7ನೇ ವೇತನ ಆಯೋಗ: ಜುಲೈ 15ರಂದು ಸರ್ಕಾರದ ಮಹತ್ವದ ಸಭೆ! ಸರ್ಕಾರಿ ನೌಕರರ ಹೆಚ್ಚಿದ ಒತ್ತಡಕ್ಕೆ ರಾಜ್ಯ ಸರ್ಕಾರದ ಹೊಸ ನಿರ್ಧಾರ

ಸ್ನೇಹಿತರೇ 7ನೇ ವೇತನ ಆಯೋಗದ (7th pay commission) ವರದಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಮೇಲೆ ದಿನೇ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ನಡೆದ ಕಳೆದ ಎರಡು ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಯಾವುದೇ ಚರ್ಚೆಗಳು ನಡೆದಿರುವುದಿಲ್ಲ. ರಾಜ್ಯ ಸರ್ಕಾರ ಈ ನಡೆಯು ಸರ್ಕಾರಿ ನೌಕರ ಕೆಂಗಣ್ಣಿಗೆ ಗುರಿಯಾಗಿದೆ.

ಕಳೆದ ಮಾರ್ಚ್ 16 ರಂದು ಹಿರಿಯ ನೀವ್ರತ್ತ ಅಧಿಕಾರಿ ಕೆ. ಸುಧಾಕರ್ ಅವರ ನೇತ್ರತ್ವದ ತಂಡವು 7ನೇ ವೇತನ ಆಯೋಗದ ಪರಿಷ್ಕರಣೆಯ 244 ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಲ್ಲಿಸಿತ್ತು. ವರದಿಯಲ್ಲಿರುವ ಪ್ರಮುಖ ಅಂಶ ಏನೆಂದರೆ, ಸರ್ಕಾರಿ ನೌಕರ ವೇತನದಲ್ಲಿ 27.5% ಹೆಚ್ಚಳ ಆಗಬೇಕು ಅನ್ನುವ ಶಿಫಾರಸ್ಸು ಮಾಡಿದೆ.

ಲೋಕಸಭಾ ಚುನಾವಣೆ ನಡೆಯುವ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ವರದಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸುವ ಭರವಸೆಯನ್ನು ಸರ್ಕಾರಿ ನೌಕರಿಗೆ ನೀಡಿದ್ದರು. ಆದರೆ ಜುಲೈ ತಿಂಗಳು ಬಂದರು ರಾಜ್ಯ ಸರ್ಕಾರ ಆಯೋಗದ ವರದಿ ಜಾರಿ ಮಾಡಲು ಹಿಂದೇಟು ಇಡುತ್ತಿರುವುದು ಸರ್ಕಾರಿ ನೌಕರಿಗೆ ತೀವ್ರ ಬೇಸರವನ್ನುಂಟು ಮಾಡಿದೆ.

ರಾಜ್ಯ ಸರ್ಕಾರದ ಈ ನಡೆಗೆ ಕಾರಣ ಏನು?

ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದೆ. ಇದರ ಮದ್ಯೆ 7ನೇ ವೇತನ ಆಯೋಗದ ವರದಿ (7th pay commission report) ಜಾರಿಗೊಳಿಸಿದರೆ ಸರ್ಕಾರದ ಬೊಕ್ಕಸ ಖಾಲಿಯಾಗಿ ಬರೋಬ್ಬರಿ 17 ರಿಂದ 18 ಸಾವಿರ ಕೋಟಿ ರೂಪಾಯಿಗಳು ಸರ್ಕಾರದ ಮೇಲೆ ಹೊರೆಯಾಗಲಿದೆ. ಈ ಕಾರಣದಿಂದ ಸರ್ಕಾರ ವರದಿ ಅನುಷ್ಠಾನ ವಿಚಾರದಲ್ಲಿ ಎಚ್ಚರ ವಹಿಸಿ ಹಿಂದೇಟು ಹಾಕುತ್ತಿದೆ ಅಂತ ಪ್ರತಿಪಕ್ಷದ ನಾಯಕರು ಮತ್ತು ಇನ್ನಿತರ ತಜ್ಞರು ಆರೋಪ ಮಾಡಿದ್ದರೆ.

ಹಂತ ಹಂತವಾಗಿ 7ನೇ ವೇತನ ಆಯೋಗದ ವರದಿ ಜಾರಿ?

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದರಿಂದ ರಾಜ್ಯದ ಹಣಕಾಸಿನ ಸ್ಥಿತಿಗತಿಗಳು ಹೇಗಿರಲಿವೆ? ಅಂತ ತಿಳಿಯಲು ಹಣಕಾಸು ಇಲಾಖೆಗೆ ಈ ಕುರಿತು ವರದಿ ತಯಾರಿಸಲು ಹೇಳಿದ್ದಾರೆ. ರಾಜ್ಯ ಹಣಕಾಸು ಇಲಾಖೆಯು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದೆ ಅಂತ ಪ್ರಮುಖ ಮಾಧ್ಯಮಗಳು ತಿಳಿಸಿವೆ.

ಇನ್ನೂ ಜುಲೈ 15 ರಂದು ಮುಖ್ಯಮಂತ್ರಿ ಅವರ ನೇತ್ರತ್ವದಲ್ಲಿ ಸಚಿವ ಸಂಪುಟ ಸಭೆ ಜರುಗಳಿದ್ದು, ರಾಜ್ಯ ಸರ್ಕಾರಿ ನೌಕರರು ಈ ಸಭೆಯಲ್ಲಾದರೂ ವೇತನ ಹೆಚ್ಚಳ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳುಬಹುದು ಅನ್ನುವ ನಿರೀಕ್ಷೆಯನ್ನಿಟ್ಟಿದ್ದಾರೆ.

ಜುಲೈ 07 ರಂದು ಸರ್ಕಾರಿ ನೌಕರರ ಸಂಘದ ಸಭೆ

ಇನ್ನೂ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯೋಗವು ಕೆಲ ದಿನಗ ಹಿಂದೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರನ್ನು ಕೆಲ ದಿನಗಳ ಹಿಂದೆ ಭೇಟಿಯಾಗಿ 7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೊಳಿಸಲು ಒತ್ತಡ ಹೆರಿತ್ತು. ಇಷ್ಟೆಲ್ಲ ಪ್ರಯತ್ನಗಳು ನಡೆಸಿದರೂ ಊಹಿಸಿದ ಫಲಿತಾಂಶ ಸಿಗದ ಕಾರಣ ದಿನಾಂಕ 07-07-2024 ರಂದು ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ಸಭೆ ಸೇರಿ ಸಿ.ಎಸ್. ಷಡಾಕ್ಷರಿ ಅವರ ಅಧ್ಯಕ್ಷತೆಯಲ್ಲಿ ಮುಂದಿನ ಹೋರಾಟಗಳ ರೂಪುರೇಶಗಳನ್ನು ಬಗ್ಗೆ ಚರ್ಚಿಸಲಿದೆ.

Leave a Comment