ಹೊಸ ಪಿಂಚಣಿ ಯೋಜನೆಯಲ್ಲಿ ಭಾರಿ ಬದಲಾವಣೆ! ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ
ಸ್ನೇಹಿತರೇ 2020 ರಲ್ಲಿ ಜಾರಿಗೊಳಿಸಿದ ಹೊಸ ತೆರಿಗೆ ಯೋಜನೆಯು ವಿವಾದಕ್ಕೀಡಾಗಿತ್ತು. ಹಳೆ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರಿಗೆ 2 ಲಕ್ಷದ ಆದಾಯ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಬೆಂಬಲಿಸಲು ಪ್ರಯತ್ನಿಸುತ್ತಿದ್ದು ಜುಲೈ 23, 2024 ರಂದು ನಡೆದ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಹೌದು ಸ್ನೇಹಿತರೇ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಿ ನೌಕರರ ಬೇಡಿಕೆ ಇದೆ, ಏಕೆಂದರೆ ಈ ಯೋಜನೆ ಅಡಿಯಲ್ಲಿ ನೌಕರರಿಗೆ 2 ಲಕ್ಷ ಆದಾಯ ತೆರಿಗೆಯ ಸ್ಟಾಂಡರ್ಡ್ ಕಡಿತವಾಗಿದೆ, ಆದರೆ ನಾವು ಆದಾಯ ತೆರಿಗೆ ನಿಯಮವನ್ನು ಗಮನಿಸಿದರೆ ಸೆಕ್ಷನ್ 80C ನಿಯಮದ ಅಡಿಯಲ್ಲಿ ಈ ಸ್ಟಾಂಡರ್ಡ್ ಕಡಿತವು ರೂ 1.5 ಲಕ್ಷ ಮತ್ತು ಸೆಕ್ಷನ್ 80CCD(1B) ನಿಯಮದಡಿಯಲ್ಲಿ ಕೇವಲ 50 ಸಾವಿರ ರೂಪಾಯಿಗಳು ಮಾತ್ರ.
ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಅಡಿಯಲ್ಲಿ ಪಿಂಚಣಿ ನೀಡಿದರೆ 2 ಲಕ್ಷ ರೂ ವರೆಗೆ ಯಾವುದೇ ಆದಾಯ ತೆರಿಗೆ ಕಡಿತ ಇರುವುದಿಲ್ಲ. ಇದರ ಉಪಯೋಗವನ್ನು ಪಡೆಯಲು ಕೇಂದ್ರ ಸರ್ಕಾರದ ಮೇಲೆ ನೌಕರರು OPS ಜಾರಿಗೊಳಿಸಲು ಬೇಡಿಕೆ ಇಟ್ಟಿದ್ದು, ಸರ್ಕಾರ ಈ ಬೇಡಿಕೆಗೆ ತನ್ನ ಒಪ್ಪಿಗೆ ನೀಡದೆ ಇರುವುದು ವಿವಾದ ಸ್ರಷ್ಟಿಸಿದೆ.
ಹೌದು ಈ ಕಾರಣದಿಂದ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ನೌಕರರ ಅನೂಕೂಲಕ್ಕೆ ಹೊಂದುವಂತೆ ಸರಳಿಕರಣ ಗೊಳಿಸಲು ಮುಂದಾಗಿದ್ದು 2024 ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಪಿಂಚಣಿ ಯೋಜನೆ ಸಂಬಂದಿತ ವಿವಾದ ಮತ್ತು ಗೊಂದಳಗಳಿಗೆ ತೆರೆ ಎಳೆಯಲು ನೌಕರರ ಹಿತ ದ್ರಷ್ಟಿಯಿಂದ ಹೊಸ ಪಿಂಚಣಿ ಯೋಜನೆ ಪರಿಶೀಲನೆಗೆ ಸಮಿತಿಯನ್ನು ರಚಿಸಲಾಗುವುದು ಅಂತ ಹೇಳಿದ್ದಾರೆ.