ಸಿಹಿಸುದ್ದಿ: ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ
ಸ್ನೇಹಿತರೇ ಸ್ವಾತಂತ್ರ್ಯ ಕಾಲದಿಂದಲೂ ಭಾರತದ ಜನರ ವಿಶ್ವಾಸ ಗಳಿಸಿಕೊಂಡು ಬಂದಿರುವ ಸಂಸ್ಥೆ ಯಾವುದೆಂದರೆ ಅದುವೇ “ಟಾಟಾ ಗ್ರೂಪ್”. ಇದೀಗ ಟಾಟಾ ಗ್ರೂಪ್ ನ ದೇಶದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡಲು “ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ” ವನ್ನು ನೀಡಲು ಘೋಷಿಸಿದೆ.
ಈ ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ 2024 ಮೂಲಕ 11ನೇ ಮತ್ತು 12 ನೇ ತರಗತಿಯಲ್ಲಿ ಅಥವಾ ಡಿಪ್ಲೋಮಾ ಕೋರ್ಸ್ ಗಳಲ್ಲಿ ವ್ಯಾಸಾಂಗ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಶುಲ್ಕದ 80% ಹಣದ ಮೌಲ್ಯವನ್ನು ಅಥವಾ 10 ರಿಂದ 12 ಸಾವಿರ ರೂಪಾಯಿಯ ವರೆಗೆ ಸಹಾಯಧನವನ್ನು ನೀಡಲಾಗುವುದು.
ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರ ಅರ್ಹತೆಗಳು: ವಿದ್ಯಾರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಗಳಿಂದ ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಗಳಲ್ಲಿ ಪ್ರವೇಶ ಪಡೆದಿರಬೇಕು. ಅದಲ್ಲದೆ, ಅರ್ಜಿದಾರರು ತಮ್ಮ ಹಳೆಯ ತರಗತಿಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣಹೊಂದಿರಬೇಕು. ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು ರೂ 2.5 ಲಕ್ಷಕ್ಕಿಂತ ಹೆಚ್ಚಿರಬಾರದು.
ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರ ದಾಖಲೆಗಳು: ಅರ್ಜಿ ಸಲ್ಲಿಸಲ್ಲಿಸಲು ಅರ್ಜಿದಾರನ ಆದಾಯ ದಾಖಲೆಗಳು, ಆಧಾರ್ ಕಾರ್ಡ್, ಭಾವಚಿತ್ರ, ಅಕಾಡೆಮಿಕ್ ಫೀ ರಿಸೀಟ್, ಬ್ಯಾಂಕ್ ಖಾತೆಯ ವಿವರಗಳು, ಪ್ರವೇಶಾತಿ ದಾಖಲೆಗಳು ಮತ್ತು ಅಂಕ ಪಟ್ಟಿ ಬೇಕಾಗಿರುತ್ತದೆ.
ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ವಿಧಾನ: ಮೊದಲನೆಯದಾಗಿ ವಿದ್ಯಾರ್ಥಿಗಳು buddy4study ವೆಬ್ಸೈಟ್ ಗೆ ಭೇಟಿ ನೀಡಿ ಲಾಗಿನ್ ಆಗಿ. ನೀವು ಈ ಹಿಂದೆ ಎಂದು ಲಾಗಿನ್ ಆಗದೆ ಇದ್ದರೆ buddy4study ಯಲ್ಲಿ ನಿಮ್ಮ ಈ-ಮೇಲ್ ಮೊಬೈಲ್ ನಂಬರ್ ನೀಡುವ ಮೂಲಕ ರಿಜಿಸ್ಟರ್ ಆಗಿ. ಅಲ್ಲಿ ನಿಮಗೆ “ಟಾಟ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ 2024” ಆಯ್ಕೆ ಕಾಣುವುದು ಅದರ ಮೇಲೆ ಒತ್ತಿರಿ. ನಂತರ “ಸ್ಟಾರ್ಟ್ ಅಪ್ಲಿಕೇಶನ್” ಆಯ್ಕೆಯ ಮೇಲೆ ಒತ್ತಿ ಅರ್ಜಿಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ಟರ್ಮ್ಸ್ ಅಂಡ್ ಕಂಡಿಶನ್ ಮತ್ತು ಪ್ರಿವಿವ್ ಆಯ್ಕೆ ಮಾಡಿ ಸಬ್ಮಿಟ್ ಬಟನ್ ಮೇಲೆ ಒತ್ತಿರಿ