ಸಿ‌ಡಿಏ‌ಸಿ ನೇಮಕಾತಿ 2024: 250 ಹುದ್ದೆಗಳಿಗೆ ಭರ್ಜರಿ ನೇಮಕಾತಿ

ಸಿ‌ಡಿಏ‌ಸಿ ನೇಮಕಾತಿ 2024: 250 ಹುದ್ದೆಗಳಿಗೆ ಭರ್ಜರಿ ನೇಮಕಾತಿ

ಸ್ನೇಹಿತರೇ ಸೆಂಟರ್ ಫಾರ್ ಡೆವಲೋಪ್ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ 2024 (Centre for Development of Advanced Computing (CDAC)) ನೇಮಕಾತಿಗಾಗಿ ಭರ್ಜರಿ ಅಧಿಸೂಚನೆಯನ್ನು ಪ್ರಕಟಿಲಾಗಿದ್ದು, ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಇತರ ಹುದ್ದೆಗಳೊಂದಿಗೆ, ವೇತನವು ವಾರ್ಷಿಕ 3,00,000 ರೂ. ರಿಂದ 22,90,000 ರೂ.ವರೆಗೆ ಇರುವುದು. ಬೆಂಗಳೂರು, ಶಿಮ್ಲಾ, ದೆಹಲಿ ಮತ್ತು ಪುಣೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ 250 ಹುದ್ದೆಗಳಿಗೆ ಭರ್ತಿ ನಡೆಯಲಿದೆ.

ಹುದ್ದೆಗಳ ವಿವರಗಳು: ಸಿ‌ಡಿ‌ಏಸಿ ನೇಮಕಾತಿ 2024 ರಲ್ಲಿನ ಹುದ್ದೆಗಳ ಹಂಚಿಕೆಯನ್ನು ಇಲ್ಲಿ ವಿವರಿಸಲಾಗಿದ್ದು ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳಿಗೆ 43 ಸ್ಥಾನಗಳು ಮತ್ತು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ 100 ಸ್ಥಾನಗಳಿವೆ. ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ 1 ಹುದ್ದೆ ಮತ್ತು ಪ್ರಾಜೆಕ್ಟ್ ಮ್ಯಾನೇಜರ್, ಪ್ರೋಗ್ರಾಂ ಮ್ಯಾನೇಜರ್, ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್ ಮತ್ತು ನಾಲೇಜ್ ಪಾರ್ಟ್ನರ್ ಹುದ್ದೆಗಳಿಗೆ 19 ಸ್ಥಾನಗಳಿವೆ.

ಪ್ರಾಜೆಕ್ಟ್ ಆಫೀಸರ್ 3 ಹುದ್ದೆಗಳು ಮತ್ತು ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ 5 ಹುದ್ದೆಗಳಿವೆ. ಜೊತೆಗೆ, ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್/ಪ್ರಾಜೆಕ್ಟ್ ಲೀಡರ್ ಹುದ್ದೆಗೆ 41, ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್ ಹುದ್ದೆಗೆ 16 ಮತ್ತು ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ 22 ಸ್ಥಾನಗಳಿವೆ.

ಅರ್ಹತೆ ಮಾನದಂಡಗಳು: ಈ ಹುದ್ದೆಯ ಅರ್ಹತೆಗಳು, ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಿಂದ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳಿಗೆ B.E ಅಥವಾ B.Tech, M.E ಅಥವಾ M.Tech, ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್, ಪ್ರೋಗ್ರಾಂ ಮ್ಯಾನೇಜರ್, ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್ ಮತ್ತು ನಾಲೇಜ್ ಪಾರ್ಟ್ನರ್ ಹುದ್ದೆಗಳಿಗೆ ಸಹ ಈ ಮೇಲೆ ತಿಳಿಸಿದ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು, ಅದರಲ್ಲಿ ಕೆಲವು ಹುದ್ದೆಗಳಿಗಾಗಿ ಪಿಹೆಚ್‌ಡಿ ಅಗತ್ಯವಿದೆ.

ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ CA, ಸ್ನಾತಕೋತ್ತರ ಪದವಿಗಳು, MBA, M.Com ಅಥವಾ ಮಾಸ್ಟರ್ಸ್ ಡಿಗ್ರಿ ಅಗತ್ಯವಿದೆ. ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ ಹುದ್ದೆಗಳು B.Com, M.Com, ಪದವಿ, ಸ್ನಾತಕೋತ್ತರ ಪದವಿ ಅಥವಾ MBA ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ B.E ಅಥವಾ B.Tech, M.E ಅಥವಾ M.Tech, ಸ್ನಾತಕೋತ್ತರ ಪದವಿ ಅಥವಾ ಪಿಹೆಚ್‌ಡಿ ಅಗತ್ಯವಿದೆ.

ವಯೋಮಿತಿ: ವಿವಿಧ ಹುದ್ದೆಗಳಿಗೆ ವಯೋಮಿತಿ ಹೀಗಿದೆ:ಪ್ರಾಜೆಕ್ಟ್ ಅಸೋಸಿಯೇಟ್: 30 ವರ್ಷ, ಪ್ರಾಜೆಕ್ಟ್ ಎಂಜಿನಿಯರ್: 35 ವರ್ಷ, ಪ್ರಾಜೆಕ್ಟ್ ಮ್ಯಾನೇಜರ್: 50 ವರ್ಷ, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್: 35 ವರ್ಷ, ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್/ಪ್ರಾಜೆಕ್ಟ್ ಲೀಡರ್: 40 ವರ್ಷ.

ಪ್ರಾಜೆಕ್ಟ್ ಮ್ಯಾನೇಜರ್/ಪ್ರೋಗ್ರಾಂ ಮ್ಯಾನೇಜರ್/ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್/ನಾಲೇಜ್ ಪಾರ್ಟ್ನರ್/ಪ್ರಾಜೆಕ್ಟ್ ಆಫೀಸರ್/ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್/ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಗರೀಷ್ಟ ವಯೋಮಿತಿಯು ಸಿ‌ಡಿಏ‌ಸಿ ನಿಯಮಾವಳಿಯಂತೆ ನಿಗದಿಪಡಿಸಲಾಗುವುದು. ಇದರ ಜೊತೆಗೆ ವಯೋ ಸಡಲಿಕೆಯನ್ನು ಸಹ ನೀಡಲಾಗಿದೆ.

ವೇತನ: ಪ್ರಾಜೆಕ್ಟ್ ಅಸೋಸಿಯೇಟ್: 3,60,000 ರೂ. – 5,04,000 ರೂ, ಪ್ರಾಜೆಕ್ಟ್ ಎಂಜಿನಿಯರ್: 4,49,000 ರೂ. – 7,11,000 ರೂ ಪ್ರಾಜೆಕ್ಟ್ ಮ್ಯಾನೇಜರ್: 12,63,000 ರೂ. – 22,90,000 ರೂ, ಪ್ರಾಜೆಕ್ಟ್ ಆಫೀಸರ್: 5,00,000 ರೂ. – 7,00,000 ರೂ, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್: 3,00,000 ರೂ, ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್/ಪ್ರಾಜೆಕ್ಟ್ ಲೀಡರ್: 8,49,000 ರೂ. – 14,00,000 ರೂ.

ಪ್ರಾಜೆಕ್ಟ್ ಮ್ಯಾನೇಜರ್/ಪ್ರೋಗ್ರಾಂ ಮ್ಯಾನೇಜರ್/ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್/ನಾಲೇಜ್ ಪಾರ್ಟ್ನರ್/ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್/ಮಾಡ್ಯೂಲ್ ಲೀಡ್/ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ವೇತನವು ಸಿ‌ಡಿಏ‌ಸಿ ನಿಯಮಾವಳಿಯಂತೆ ನಿಗದಿ ಪಡಿಸಲಾಗುವುದು

ಅರ್ಜಿ ಶುಲ್ಕ: ಸಿ‌ಡಿಏ‌ಸಿ ನೇಮಕಾತಿ 2024 ಕ್ಕೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ, ಇದರಿಂದ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಮತ್ತು ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಕೆ ವಿಧಾನ: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಸಿಡ್ಯಾಕ್ ನೇಮಕಾತಿ ಪೋರ್ಟಲ್‌ಗೆ ಭೇಟಿ ನೀಡಬೇಕು ಮತ್ತು ಆನ್‌ಲೈನ್ ಅಲ್ಲಿ ಕೇಳುವ ವಿವರಗಳನ್ನು ನಮೂದಿಸಿ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ನಂತರ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಪ್ರತಿ ಮತ್ತು ಇತ್ತೀಚಿನ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ, ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.

ಆನ್‌ಲೈನ್ ಅರ್ಜಿ ಪ್ರಕ್ರಿಯೆ 20 ಜುಲೈ 2024 ರಂದು ಪ್ರಾರಂಭವಾಗಿದ್ದು. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು 16 ಆಗಸ್ಟ್ 2024 ರ ಒಳಗಾಗಿ ಸಲ್ಲಿಸಬೇಕು.

ಪ್ರಮುಖ ಲಿಂಕ್ ಗಳು:

ಅಪ್ಲೈ ಮಾಡಲು ಲಿಂಕ್ : ಇಲ್ಲಿ ಒತ್ತಿ ಅಧಿಕ್ರತ ಪೋರ್ಟಲ್: ಇಲ್ಲಿ ಒತ್ತಿ

ಸಿ‌ಡಿಏ‌ಸಿ ನೇಮಕಾತಿ 2024, ಸುದ್ಧಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಮುನ್ನಡೆಸಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು ಈ ಸುವರ್ಣಾವಕಾಶವನ್ನು ಆಸಕ್ತರು ಕಳೆದುಕೊಳ್ಳಬೇಡಿ. ಹೀಗಾಗಿ ಆಗಸ್ಟ್ 16 ಆಗಸ್ಟ್ 2024 ರ ಒಳಗಾಗಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.

Leave a Comment