ಅಟಲ್ ಪಿಂಚಣಿ ಯೋಜನೆಯ ಚಂದಾದಾರರಿಗೆ ಸಿಗುವ ಕನಿಷ್ಠ ಖಾತರಿ ಮೊತ್ತವನ್ನು ದ್ವಿಗುಣಗೊಳಿಸುವ ಪ್ರಸ್ತಾವ!

ಅಟಲ್ ಪಿಂಚಣಿ ಯೋಜನೆಯ ಚಂದಾದಾರರಿಗೆ ಸಿಗುವ ಕನಿಷ್ಠ ಖಾತರಿ ಮೊತ್ತವನ್ನು ದ್ವಿಗುಣಗೊಳಿಸುವ ಪ್ರಸ್ತಾವ!

ಸ್ನೇಹಿತರೇ ದೇಶದೆಲ್ಲಡೇ ಜನಪ್ರಿಯತೆ ಗಳಿಸಿರುವ ಮತ್ತು 60 ವರ್ಷದ ನಂತರ ಹಿರಿಯ ನಾಗರಿಕರ ಆರ್ಥಿಕ ಬೆನ್ನೆಲಬಾಗಿ ಕಾರ್ಯ ನಿರ್ವಹಿಸುತ್ತಿರುವ ಅಟಲ್ ಪಿಂಚಣಿ ಯೋಜನೆಯ (APY) ಕುರಿತಾದ ಪ್ರಮುಖ ಸುದ್ದಿ ಹೊರಬಂದಿದೆ. ಏನೆಂದರೆ ಅಟಲ್ ಪಿಂಚಣಿ ಯೋಜನೆಯ (APY) ಅಡಿಯಲ್ಲಿ ನೀಡುತ್ತಿದ್ದ ಕನಿಷ್ಠ ಖಾತರಿ ಮೊತ್ತವನ್ನು (minimum guaranteed amount) ಹೆಚ್ಚಿಸುವ ಪ್ರಸ್ತಾಪವನ್ನು ಬಜೆಟ್ ನಲ್ಲಿ ಸೇರಿಸುವ ಸಾಧ್ಯತೆಗಳಿವೆ.

ಹೌದು ಜುಲೈ 23 ರಂದು ಜರುಗಳಿರುವ ಬಜೆಟ್ ಮಂಡನೆಯ ದಿನದಂದು ಅಟಲ್ ಪಿಂಚಣಿ ಯೋಜನೆಯ ಚಂದಾರರಿಗೆ (subscribers) ಸಿಗುವ ಕನಿಷ್ಠ ಖಾತರಿ ಮೊತ್ತವನ್ನು ದ್ವಿಗುಣಗೊಳಿಸುವ ಪ್ರಸ್ತಾವ ಜಾರಿಯಾಗುವ ನಿರೀಕ್ಷೆಯನ್ನಿಡಲಾಗಿದೆ.

ಈ ಕುರಿತಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷ ದೀಪಕ್ ಮೊಹಂತಿ ಅವರು ಸಹ ಖಾತರಿಪಡಿಸಿದ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಗತ್ಯವಿದೆ ಏಕೆಂದರೆ ಸರ್ಕಾರದ ಈ ನಿರ್ಧಾರವು ಅಟಲ್ ಪಿಂಚಣಿ ಯೋಜನೆ ಚಂದಾದಾರರ ಭವಿಷ್ಯದ ಅಗತ್ಯಗಳನ್ನು ಪೂರೈಸುವಲ್ಲಿ ನೆರವಾಗಲಿದೆ ಅಂತ ಕಳವಳ ವ್ಯಕ್ತ ಪಡಿಸಿದರು.

ಅಟಲ್ ಪಿಂಚಣಿ ಯೋಜನೆ (Atal Pension Yojana)

ಅಟಲ್ ಪಿಂಚಣಿ ಯೋಜನೆಯನ್ನು ಪ್ರಾಥಮಿಕವಾಗಿ ದೇಶದ ಅಸಂಘಟಿತ ವರ್ಗಗಳ ಆರ್ಥಿಕ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾರಿಗೊಳಿಸದಾಗಿದ್ದು, ಅಟಲ್ ಪಿಂಚಣಿ ಯೋಜನೆಯು ವೃದ್ಧಾಪ್ಯದಲ್ಲಿನ ಆರೋಗ್ಯ ಸಮಸ್ಯೆಗಳು ಮತ್ತು ಅಪಘಾತಗಳಿಂದ ಹಿರಿಯ ನಾಗರಿಕರ ಮೇಲೆ ಉಂಟಾಗುವ ಹಣಕಾಸಿನ ಒತ್ತಡಗಳ ವಿರುದ್ಧ ಭದ್ರತೆ ನೀಡುವಲ್ಲಿ ನೆರವಾಗುತ್ತದೆ.

ಇದು ಭಾರತದಲ್ಲಿನ 18 ರಿಂದ 40 ವರ್ಷದ ಎಲ್ಲ ನಾಗರಿಕರಿಗೆ ಲಭ್ಯವಿದ್ದು, ಏ‌ಪಿ‌ವೈ ಅಡಿಯಲ್ಲಿ ಚಂದಾದಾರರಿಗೆ ನಿಗದಿತ ಕನಿಷ್ಠ ಪಿಂಚಣಿ ಮಾಸಿಕವಾಗಿ 1,000 ಅಥವಾ 2,000 ಅಥವಾ 3,000 ಅಥವಾ 4,000 ಅಥವಾ 5,000 ರೂ. ಅನ್ನು ಅವರ ಕೊಡುಗೆಗಳ ಆಧಾರದ ಮೇಲೆ 60 ವರ್ಷಗಳ ವಯಸ್ಸಿನಲ್ಲಿ ನೀಡಲಾಗುತ್ತದೆ.

ಈ ಮಧ್ಯೆ ಚಂದಾದಾರರು ಮರಣ ಹೊಂದಿದರೆ ಅವನ ಕೊಡುಗೆಯ ಮಾಸಿಕ ಪಿಂಚನೀಯ ಮೊತ್ತವನ್ನು ಅವನ ಸಂಗಾತಿಗೆ ನೀಡಲಾಗುವುದು ಮತ್ತು ಅವರ ಮರಣದ ನಂತರ, ಚಂದಾದಾರರ 60 ನೇ ವಯಸ್ಸಿನಲ್ಲಿ ಸಂಗ್ರಹವಾದ ಪಿಂಚಣಿ ಮೊತ್ತವನ್ನು ಚಂದಾದಾರರ ನಾಮಿನಿಗೆ ಮರುಪಾವತಿ ಮಾಡಲಾಗುತ್ತದೆ.

ಸರ್ಕಾರದ ಮಾಹಿತಿಯ ಪ್ರಕಾರ ಜೂನ್ 20, 2024 ರ ಹೊತ್ತಿಗೆ ಅಟಲ್ ಪಿಂಚಣಿ ಯೋಜನೆಯಲ್ಲಿ ಒಟ್ಟು 66.2 ಮಿಲಿಯನ್‌ಗಿಂತಲೂ ಹೆಚ್ಚು ದಾಖಲಾತಿಗಳು ನಡೆದಿವೆ, 2023-24 ರ ಹಣಕಾಸು ವರ್ಷದಲ್ಲಿ 12.2 ಮಿಲಿಯನ್ ಹೊಸ ಖಾತೆಗಳನ್ನು ಸೇರಿಸಲಾಗಿದೆ. ಇದು ಅಟಲ್ ಪಿಂಚಣಿ ಯೋಜನೆಯ ಯಶಸ್ಸು ಮತ್ತು ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.

ಹೀಗಿರುವಾಗ ಸರ್ಕಾರ ಏ‌ಪಿ‌ವೈ ಯೋಜನೆಯನ್ನು ಇನ್ನು ಹೆಚ್ಚು ಜನಪ್ರಿಯಗೊಳಿಸಲು ಪ್ರಸ್ತುತ ನೀಡುತ್ತಿರುವ ಖಾತರಿ ಕನಿಷ್ಠ ಮೊತ್ತವನ್ನು ದ್ವಿಗುಣಗೊಳಿಸಲು ತಯಾರಿ ನಡೆಸಿದೆ ಅಂತ ಹೇಳಲಾಗುತ್ತಿದೆ.

Leave a Comment