ಎಲ್‌ಪಿ‌ಜಿ ಸಿಲಿಂಡರ್: ಕೇಂದ್ರ ಸರ್ಕಾರದಿಂದ ಮುಂದಿನ 8 ತಿಂಗಳವರೆಗೆ ಸಬ್ಸಿಡಿ ನೀಡಲು ನಿರ್ಧಾರ

ಎಲ್‌ಪಿ‌ಜಿ ಸಿಲಿಂಡರ್: ಕೇಂದ್ರ ಸರ್ಕಾರದಿಂದ ಮುಂದಿನ 8 ತಿಂಗಳವರೆಗೆ ಸಬ್ಸಿಡಿ ನೀಡಲು ನಿರ್ಧಾರ

ಸ್ನೇಹಿತರೇ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ಕುಟುಂಬಗಳಿಗೆ ನವೀನ ಅಡುಗೆ ಪದ್ದತಿಯನ್ನು ಪರಿಚಯಿಸಲು ಪ್ರಧಾನ ಮಂತ್ರಿ ಉಜ್ಜ್ವಲಾ ಯೋಜನೆಯನ್ನು 2016 ರಲ್ಲಿ ಜಾರಿಗೆ ತಂದರು. ಈ ಉಜ್ಜ್ವಲಾ ಯೋಜನೆಯು ಅಂದಿನಿಂದ ಬಡವರ ಬದುಕಿನಲ್ಲಿ ಬೆಳಕಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಏಕೆಂದರೆ ಇಂದು ಉಜ್ಜ್ವಲಾ ಯೋಜನೆಯಡಿಯಲ್ಲಿ ಹಣಕಾಸು ವರ್ಷ 2024-25 ಮಾರ್ಚ್ 30ರ ವರೆಗೆ ಒತ್ತಿ 10.2 ಕೋಟಿ ಜನರು 14.2 ಕೆ‌ಜಿ ಎಲ್‌ಪಿ‌ಜಿ ಸಿಲಿಂಡರ್ ಮೇಲೆ ರೂ 300 ಸಬ್ಸಿಡಿಯನ್ನು ಪಡೆಯುತ್ತಿದ್ದು, ಕೇಂದ್ರ ಸರ್ಕಾರ ಇನ್ನಷ್ಟು ಹೊಸ ಸಂಪರ್ಕಗಳನ್ನು ಒದಗಿಸಲು ಮುಂದಾಗಿರುವುದು ಸಂತಸದ ಸುದ್ದಿಯಾಗಿದೆ.

ಹೌದು ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ಜ್ವಲಾ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಒಟ್ಟು ರೂ. 300 ಸಬ್ಸಿಡಿಯನ್ನು ಒದಗಿಸುತ್ತಿದೆ. ಎಲ್‌ಪಿ‌ಜಿ ಅನಿಲದ ದರವು ಗಗನಕ್ಕೆರಿರುವುದರಿಂದ ಮಾರುಕಟ್ಟೆ ಬೆಲೆಯಲ್ಲಿ ಎಲ್‌ಪಿ‌ಜಿ ಸಿಲಿಂಡರ್ ಅನ್ನು ಖರೀದಿಸುವ ಸಾಮರ್ಥ್ಯ ಬಡ ಜನರಿಗಿರುವುದಿಲ್ಲ ಆದ್ದರಿಂದ ಕೇಂದ್ರ ಸರ್ಕಾರದ ಸಬ್ಸಿಡಿ ನೀಡುವ ಮಹತ್ವದ್ದಾಗಿದೆ.

ಉದಾಹರಣೆಗೆ ಪ್ರಸ್ತುತ 14.2 ಕೆ‌ಜಿ ಎಲ್‌ಪಿ‌ಜಿ ಅನಿಲದ ಮಾರುಕಟ್ಟೆ ಬೆಲೆಯು ಬೆಂಗಳೂರು ನಂತಹ ನಗರದಲ್ಲಿ ರೂ.805 ಆಗಿದೆ. ಒಂದು ವೇಳೆ ಉಜ್ಜ್ವಲಾ ಫಲಾನುಭವಿಗಳಾಗಿದ್ದರೆ ಇದೆ ಎಲ್‌ಪಿ‌ಜಿ ಅನಿಲವನ್ನು ರೂ 300 ಸಬ್ಸಿಡಿಯೊಂದಿಗೆ ರೂ. 505 ಬೆಲೆಗೆ ಖರೀದಿ ಮಾಡಬಹುದು.

ಇನ್ನೂ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದು, ಆಗಸ್ಟ್ ನಿಂದ ಮುಂದಿನ 8 ತಿಂಗಳಗಳ ಕಾಲ ಮಾರ್ಚ್ 31, 2025 ರವರೆಗೆ ರೂ. 300 ಸಬ್ಸಿಡಿಯನ್ನು ಮುಂದುವರೆಸುವ ಆದೇಶ ನೀಡಿದೆ. ಹೌದು ಉಜ್ಜ್ವಲಾ ಯೋಜನೆಯ ಫಲಾನುಭವಿಗಳು ರೂ 300 ಸಬ್ಸಿಡಿಯೊಂದಿಗೆ ಮಾರ್ಚ್ 31, 2025 ರವರೆಗೆ ವರ್ಷಕ್ಕೆ 12 ರೀಫಿಲ್ ಗಳನ್ನು ಪಡೆಯುವ ಅವಕಾಶ ಹೊಂದಿರುತ್ತಾರೆ.

14.2 ಕೆ‌ಜಿ ಸಿಲಿಂಡರ್ ದರ: ನವದೆಹಲಿಯಲ್ಲಿ ₹803.00, ಮುಂಬೈನಲ್ಲಿ ₹802.50, ಗುರ್ಗಾಂವ್‌ನಲ್ಲಿ ₹811.50, ಮತ್ತು ಬೆಂಗಳೂರುನಲ್ಲಿ ₹805.50. ಚಂಡೀಗಢನಲ್ಲಿ ₹812.50, ಮತ್ತು ಜೈಪುರ್‌ನಲ್ಲಿ ₹806.50. ಪಾಟ್ನಾದಲ್ಲಿ ಈ ನಗರಗಳ ಪೈಕಿ ಅತ್ಯಂತ ಹೆಚ್ಚು ಬೆಲೆಯು ₹892.50. ಕೋಲ್ಕತಾದಲ್ಲಿ ₹829.00, ಮತ್ತು ಚೆನ್ನೈ ನಲ್ಲಿ ₹818.50 ಆಗಿರುತ್ತದೆ

Leave a Comment