RPF: ಭಾರತೀಯ ರೈಲ್ವೆ ಇಲಾಖೆಯ ರಕ್ಷಣಾ ಪಡೆಯಲ್ಲಿ 4660 ಬ್ರಹತ್ ಸಂಖ್ಯೆಯ ನೇಮಕಾತಿಗೆ ಅಹ್ವಾನವನ್ನು ಮಾಡಲಾಗಿದೆ
ಹೌದು ರೈಲ್ವೆ ಇಲಾಖೆಯ ರಕ್ಷಣಾ ಪಡೆಯ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸುವದರ ಮೂಲಕ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಆಸಕ್ತ ಅಭ್ಯರ್ಥಿಗಳು, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವವರು ಅರ್ಜಿಯನ್ನು ಇವತ್ತೇ ಸಲ್ಲಿಸಬಹುದು. ಇದರ ಸಂಪೂರ್ಣ ಮಾಹಿತಿ ನಿಮಗೆ ಈ ಲೇಖನದಲ್ಲಿ ಸಿಗುತ್ತದೆ. ತಪ್ಪದೆ ಪೂರ್ಣ ಲೇಖನವನ್ನು ಓದಿರಿ.
ಹಾಗಾದರೆ ಯಾವ ಹುದ್ದೆಗಳಿಗೆ ಅಹ್ವಾನ ಮಾಡಲಾಗಿದೆ ಮತ್ತು ಅದಕ್ಕೆ ಇರಬೇಕಾದಂತಹ ವಿದ್ಯಾರ್ಹತೆ, ಕನಿಷ್ಠ ಮತ್ತು ಗರಿಷ್ಟ ವಯೋಮಿತಿ, ವೇತನ ಶ್ರೇಣಿ,ಆಯ್ಕೆಯ ವಿಧಾನ, ಅರ್ಜಿ ಸಲ್ಲಿಸುವಿಕೆಗೆ ಸಂಭಂದ ಪಟ್ಟ ದಿನಾಂಕಗಳು, ಅರ್ಜಿ ಶುಲ್ಕ ಮುಂತಾದ ಹಲವು ಮಾಹಿತಿಯನ್ನು ವಿವರವಾಗಿ ಈ ಲೇಖನದಲ್ಲಿ ನೀಡಲಾಗಿದೆ.
ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಪೂರ್ಣ ಲೇಖನವನ್ನು ತಪ್ಪದೆ ಓದಿರಿ.
ಖಾಲಿ ಇರುವಂತಹ ಹುದ್ದೆಗಳು :
ರೈಲ್ವೆ ಇಲಾಖೆ ರಕ್ಷಣಾ ಪಡೆಯ ಅಧಿಕೃತ ಅನುಸೂಚನೆಯ ಪ್ರಕಾರ ಇಲಾಖೆಯಲ್ಲಿ 4660 ಹುದ್ದೆಗಳಿಗೆ ಅಹ್ವಾನ ಮಾಡಲಾಗಿದ್ದು ಅದರಲ್ಲಿ 4208 ಕಾನ್ಸ್ಟೇಬಲ್ ಹುದ್ದೆಗಳು ಮತ್ತು 452 ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇರುತ್ತವೆ ಎಂದು ಅಧಿಸೂಚನೆಯಲ್ಲಿ ನೀಡಲಾಗಿದೆ.
ವಿದ್ಯಾರ್ಹತೆ :
ಅರ್ಜಿಯನ್ನು ಸಲ್ಲಿಸಲು ಬಯಸುವವರು ಯಾವುದೇ ಒಂದು ಮಾನ್ಯತೆ ಪಡೆದಿರುವ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿಯ ಅಂಕಪಟ್ಟಿ ಇದ್ದರೆ ಸಾಕು ಎಂದು ರೈಲ್ವೆ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.
ವಯೋಮಿತಿ :
ರೈಲ್ವೆ ರಕ್ಷಣಾ ಪಡೆಯೂ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅರ್ಜಿದಾರರು ಕನಿಷ್ಠ 18 ವರ್ಷ ಮತ್ತು ಗರಿಷ್ಟ 28 ವರ್ಷದ ವಯೋಮಿತಿಯನ್ನು ದಾಟಿರಬಾರದು.
ಆಯ್ಕೆ ಮಾಡುವ ವಿಧಾನ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆಯನ್ನು ಮಾಡಲಾಗುವುದು ನಂತರ ದೈಹಿಕ ಪರೀಕ್ಷೆ ಹಾಗೂ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಸಂದರ್ಶನ ತೆಗುದುಕೊಳ್ಳುವುದರ ಮೂಲಕ ಆಯ್ಕೆಯನ್ನು ಮಾಡಲಾಗುವುದು.
ಅರ್ಜಿ ಶುಲ್ಕ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500ರೂ ಅರ್ಜಿ ಶುಲ್ಕ ಇರುತ್ತದೆ ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವವರಿಗೆ ಶುಲ್ಕ ಸಡಲಿಕೆಯನ್ನು ಮಾಡಲಾಗಿದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ :
15-04-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
14-05-2024
ಈ ಕೆಳಗಡೆ ಕೊಟ್ಟಿರುವ ಲಿಂಕ್ ಅನ್ನು ಬಳಿಸಿಕೊಂಡು ಇವತ್ತೇ ಅರ್ಜಿಯನ್ನು ಸಲ್ಲಿಸಿ ಮತ್ತು ಪರೀಕ್ಷೆಗೆ ತಯಾರಿಯನ್ನು ಮಾಡಿಕೊಳ್ಳಿ
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್