ಸ್ನೇಹಿತರೇ, ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಪಂಚಾಯತಿ ಸಿಈಓ ಗಳ ಸಭೆಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಸಂಬಂದಿತ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳ ಈ ನಿರ್ಧಾರ ಕೆಲವರಿಗೆ ಶುಭಸುದ್ದಿಯಾದರೆ, ಇನ್ನೂ ಕೆಲವರಿಗೆ ನಡುಕ ಉಂಟು ಮಾಡಿದೆ.
ಹೌದು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಾಗಿನಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಜಿ ಹಾಕುವವರ ಸಂಖ್ಯೆ ಪ್ರತಿ ದಿನವೂ ಹೆಚ್ಚುತ್ತಿದೆ. ಈ ಹಿಂದೆ ಸರ್ಕಾರ ಹಲವಾರು ಬಾರಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಕೆಲವೇ ಗಂಟೆಗಳ ಅವಕಾಶ ನೀಡಿದ್ದರಿಂದ ಸರ್ವರ್ ಸಮಸ್ಯೆಯಿಂದಾಗಿ ಎಲ್ಲರೂ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಇನ್ನೂ ಲಕ್ಷಾಂತರ ಜನ ರಾಜ್ಯ ಸರ್ಕಾರ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಯಾವಾಗ ಅವಕಾಶ ಮಾಡಿಕೊಡುತ್ತದೆ ಅಂತ ಕಾಯುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳ ಬೆಂಗಳೂರಿನ ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಪಂಚಾಯತಿ ಸಿಈಓ ಗಳ ಸಭೆಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಸಂಬಂದಿತ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು.
ರಾಜ್ಯದಲ್ಲಿ ಒಟ್ಟು 80% ಜನ ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಜನರು ಬಡತನ ರೇಖೆಗಿಂತ ಕೆಳಗಿರಲು ಹೇಗೆ ಸಾಧ್ಯ. ನೀತಿ ಆಯೋಗದ ನಿಯಮಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಕೇವಲ 5.67% ಜನರು ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು. ಆದರೆ ರಾಜ್ಯದಲ್ಲಿ 1.47 ಕೋಟಿ ಕುಟುಂಬಗಳು (4.67 ಕೋಟಿ ಜನರು) ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಅಂತ ಕಳವಳ ವ್ಯಕ್ತ ಪಡಿಸಿದರು.
ಇಂತವರ ಬಿಪಿಎಲ್ ರೇಷನ್ ಕಾರ್ಡ್ ರದ್ದು?
- ಜಿಲ್ಲಾಧಿಕಾರಿಗಳು ಮತ್ತು ಪಂಚಾಯತಿ ಸಿಈಓ ಗಳ ಸಭೆಯಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್ (new bpl card) ಅರ್ಜಿ ಶುರುವಾಗುವ ಮೊದಲು ಯಾರ್ಯಾರು ನಕಲಿ ದಾಖಲೆಗಳನ್ನು ಕೊಟ್ಟಿ, ಕಾನೂನು ಬಾಹಿರವಾಗಿ ಬಿಪಿಎಲ್ ಸೌಲಭ್ಯವನ್ನು ಪಡೆಯುತ್ತಿದ್ದಾರೋ ಅಂತವರ ದಾಖಲೆಗಳನ್ನು ಕೂಡಲೇ ಪರಿಶೀಲಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಅಂತ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
- ಯಾರು ಕಾರು, ಲಾರಿ ಮುಂತಾದ ದೊಡ್ಡ ದೊಡ್ಡ ವಾಹನಗಳನ್ನು ಹೊಂದಿರುತ್ತಾರೋ ಅಂತವರಿಗೆ ಸಾಮಾನ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್ ನಿಯಮಗಳು ಅನ್ವಯವಾಗುವುದಿಲ್ಲ.
- ಸರ್ಕಾರಿ ಹುದ್ದೆಯಲ್ಲಿದ್ದು ಅಥವಾ ಖಾಸಗಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರೆ ಅಧಿಕಾರಿಗಳು ಅಂತವರ ಆದಾಯವನ್ನು ಪರಿಶೀಲಿಸಿ ತ್ವರಿತವಾಗಿ ಬಿಪಿಎಲ್ ಕಾರ್ಡ್ ನ್ನು ರದ್ದು ಮಾಡಲಾಗುವುದು
- ಇನ್ನೂ ಕೆಲವರು ಮನೆಯ ಹಿರಿಯ ನಾಗರಿಕರು ಮರಣ ಹೊಂದಿದರು ಅಂತವರ ಹೆಸರನ್ನು ಅಳಿಸಿರಲ್ಲ, ಅಥವಾ ಮದುವೆಯಾದ ಮನೆಯ ಹೆಣ್ಣು ಮಕ್ಕಳ ಹೆಸರು ಕೂಡ ಕೆಲವರು ಅಳಿಸಿರಲ್ಲ ಅಂತವರ ರೇಷನ್ ಕಾರ್ಡ್ ಪರಿಶೀಲಿಸಿ ತಪ್ಪು ಕಂಡಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು
- ಯಾರು ಮೂರು ಹೆಕ್ಟೇರ್ ಗಿಂತ ಹೆಚ್ಚು ಭೂಮಿಯನ್ನು ಹೊಂದಿರುತ್ತಾರೋ ಅಂತವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ಇರುವುದಿಲ್ಲ