ಮೇ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬರಲು ಈವಾಗಲೇ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿರಿ.Anna Bhagya Scheme Amount
ಸ್ನೇಹಿತರೇ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ತಾನು ಘೋಷಿಸಿದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತ 5 ಕೆಜಿ ಅಕ್ಕಿಯ ಹಣವನ್ನು ಪ್ರತಿ ಕೇಜಿ ಗೆ 34 ರೂ ಅಂತೆ ಒಬ್ಬ ವ್ಯಕ್ತಿಗೆ 170 ರೂ ಅನ್ನು ನೀಡುತ್ತಿದೆ ಮತ್ತು ಫಲಾನುಭವಿಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ
ಸರ್ಕಾರ ಇನ್ನೂ ಸಹ ಏಪ್ರಿಲ್ ಕಂತಿನ ಫಲಾನುಭವಿಗಳ ಹಣವನ್ನು ಸಂದಾಯ ಮಾಡಲು ಬಾಕಿ ಇರುವ ಮತ್ತು ಮೇ ತಿಂಗಳಿನ ಅಕ್ಕಿ ಹಣವನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಲು ಹೊರಟಿದ್ದು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ
ಹಣ ಜಮಾ ಆಗಿರುವುದನ್ನು ನೋಡುವುದು ಹೇಗೆ (DBT Status check)
- ಮೊದಲನೇದಾಗಿ ಕರ್ನಾಟಕ ಸರ್ಕಾರದ ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಿ ahara.kar.nic.in/status
- ನಿಮಗೆ ಪರದೆಯ ಮೇಲೆ ಸೇವೆಗಳು ಅಂತ ಆಯ್ಕೆ ಕಾಣುವುದು ಅದರ ಮೇಲೆ ಒತ್ತಿರಿ ಮಾಡಿ
- ನಂತರ ಡಿಬಿಟಿ(DBT) ಸ್ಟೇಟಸ್ ಆಯ್ಕೆ ಕಾಣುವುದು ಅದರ ಮೇಲೆ ಒತ್ತಿರಿ ಮಾಡಿ
- ನಂತರ ತೆರೆಯ ಮೇಲೆ ಕೇಳುವ ತಿಂಗಳು ,ವರ್ಷ ಮತ್ತು ಪಡಿತರ ಚೀಟಿ(ರೇಷನ್ ಕಾರ್ಡ್ )ಸಂಖ್ಯೆಯನ್ನು ನಮೂದಿಸಿ,ಕ್ಯಾಪ್ಚರ್ ಮೇಲೆ ಒತ್ತಿರಿ
- ತೆರೆಯ ಮೇಲೆ ನಿಮಗೆ ಸಂದಾಯ ಆಗಿರುವ ಹಣದ ಸಂಪೂರ್ಣ ವಿವರವು ಕಾಣುವುದು
ಹಣ ಬಾರದೇ ಇದ್ದರೆ ಇದನ್ನು ಕಡ್ಡಾಯವಾಗಿ ಮಾಡಿರಿ
- ಸ್ನೇಹಿತರೇ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಾರದೇ ಇದ್ದರೆ ನೀವು ಕಡ್ಡಾಯವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ
- ಇದರ ಜೊತೆಗೆ NPCI ಮ್ಯಾಪಿಂಗ್ ಕೂಡ ಮಾಡಿಸಬೇಕಾಗುತ್ತದೆ
- ಹಾಗೂ ನಿಮ್ಮ ಆಧಾರ್ ಕಾರ್ಡ್ ಗೆ 10 ವರ್ಷ ತುಂಬಿದ್ದರೆ ಅದನ್ನು ನವೀಕರಿಸಿ ಇದು ಕಡ್ಡಾಯವಾಗಿರುತ್ತದೆ
E-KYC ಮಾಡಿಸುವುದು ಹೇಗೆ
- ಹತ್ತಿರದ ಪಡಿತರ ಕಚೇರಿಗೆ ಭೇಟಿ ನೀಡಿ
- ಕುಟುಂಬದ ಸದಸ್ಯರ ಭಾವಚಿತ್ರ ಮತ್ತು ಪಡಿತರ ಚೀಟಿಯ ಜೆರಾಕ್ಸ್ ಪ್ರತಿ ಮತ್ತು ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಹೋಗಿ ಪಡಿತರ ಅಂಗಡಿಯಲ್ಲಿ ಸಲ್ಲಿಸಬೇಕು
- ಸಿಬ್ಭಂದಿಯು ಆಧಾರ್ ಕಾರ್ಡ್ ಧ್ರಢಿಕರಣಕ್ಕೆ ನಿಮ್ಮ ಫಿಂಗರ್ ಪ್ರಿಂಟ್ ಕೇಳಬಹುದು
- ನಂತರ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ SMS ಕಳುಹಿಸಲಾಗುತ್ತದೆ ಹಾಗೂ ಕೊನೆಯಲ್ಲಿ ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೆ SMS ಮೂಲಕ ತಿಳಿಸಲಾಗುತ್ತದೆ
ಸ್ನೇಹಿತರೇ ಈ ತಿಂಗಳ (ಮೇ ) ಅನ್ನಭಾಗ್ಯ ಯೋಜನೆಯ ಹಣವು ಮೇ 20ರ ಒಳಗಡೆ ಬಿಡುಗಡೆ ಆಗಲಿದ್ದು E-KYC ಆಗದೆ ಇದ್ದವರು ತಕ್ಷಣವೇ ನಿಮ್ಮ ಪಡಿತರ ಕಚೇರಿಗೆ/ಅಂಗಡಿಗೆ ಭೇಟಿ ನಿಡಿರಿ
ಇನ್ನಷ್ಟು ಓದಿರಿ
ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಬಿಡುಗಡೆ.ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.ಎರಡನೇ ಕಂತಿನ ಹಣ ಬಿಡುಗಡೆ?
ಸಿಹಿ ಸುದ್ದಿ:ಪಿಎಮ್ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ?ಇಲ್ಲಿದೆ ಪೂರ್ಣ ಮಾಹಿತಿ
ನಿಮ್ಮ ಮಗಳ ಮದುವೆಗೆ ಸರ್ಕಾರದಿಂದ 60,000 ರೂ ಸಹಾಯಧನ. ಈ ಹೊಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ