ಬೆಳ್ಳಂಬೆಳಿಗ್ಗೆ 7ನೇ ವೇತನ ಆಯೋಗದ ಅನುಷ್ಠಾನಕ್ಕೆ ದಿನಾಂಕ ಫಿಕ್ಸ್. ಸಿ‌ಎಮ್ ಸಿದ್ದರಾಮಯ್ಯ ಅವರಿಂದ ಭರವಸೆ?

ಬೆಳ್ಳಂಬೆಳಿಗ್ಗೆ 7ನೇ ವೇತನ ಆಯೋಗದ ಅನುಷ್ಠಾನಕ್ಕೆ ದಿನಾಂಕ ಫಿಕ್ಸ್. ಸಿ‌ಎಮ್ ಸಿದ್ದರಾಮಯ್ಯ ಅವರಿಂದ ಭರವಸೆ?

ಸ್ನೇಹಿತರೇ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನಕ್ಕೆ ಸರ್ಕಾರಿ ನೌಕರರ ನಿರಂತರ ಪ್ರಯತ್ನ ನಡೆಯುತ್ತಿದ್ದು ಜುಲೈ 04 ರಂದು ಮುಖ್ಯ ಮಂತ್ರಿಗಳ ನೇತ್ರತ್ವದಲ್ಲಿ ಜರುಗಲಿರುವ ಸಚಿವ ಸಂಪುಟ ಸಭೆಯಲ್ಲಿ ಶಿಫಾರಸ್ಸುಗಳ ಜಾರಿ ಕುರಿತು ಮಹತ್ವದ ನಿರ್ಧಾರ ಹೊರಬರಲಿದೆ.

ಸ್ನೇಹಿತರೇ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ತೀವ್ರ ಬೇಡಿಕೆಯನ್ನು ಇಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಾಗಿ ಆಯೋಗದ ಶಿಫಾರಸ್ಸುಗಳ ಜಾರಿ ಕುರಿತು ರಾಜ್ಯ ಸರ್ಕಾರದ ಮೇಲೆ ನೌಕರರು ಭರವಸೆಯಣ್ಣಿಟ್ಟಿದ್ದರು, ಆದರೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಕೆಲವು ಮಂತ್ರಿಗಳು ಅಪಸ್ವರ ನುಡಿದಿದ್ದರಿಂದ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಹೆಚ್ಚಿನ ಚರ್ಚೆ ನಡೆದಿರುವುದಿಲ್ಲ.

ಸಭೆಯ ಬಳಿಕ ರಾಜ್ಯ ಸರ್ಕಾರಿ ನೌಕರರು ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಜಾರಿ ಕುರಿತು ಯಾವುದೇ ಚರ್ಚೆಗಳು ಮಾಡದೆ ಇರುವುದು ರಾಜ್ಯದ ನೌಕರರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಮತ್ತು ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಹೀಗೆ ಮುಂದುವರೆಯುವುದು ಅಂತ ಮಾಧ್ಯಮಗಳಿಗೆ ಮುಂದೆ ತಮ್ಮ ಅಲಳನ್ನು ಹಂಚಿಕೊಂಡಿದ್ದರು.

ಆದರೆ ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಮತ್ತು ಸರ್ಕಾರಿ ನೀವ್ರತ್ತ ನೌಕರರ ಸಂಘದ ಅಧ್ಯಕ್ಷರಾದ ಎಲ್. ಭೈರಪ್ಪ ಅವರ ನೇತ್ರತ್ವದ ನಿಯೋಗವು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿ, 7ನೇ ವೇತನ ಆಯೋಗ ಅನುಷ್ಠಾನಕ್ಕೆ ಮನವಿ ಮಾಡಿದ್ದು, ಜುಲೈ 04 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳುವ ಭರವಸೆ ಮುಖ್ಯ ಮಂತ್ರಿಯವರು ನೀಡಿರುತ್ತಾರೆ.

ಜುಲೈ ನಾಲ್ಕರಂದು ಅನುಷ್ಠಾನಕ್ಕೆ ಒಪ್ಪಿಗೆ?

ಈಗಾಗಲೇ ಸರ್ಕಾರ ಐದು ಗ್ಯಾರಂಟೀ ಯೋಜನೆಗಳನ್ನು ಜಾರಿ ಮಾಡಿದ್ದು, ರಾಜ್ಯ ಸರ್ಕಾರವು ತನ್ನ ಬಹುತೇಕ ವೆಚ್ಚವನ್ನು ಈ ಗ್ಯಾರಂಟಿಗಳನ್ನು ಪೂರೈಸುವಲ್ಲಿ ಖರ್ಚು ಮಾಡುತ್ತದೆ. ಹೊಸದಾಗಿ 7ನೇ ವೇತನ ಆಯೋಗ ಅನುಷ್ಠಾನ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಬಹುದು ಅನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಸಂಬಂಧ ಹಿಂದೇಟು ಹಾಕುತ್ತಲೇ ಬಂದಿದೆ, ಆದರೆ ಕೆಲವು ದಿನಗಳಿಂದ ಸರ್ಕಾರಿ ನೌಕರರು ಶಿಫಾರಸ್ಸುಗಳ ಅನುಷ್ಠಾನ ಆಗದಿದ್ದರೆ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ನೀಡಿದ್ದರು.

ಸ್ನೇಹಿತರೇ ಇತ್ತೀಚ್ಚಿಗೆ ನಡೆದ ಸಭೆಯೊಂದರಲ್ಲಿ ಎಸ್. ಷಡಾಕ್ಷರಿ ಅವರು ಮಾತನಾಡಿ 7ನೇ ವೇತನ ಆಯೋಗ ಅನುಷ್ಠಾನದ ಕುರಿತು ರಾಜ್ಯದ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು ಮುಂದಿನ ಜುಲೈ ಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಶಿಫಾರಸ್ಸುಗಳ ಜಾರಿ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಅಂತ ತಿಳಿಸಿದರು.

Leave a Comment