ಪಿ‌ಪಿ‌ಎಫ್: ನಿಮ್ಮ ಹೂಡಿಕೆಗೆ ಖಚಿತ ಲಾಭ ಕೊಡುವ ಯೋಜನೆ! ಎಷ್ಟು ಗಳಿಸಬಹುದು ಗೊತ್ತಾ

ಪಿ‌ಪಿ‌ಎಫ್: ನಿಮ್ಮ ಹೂಡಿಕೆಗೆ ಖಚಿತ ಲಾಭ ಕೊಡುವ ಯೋಜನೆ! ಎಷ್ಟು ಗಳಿಸಬಹುದು ಗೊತ್ತಾ

ಸ್ನೇಹಿತರೇ ಇತ್ತೀಚಿನ ಕಾಲಮಾನದಲ್ಲಿ ಸಾಕಷ್ಟು ಜನರು ತಮ್ಮ ಕಷ್ಟಪಟ್ಟು ದುಡಿದ ಹಣವನ್ನು ಯಾವುದಾದರೂ ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಿ ಹಣವನ್ನು ದ್ವಿಗುಣಗೊಳಿಸುವ ಯೋಚನೆಯನ್ನು ಹೊಂದಿರುವುದು ಸಾಮಾನ್ಯವಾಗಿದೆ. ಏಕೆಂದರೆ ಈ ರೀತಿ ಹೂಡಿಕೆ ಮಾಡುವುದರಿಂದ ತೆರಿಗೆ ಹೊರೆಯಿಂದನು ಬರಬರಬಹುದು ಎನ್ನುವುದು ಎಲ್ಲರ ಅಭಿಪ್ರಾಯ.

ನೀವೇನಾದರು ನಿಮ್ಮಲ್ಲಿದ್ದ ಹಣವನ್ನು ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಿ ಹಣವನ್ನು ಡಬಲ್ ಗೊಳಿಸುವ ಮತ್ತು ತೆರಿಗೆ ಲಾಭವನ್ನು ಪಡೆಯಲು ಬಯಸುತ್ತಿದ್ದರೆ ಖಂಡಿತವಾಗಿಯು ಈ ಲೇಖನದಲ್ಲಿ ತಿಳಿಸಲಾಗುವ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿರುತ್ತದೆ.

ಪಬ್ಲಿಕ್ ಪ್ರಾವಿಡಂಟ್ ಫಂಡ್: ಸ್ನೇಹಿತರೇ 1968 ರಲ್ಲಿ ಪ್ರಾರಂಭಿಸಲಾದ ಈ ಯೋಜನೆ ಇಂದಿನವರೆಗೆ ಜನರ ಸಣ್ಣ ಮತ್ತು ದೊಡ್ಡ ಹೂಡಿಕೆಗಳನ್ನು ಸಂಗ್ರಹಿಸಿ ಹಣದ ಮೌಲ್ಯವನ್ನು ದ್ವಿಗುಣ ಮಾಡಿಕೊಟ್ಟಿದೆ. ಸಾಮಾನ್ಯವಾಗಿ ನೀವ್ರತ್ತಿ ನಿಧಿಯನ್ನು ಸಂಗ್ರಹಿಸಲು ಅಥವಾ ತೆರಿಗೆಯ ಕಡತಗಳಿಂದ ತಪ್ಪಿಸಿಕೊಳ್ಳಲು, ಸುರಕ್ಷಿತ ಮತ್ತು ಸ್ಥಿರ ಹೂಡಿಕೆಯಲ್ಲಿ ಜನರ ಆಯ್ಕೆ ಪಬ್ಲಿಕ್ ಪ್ರಾವಿಡಂಟ್ ಫಂಡ್ ಆಗಿರುತ್ತದೆ.

ಮಾರುಕಟ್ಟೆಯಲ್ಲಿ ಯಾವುದೇ ವ್ಯತ್ಯಾಸಗಳು ಗುರುತಿಸಿಕೊಂಡರು ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರ ಲಾಭದ ಮೇಲೆ ಪರಿಣಾಮ ಬೀಳುವುದಿಲ್ಲ. ಪಿ‌ಪಿ‌ಎಫ್ ಹೂಡಿಕೆಗಳು ಸರ್ಕಾರ ಬೆಂಬಲಿತವಾಗಿರುವುದರಿಂದ ಹೂಡಿಕೆದಾರರು ಖಚಿತ ಲಾಭಗಳನ್ನು ಪಡೆಯುತ್ತಾರೆ.

ಪಿ‌ಪಿ‌ಎಫ್ ನ ಪ್ರಮುಖ ಮಾಹಿತಿ: ಪಿ‌ಪಿ‌ಎಫ್ (Public Provident Fund) ಖಾತೆಯೂ ಹೂಡಿಕೆದಾರರ ಹೂಡಿಕೆಗೆ ವರ್ಷಕ್ಕೆ 7.1% ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ಹೂಡಿಕೆದಾರರು ಪ್ರತಿ ವರ್ಷ ಕನಿಷ್ಠ ರೂ 500 ಮತ್ತು ಗರಿಷ್ಠ ರೂ 1.4 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಪಿ‌ಪಿ‌ಎಫ್ ಖಾತೆಯ ಅವಧಿಯೂ 15 ವರ್ಷಗಳಾಗಿದ್ದು, ಈ ಯೋಜನೆಯು ಸರ್ಕಾರದ ಬೆಂಬಲದಿಂದ ಅಪಾಯರಹಿತ ಲಾಭಗಳನ್ನು ನೀಡುತ್ತದೆ. ಈ ಯೋಜನೆಯ ವಿಶೇಷ ಲಕ್ಷಣ ಏನೆಂದರೆ ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ರೂ 1.5 ಲಕ್ಷದವರೆಗೆ ಹೂಡಿಕೆಗಳು ತೇರೀಗೆ ವಿನಾಯಿಯತಿಯನ್ನು ಪಡೆದುಕೊಳ್ಳುತ್ತವೆ ಮತ್ತು ಹೂಡಿಕೆದಾರರು ಗಳಿಸಿದ ಲಾಭದ ಮೇಲೆ ತೆರಿಗೆ ಇರುವುದಿಲ್ಲ.

ಪಿ‌ಪಿ‌ಎಫ್ ಖಾತೆಯ ಅವಧಿಯು15 ವರ್ಷಗಳಾಗಿದ್ದು, ಹೂಡಿಕೆದಾರರು ಈ ಪಿ‌ಪಿ‌ಎಫ್ ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ ರೂ 500 ರಿಂದ ರೂ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಠೇವಣಿಗಳನ್ನು ಹೂಡಿಕೆದಾರರು ಒಟ್ಟಿಗೆ (ಲಂಪ್ ಸಮ್) ಅಥವಾ 12 ಕಂತುಗಳಲ್ಲಿ ಪಾವತಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಹೀಗಾಗಿ ಹೂಡಿದಾರರು ಖಾತೆಯನ್ನು ಸಕ್ರಿಯವಾಗಿಡಲು ವರ್ಷಕ್ಕೆ ಒಮ್ಮೆಯಾದರೂ ಹೂಡಿಸಬೇಕಾಗುತ್ತದೆ. ಠೇವಣಿಗಳ ಪಾವತಿಯನ್ನು ನಗದು, ಚೆಕ್, ಡಿಮಾಂಡ್ ಡ್ರಾಫ್ಟ್ ಅಥವಾ ಆನ್ಲೈನ್ ಟ್ರಾನ್ಸಫರ್ ಮೂಲಕ ಮಾಡಬಹುದು.ಈ ಯೋಜನೆಯಲ್ಲಿ ಜಂಟಿ ಖಾತೆಯ ಅನುಮತಿಯನ್ನು ನೀಡಲಾಗುವುದಿಲ್ಲ. ಹೀಗಾಗಿ ಪಿ‌ಪಿ‌ಎಫ್ ಹೂಡಿಕೆದಾರರು ಯಾವುದೇ ಸಮಯದಲ್ಲಾದರು ತಮ್ಮ ಖಾತೆಯನ್ನು ನಾಮ ನಿರ್ದೇಶಿತರ ಹೆಸರಿಗೆ ನೋಂದಣಿ ಮಾಡಿಸಬಹುದು.

Leave a Comment