ಸ್ನೇಹಿತರೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ರಹಲಕ್ಷ್ಮಿ ಯೋಜನೆ (Gruhalakshmi Yojana) ತಕ್ಕಮಟ್ಟಿಗೆ ಗ್ರಹಲಕ್ಷ್ಮಿ ಮಹಿಳೆಯರ ಜೀವನ ಮಟ್ಟ ಸುಧಾರಿಸಿದೆ ಎನ್ನಬಹುದು. ಆದರೆ ಸರ್ಕಾರವು ಇದೀಗ ಗ್ರಹಲಕ್ಷ್ಮಿ ಯೋಜನೆಯಿಂದ ಕೆಲ ಮಹಿಳೆಯರ ಹೆಸರನ್ನು ಈ ಯೋಜನೆಯಿಂದ ಡಿಲೀಟ್ ಮಾಡಿ ಹೊಸ ಬದಲಾವಣೆಯನ್ನು ತರಲು ಹೊರಟಿದೆ. ಸರ್ಕಾರದ ಈ ನಿರ್ಧಾರಕ್ಕೆ ಕಾರಣ ತಿಳಿಯಲು ಬಯಸಿದರೆ ಲೇಖನವನ್ನು ಪೂರ್ತಿಯಾಗಿ ಓದಿ.
ಸ್ನೇಹಿತರೇ ಕಾಂಗ್ರೆಸ್ ಪಕ್ಷ ಅಧಿಕಾರದ ಖುರ್ಚಿ ಏರಿದ ಬೆನ್ನಲ್ಲೇ ಕೊಟ್ಟ ಮಾತಿಗೆ ತಪ್ಪದೆ ಮಹಿಳೆಯರ ಸಾಮಾಜಿಕ ಸಬಲಿಕರಣಕ್ಕಾಗಿ ಮತ್ತು ಆರ್ಥಿಕ ನೆರವು ನೀಡಲು ಶಕ್ತಿ ಯೋಜನೆ ಮತ್ತು ಗ್ರಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿತು. ಗ್ರಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜುಮಾನಿಗೆ ಮಾಸಿಕ 2000 ರೂ. ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಲು ನಿರ್ಧರಿಸಿತು. ಇಂದು ಈ ಎರಡು ಯೋಜನೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಹಿಳೆಯರ ಮುಖದಲ್ಲಿ ಸಂತೋಷ ತಂದಿವೆ.
ಸ್ನೇಹಿತರೇ ಗ್ರಹಲಕ್ಷ್ಮಿ ಯೋಜನೆಯ (Gruhalakshmi Yojana) ಕಂತುಗಳ ಹಣವು ಮೊದಲು ಸರಿಯಾದ ಸಮಯಕ್ಕೆ ಅರ್ಹ ಗ್ರಹಲಕ್ಷ್ಮಿ ಮಹಿಳೆಯರ ಖಾತೆಗೆ ಬಂದು ಜಮೆ ಆಗುತ್ತಿತ್ತು, ಆದರೆ ಕಳೆದ ಎರಡು ತಿಂಗಳ ಹಣ ಇನ್ನೂ ಜಮೆ ಆಗದೆ ಇರುವುದರಿಂದ ಕೆಲವರು ಈ ವಿಳಂಬಕ್ಕೆ ಕಾರಣ ಏನು ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರೆ.
ಈ ಕುರಿತು ಸ್ಪಷ್ಟವಾಗಿ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಮತ್ತು ಯಾವುದೇ ಉಹಾಪೋಹಗಳನ್ನು ನಂಬಬೇಡಿ ಅಂತ ಮಹಿಳೆಯರಲ್ಲಿ ಕೇಳಿಕೊಂಡಿದ್ದಾರೆ
ಇನ್ನೂ ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬಾಳ್ಕರ್ ಗ್ರಹಲಕ್ಷ್ಮಿ ಯೋಜನೆ ನಿಲ್ಲಿಸಲಾಗುವುದಿಲ್ಲ ಮತ್ತು ಯಾರಿಗೆಲ್ಲ ಕಳೆದ ಎರಡು ತಿಂಗಳ ಬಂದಿರುವುದಿಲ್ಲ ಅಂತವರ ಹಣವನ್ನು ಟ್ರೆಷರಿಗೆ ಹಾಕಲಾಗಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಅಂತ ಹೇಳಿದ್ದಾರೆ
ಗ್ರಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ?
ಸ್ನೇಹಿತರೇ ಇನ್ನೂ ರಾಜ್ಯ ಸರ್ಕಾರ ಯಾರಿಗೆಲ್ಲ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಿಲ್ಲವೋ ಅಂತವರ ಹೆಸರನ್ನು ಮತ್ತು ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ಗ್ರಹಲಕ್ಷ್ಮಿ ಯೋಜನೆಯ ಅರ್ಹತೆ ಪಡೆದುಕೊಂಡಿದ್ದರೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಮತ್ತು ನಕಲಿ ದಾಖಲೆಗಳನ್ನು ನೀಡಿ ಯಾರೆಲ್ಲಾ ಗ್ರಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೊ ಅಂತವರ ಹೆಸರನ್ನು ಈ ಯೋಜನೆಯ ಪಟ್ಟಿಯಿಂದ ಡಿಲೀಟ್ ಮಾಡಲಾಗುವುದು.