ಸ್ನೇಹಿತರೇ ರಾಜ್ಯ ಸರ್ಕಾರವು ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ರೈತರಿಗೆ ಬೆಳೆ ವಿಮೆ (Crop Incurance) ನೀಡಲು ಮುಂದಾಗಿದ್ದು , ಇದರ ಅರ್ಜಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆಸಕ್ತ ರೈತರು ಕೂಡಲೇ ಬರಗಾಲದಿಂದ ನಷ್ಟ ಅನುಭವಿಸಿದ ನಿರ್ದಿಷ್ಟ ಬೆಳೆಗೆ ವಿಮೆಯನ್ನು ಪಡೆಯಬಹುದಾಗಿದೆ.
ಹಾಗಾದರೆ ಏನಿದು ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ? ನೀವು ಸಹ ಅರ್ಜಿ ಸಲ್ಲಿಸಲು ಆಸಕ್ತರೆ? ಆದರೆ ಬೆಳೆ ವಿಮೆ ಅರ್ಜಿ ಸಲ್ಲಿಕೆ ಬೇಕಾಗುವ ದಾಖಲೆಗಳು ಅಥವಾ ಅರ್ಹತೆಗಳು ಏನು? ಅನ್ನುವ ಗೊಂದಲ ಇದ್ದರೆ, ಈ ಲೇಖನದಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಹಾಗಾಗಿ ಲೇಖನದಲ್ಲಿ ನೀಡಿರುವ ಪ್ರತಿಯೊಂದು ಅಂಶವನ್ನು ಪೂರ್ತಿಯಾಗಿ ಓದಿರಿ
ಸ್ನೇಹಿತರೇ ರೈತರು ತಾವು ಬಿತ್ತಿದ ಬೆಳೆಗೆ ಅತೀವ್ರಷ್ಟಿ, ಅನಾವ್ರಷ್ಟಿಯಿಂದ ನಷ್ಟವನ್ನು ಅನುಭವಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಕಾರಣದಿಂದ ರೈತರು ಸಂಕಷ್ಟಕ್ಕೊಳಗಾಗಿ ತಮ್ಮ ದಿನನಿತ್ಯದ ಜೀವನವನ್ನು ನಡೆಸುವುದು ಸಹ ತುಂಬಾ ಕಷ್ಟವಾಗಿರುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಹಾರ ಮತ್ತು ಬೆಳೆಯನ್ನು ನೀಡುವುದರಿಂದ ತಾತ್ಕಾಲಿಕವಾಗಿ ರೈತರಿಗೆ ಆರ್ಥಿಕ ನೆರವು ಸಿಕ್ಕಂತಾಗುತ್ತದೆ. ಇದರಿಂದ ರೈತರು ಇನ್ನಷ್ಟು ಕ್ರಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಪ್ರಯತ್ನ ಮಾಡಬಹುದು.
ರೈತ ಸುರಕ್ಷಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ನೊಂದಣಿ ಆರಂಭ
ಇದೀಗ ರಾಜ್ಯ ಸರ್ಕಾರ ಮುಂಗಾರಿನಿಂದ ಬೆಳೆ ನಷ್ಟ ಅನುಭವಿಸಿದ ಬೆಳೆಗಳಿಗೆ ಅಥವಾ ಮುಂದಿನ ದಿನಗಳಲ್ಲಿ ಬೆಳೆ ಹಾನಿಯಾದರೆ ಅಂತಹ ಬೆಳೆಗಳಿಗೆ ಸರ್ಕಾರದಿಂದ ವಿಮೆಯ ಮುಖಾಂತರ ನಷ್ಟ ಪರಿಹಾರವನ್ನು ನೀಡಲಾಗುವುದು.
ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ?
- ರೈತರು ಆಹಾರ ಬೆಳೆ: ರೈತರಿಗೆ ಆಹಾರ ಬೆಳೆಗಳ ವಿಮೆಯ ಅರ್ಜಿ ಸಲ್ಲಿಕೆಗೆ 31-07-2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
- ಎಣ್ಣೆಕಾಳು ಮತ್ತು ವಾರ್ಷಿಕ ವಾಣಿಜ್ಯ ಬೆಳೆಗಳು: ಈ ಬೆಳೆಗಳ ವಿಮೆಯ ಅರ್ಜಿ ಸಲ್ಲಿಕೆ ಮಾಡಲು ರೈತರಿಗೆ 15-01-2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
- ತೋಟಗಾರಿಕಾ ಬೆಳೆ: ರೈತರಿಗೆ ತೋಟಗಾರಿಕಾ ಬೆಳೆಗಳ ವಿಮೆಯ ಅರ್ಜಿ ಸಲ್ಲಿಕೆಗೆ 31-07-2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
ಬೆಳೆ ವಿಮೆ ನೊಂದಣಿ ಮಾಡಿಸಲು ಬೇಕಾಗುವ ದಾಖಲೆಗಳು?
- ಬ್ಯಾಂಕ್ ಖಾತೆಯ ವಿವರಗಳು
- ಗುರುತಿನ ದಾಖಲೆ (ಆಧಾರ್ ಕಾರ್ಡ್)
- ಜಮೀನಿಗೆ ಸಂಬಂದಿತ ದಾಖಲೆಗಳು (ಪಹಣಿ ಪತ್ರ)
ರೈತರು ಬೆಳೆ ವಿಮೆಯ (Crop Insurance) ಅರ್ಜಿ ಸಲ್ಲಿಕೆ ಮಾಡಲು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ (CSC) ಭೇಟಿ ನೀಡಬಹುದು ಅಥವಾ ಕರ್ನಾಟಕ್ ಒನ್ ಅಥವಾ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.