ಸ್ನೇಹಿತರೇ ಏರ್ ಇಂಡಿಯ ಎರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಒಟ್ಟು 1049 ಗ್ರಾಹಕ ಸೇವಾ ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗೆ ಏಐಏಎಸ್‌ಎಲ್ ನೇಮಕಾತಿ 2024(AIASL Customer Service Executive recruitment 2024) ಅಧಿಕ್ರತ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂಬೈ ಅಂತರ್ ರಾಷ್ಟ್ರೀಯ ವಿವಾನ ನಿಲ್ದಾಣದಲ್ಲಿ ನಿಯೋಜಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ನೇಮಕಾತಿಯ ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಮೂಲಕ ಮಾಡಬಹುದು. ಜುಲೈ 14, 2024 ರೊಳಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಈ ಲೇಖನದಲ್ಲಿ ಏಐಏಎಸ್‌ಎಲ್ ನೇಮಕಾತಿ 2024ರ ಅರ್ಜಿ ಸಲ್ಲಿಕೆ ಸಂಬಂದಿತ ಅಭ್ಯರ್ಥಿಗಳ ವಿಧ್ಯಾರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕ ಇನ್ನಿತರ ಪ್ರಮುಖ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಮೊದಲು ನೇಮಕಾತಿಗೆ ಅರ್ಹತಾ ಮಾನದಂಡಗಳನ್ನು ತಿಳಿದುಕೊಳ್ಳುವುದು ಉತ್ತಮ.
ಹುದ್ದೆಗಳ ವಿವರ
ಏಐಏಎಸ್‌ಎಲ್ ನೇಮಕಾತಿ 2024ರ(AIASL recruitment 2024) ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದ್ದು, ಒಟ್ಟು 1049 ಹುದ್ದೆಗಳು ಖಾಲಿ ಇರುತ್ತವೆ. ಅದರಲ್ಲಿ ಪ್ರಮುಖವಾಗಿ
- ಸೀನಿಯರ್ ಗ್ರಾಹಕ ಸೇವ ಕಾರ್ಯಾನಿರ್ವಾಹಕ- 343
- ಗ್ರಾಹಕ ಸೇವ ಕಾರ್ಯಾನಿರ್ವಾಹಕ- 706
ವಿದ್ಯಾರ್ಹತೆ
- ಸೀನಿಯರ್ ಗ್ರಾಹಕ ಸೇವ ಕಾರ್ಯಾನಿರ್ವಾಹಕ(Sr. CSE ) ಹುದ್ದೆಗಳ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ 10+2+3 ಮಾದರಿಯಡಿಯಲ್ಲಿ ಪದವಿ ಪೂರ್ಣಗೊಂಡಿರಬೇಕು ಮತ್ತು ಅದರ ಜೊತೆಗೆ ಮೀಸಲಾತಿ, ಟಿಕೆಟಿಂಗ್ ಇತ್ಯಾದಿ ಕ್ಷೇತ್ರದಲ್ಲಿ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
- ಗ್ರಾಹಕ ಸೇವ ಕಾರ್ಯಾನಿರ್ವಾಹಕ(CSE) ಹುದ್ದೆಗಳ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವೀಧರರಾಗಿರಬೇಕು. ನೇಮಕಾತಿ ಸಂಸ್ಥೆಯು ಕಾರ್ಗೋ, ಏರ್‌ಲೈನ್, GHA ನಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಿದೆ
- ಅಭ್ಯರ್ಥಿಗಳು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುವ ಓದುವ ಕೌಶಲ್ಯವನ್ನು ಹೊಂದಿರಬೇಕು
- ಆಸಕ್ತ ಅಭ್ಯರ್ಥಿಗಳು ಸಾಮಾನ್ಯ ಕಂಪ್ಯೂಟರ್ ಜ್ನಾನ ಹೊಂದಿರಬೇಕು
ಹೆಚ್ಚಿನ ಮಾಹಿತಿಗಾಗಿ ಏಐಏಎಸ್‌ಎಲ್ ನೇಮಕಾತಿ 2024 ಆಫೀಷಿಯಲ್ ನೋಟಿಫಿಕೇಶನ್ ಲಿಂಕ್ ನೀಡಲಾಗಿದ್ದು ಅದರ ಮೇಲೆ ಒತ್ತಿರಿ
ಅರ್ಜಿ ಶುಲ್ಕ
ಏಐಏಎಸ್‌ಎಲ್ ನೇಮಕಾತಿಯ(AIASL recruitment 2024) ಅರ್ಜಿ ಶುಲ್ಕ ನಾನ್ ರಿಫನ್ಡೆಬಲ್ ಆಗಿದ್ದು, ಅರ್ಜಿ ಶುಲ್ಕವು ಅಭ್ಯರ್ಥಿಗಳ ಕೆಟಗಿರಿಯ ತಕ್ಕಂತೆ ಅನ್ವಯವಾಗುತ್ತದೆ
- ಎಸ್‌ಸಿ/ಎಸ್‌ಟಿ/ನೀವ್ರತ್ತ ಸೇನಾಧಿಕಾರಿ- ಅರ್ಜಿ ಶುಲ್ಕ ಇರುವುದಿಲ್ಲ
- ಇನ್ನಿತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ- ರೂ. 500
ವಯೋಮಿತಿ
ಅಧಿಕ್ರತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ ವಯಸ್ಸು 33 ವರ್ಷಗಳಾಗಿರುತ್ತವೆ. ಮತ್ತು ವಿವಿಧ ವರ್ಗದ ಅಭ್ಯರ್ಥಿಗಳ ವಯಸ್ಸಿನ ಸಡಲಿಕೆ ಈ ಕೆಳಗಿನಂತಿದೆ
- ಓಬಿಸಿ ಅಭ್ಯರ್ಥಿಗಳಿಗೆ- 03 ವರ್ಷಗಳು
- ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ- 05 ವರ್ಷಗಳು
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಏಐಏಎಸ್‌ಎಲ್ ಸಂಸ್ಥೆಯು ವಿವಿಧ ಹುದ್ದೆಗಳಿಗುಣವಾಗಿ ವೇತನ ನೀಡಲಿದ್ದು ಅದರ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
- ಸೀನಿಯರ್ ಗ್ರಾಹಕ ಸೇವ ಕಾರ್ಯಾನಿರ್ವಾಹಕ- ರೂ. 28,605
- ಗ್ರಾಹಕ ಸೇವ ಕಾರ್ಯಾನಿರ್ವಾಹಕ- ರೂ. 27,450
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಏಐಏಎಸ್‌ಎಲ್ ಸಂದರ್ಶನಕ್ಕಾಗಿ ಬೇಕಾಗುವ ದಾಖಲೆಗಳು
- ಮೂರು ಪಾಸ್‌ಪೋರ್ಟ್ ಗಾತ್ರದ ಫೋಟೋ
- ಪ್ರೌಢಶಾಲೆಯಿಂದ ಪದವಿ ಮತ್ತು ಸ್ನಾತಕೋತ್ತರವರೆಗಿನ ಶೈಕ್ಷಣಿಕ ಪ್ರಮಾಣಪತ್ರಗಳ ಅಟೆಸ್ಟೆಡ್ ಮಾಡಿಸಿರುವಂತಹ ಪ್ರತಿಗಳು.
- ಪಾಸ್ಪೋರ್ಟ್
- ಜಾತಿ ಪ್ರಮಾಣಪತ್ರ
- ಪ್ರಸ್ತುತ ಉದ್ಯೋಗದಾತರಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರ
- ಮಾಜಿ ಸೈನಿಕರಾಗಿದ್ದಾರೆ ಅವರ ಡಿಸ್ಚಾರ್ಜ್ ಪ್ರಮಾಣಪತ್ರ
- ಹಿಂದಿನ ಸೇವೆಯಲ್ಲಿನ ಅನುಭವ ಪ್ರಮಾಣಪತ್ರಗಳು
- ಚಾಲನಾ ಪರವಾನಿಗೆ
- ಅರ್ಜಿ ಶುಲ್ಕದ ರಶೀದಿ
- ನಿವಾಸ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಪಾನ್ ಕಾರ್ಡ್