ಸಿ‌ಬಿ‌ಸಿ‌ಐ ನೇಮಕಾತಿ 2024: ಬೆಂಗಳೂರು ಆದಾಯ ತೆರಿಗೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸ್ನೇಹಿತರೇ ಬೆಂಗಳೂರು ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಅಂಡ್ ಕಸ್ಟಮ್ ಟ್ಯಾಕ್ಸ್ ಇಲಾಖೆಯಲ್ಲಿ(CBCI) ಸಂಸ್ಥೆಯಲ್ಲಿ ಖಾಲಿ ಇರುವ ತೆರಿಗೆ ಸಹಾಯಕ, ಸ್ಟೆನೋಗ್ರಾಫರ್ ಮತ್ತು ಹವಾಲ್ದಾರ್ ನ ಒಟ್ಟು 16 ಹುದ್ದೆಗಳ ಭರ್ತಿ ಮಾಡಲು ಸಿ‌ಬಿ‌ಸಿ‌ಐ ಸಂಸ್ಥೆಯು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಿ‌ಬಿ‌ಸಿ‌ಐ ನೇಮಕಾತಿ 2024 (CBCI Recruitment 2024) ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.

ಸಿ‌ಬಿ‌ಸಿ‌ಐ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಆಗಸ್ಟ್ 09, 2024 ಆಗಿರುತ್ತದೆ ಹೀಗಾಗಿ, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿರಿ.

ಸಿ‌ಬಿ‌ಸಿ‌ಐ ನೇಮಕಾತಿ 2024 ರ ಶೀರ್ಷಿಕೆ:

  • ಸಂಸ್ಥೆಯ ಹೆಸರು: ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಅಂಡ್ ಕಸ್ಟಮ್ ಟ್ಯಾಕ್ಸ್ ಇಲಾಖೆಯಲ್ಲಿ(CBCI)
  • ಹುದ್ದೆಯ ಹೆಸರು: ತೆರಿಗೆ ಸಹಾಯಕ, ಸ್ಟೆನೋಗ್ರಾಫರ್ ಮತ್ತು ಹವಾಲ್ದಾರ್ ಹುದ್ದೆಗಳು
  • ಒಟ್ಟು ಖಾಲಿ ಹುದ್ದೆಗಳು: 16
  • ಅರ್ಜಿಯ ವಿಧಾನ: ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ
  • ಉದ್ಯೋಗದ ಸ್ಥಳ: ಬೆಂಗಳೂರು

ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: 19.06.2024
  • ಅರ್ಜಿಯ ಕೊನೆಯ ದಿನಾಂಕ: 09.08.2024

ವಯೋಮಿತಿ:

ಸಿ‌ಬಿ‌ಸಿ‌ಐ ನೇಮಕಾತಿ 2024 ರ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ 27 ವರ್ಷ ಮತ್ತು ಕನಿಷ್ಠ 18 ವರ್ಷದ ವಯೋಮಿತಿಯು ಹೊಂದಿರಬೇಕಾಗುತ್ತದೆ.

ವಿದ್ಯಾರ್ಹತೆ ಮತ್ತು ವೇತನ

1) ತೆರಿಗೆ ಸಹಾಯಕ

  • ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಯಾವುದೇ ಒಂದು ವಿಶ್ವವಿದ್ಯಾಲದಿಂದ ಡಿಗ್ರಿ (ಪದವಿ) ಪೂರ್ಣಗೊಳಿಸಿರಬೇಕು
  • ವೇತನ: ರೂ. 25,000 ರಿಂದ ರೂ. 81,000 ಪ್ರತಿ ತಿಂಗಳು

2) ಸ್ಟೆನೋಗ್ರಾಫರ್

  • ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಯಾವುದೇ ಒಂದು ವಿದ್ಯಾ ಸಂಸ್ಥೆಯಿಂದ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು
  • ವೇತನ: ರೂ. 25,000 ರಿಂದ ರೂ. 81,000 ಪ್ರತಿ ತಿಂಗಳು

3) ಹವಾಲ್ದಾರ್

  • ವಿದ್ಯಾರ್ಹತೆ: ಮಾನ್ಯತೆ ಪಡೆದಿರುವ ಯಾವುದೇ ಒಂದು ವಿದ್ಯಾ ಸಂಸ್ಥೆಯಿಂದ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು
  • ವೇತನ: ರೂ. 18,000 ರಿಂದ ರೂ. 56,900 ಪ್ರತಿ ತಿಂಗಳು

ಸಿ‌ಬಿ‌ಸಿ‌ಐ ನೇಮಕಾತಿ 2024 ರ ವಿದ್ಯಾರ್ಹತೆ ಮತ್ತು ವೇತನದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೆಳಗಡೆ ನೀಡಿರುವ ಅಫೀಷಿಯಲ್ ನೋಟಿಫಿಕೇಶನ್ ಲಿಂಕಿನ ಮೇಲೆ ಒತ್ತಿರಿ.

ಆಯ್ಕೆ ಪ್ರಕ್ರಿಯೆ:

  • ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಅಂಡ್ ಕಸ್ಟಮ್ ಟ್ಯಾಕ್ಸ್ ಇಲಾಖೆಯಲ್ಲಿ(CBCI) ವತಿಯಿಂದ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟ, ಇಂಟರ್ ಯುನಿವರ್ಸಿಟಿ ಪಂದ್ಯಕೂಟ ಅಥವಾ ಶಾಲಾ ಕಾಲೇಜುಗಳ ತಂಡದಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಕ್ರೀಡೆಗಳ ಮಾಹಿತಿ ತಿಳಿಯಲು ಸಿ‌ಬಿ‌ಸಿ‌ಐ ನೇಮಕಾತಿ ಅಫೀಷಿಯಲ್ ನೋಟಿಫಿಕೇಶನ್ ಅನ್ನು ಪರಿಶೀಲಿಸಿ.
  • ಈ ಮೇಲೆ ತಿಳಿಸಿದ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ದೈಹಿಕ ಪರೀಕ್ಷೆ ನಡೆಸಿ ಎರಡನೇ ಹಂತದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿಯ ನಮೂನೆಯನ್ನು ಪಡೆದುಕೊಂಡು, ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ, ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸಿ.

ಅರ್ಜಿ ಸಲ್ಲಿಕೆಯ ವಿಳಾಸ

ಕ್ರೀಡಾ ಅಧಿಕಾರಿ, ಕೇಂದ್ರ ತೆರಿಗೆಗಳ ಆಯುಕ್ತರ ಕಛೇರಿ, ಬೆಂಗಳೂರು ಉತ್ತರ ಕಮಿಷನರೇಟ್, ನಂ.59,ನೆಲ ಮಹಡಿ, ಎಚ್‌ಎಮ್‌ಟಿ ಭವನ, ಗಂಗಾನಗರ, ಬೆಂಗಳೂರು- 560032

Leave a Comment