿದಾರರು ತಮ್ಮ ವ್ಯಕ್ತಿಗತ ಮಾಹಿತಿ, ಆದಾಯ ವಿವರಗಳು, ಮತ್ತು ಕುಟುಂಬದ ಸದಸ್ಯರ ಮಾಹಿತಿಯನ್ನು ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅರ್ಜಿದಾರರ ಆದಾಯ ಸರ್ಕಾರ ನಿರ್ಧರಿಸಿದ ಮಿತಿಯನ್ನು ಮೀರಿದರೆ ಅರ್ಜಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.ಹೀಗಾಗಿ ಅರ್ಜಿದಾರರು ನೈಜ ಆದಾಯ ವಿವರಗಳೊಂದಿಗೆ ಪ್ರಸ್ತುತ ಹಣಕಾಸಿನ ಸ್ಥಿತಿಯನ್ನು ನೀಡಬೇಕು, ಆದಾಯ ಪತ್ರದಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಆದಾಯ ಮಟ್ಟವನ್ನು ಬೆಂಬಲಿಸುವ ಹೆಚ್ಚಿನ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು.
ಹಲವಾರು ಬಾರಿ ಅರ್ಜಿಗಳನ್ನು ಸಲ್ಲಿಸುವಾಗ ಒಂದೇ ಹೆಸರಿನಲ್ಲಿ ಡಬಲ್ ರೇಷನ್ ಕಾರ್ಡ್ ಪಡೆಯಲು ಬಯಸಿದರೆ ಅರ್ಜಿ ತಿರಸ್ಕರವಾಗುತ್ತದೆ. ಹೀಗಾಗಿ ನಿಮ್ಮ ಹೆಸರಿನಲ್ಲಿ ಒಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆಯ ವೇಳೆ ನೀಡುವ ವಿವರಗಳು ಮತ್ತು ಸರ್ಕಾರಿ ದಾಖಲೆಗಳಲ್ಲಿ ಇರುವ ವಿವರಗಳ ಮಧ್ಯೆ ವ್ಯತ್ಯಾಸ ಕಂಡು ಬಂದರೆ ಅರ್ಜಿ ತಿರಸ್ಕರವಾಗುತ್ತದೆ. ಹೀಗಾಗಿ ಅಸ್ತಿತ್ವದಲ್ಲಿನ ದಾಖಲೆಗಳಿಗೆ ತಕ್ಕಂತೆ ನೈಜ ದಾಖಲೆಗಳ ವಿವರಗಳನ್ನು ನೀಡಬೇಕು.
ಕುಟುಂಬದಿಂದ ದಿವಂಗತರಾದ ಅಥವಾ ಮದುವೆಯಾದ ಮಕ್ಕಳ ಹೆಸರನ್ನು ತೆಗಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಮುಂಚೆ ಈ ಕೆಲಸವನ್ನು ಪೂರ್ಣಗೊಳಿಸಿ.
ವಾಸಸ್ಥಳದ ನೈಜ ದಾಖಲೆಗಳನ್ನು ಪೂರೈಸದಿದ್ದರೆ ಅರ್ಜಿ ತಿರಸ್ಕರಿಸಲಾಗುವುದು.
ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಸಂಬಂದಿತ ದೂರುಗಳಿಗೆ ಪರಿಹಾರ ಪಡೆಯಲು ಈ ಕೆಳಗೆ ತಿಳಿಸಿದ ಸಂಪರ್ಕ ವಿವರಗಳನ್ನು ಆಸಕ್ತರು ಬಳಸಬಹುದು
ವೆಬ್ಸೈಟ್: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಫೋನ್: +91-80-2235 1121 / +91-80-2235 4854
ಇಮೇಲ್: info@ahara.kar.nic.in
ವಿಳಾಸ:
ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಇಲಾಖೆ,
ಎಂ.ಎಸ್. ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ,
ಬೆಂಗಳೂರು – 560001, ಕರ್ಣಾಟಕ