ಪಿ‌ಎಮ್ ವಿಶ್ವಕರ್ಮ ಯೋಜನೆ ಅಡಿಯಲ್ಲಿ ರೂ15000 ವಿತರಣೆ! ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ತಿಳಿಯಿರಿ

ಸ್ನೇಹಿತರೇ ಕೇಂದ್ರ ಸರ್ಕಾರವು ಪಿ‌ಎಮ್ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಟೂಲ್ ಕಿಟ್ ವಿತರಣೆಯನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಪ್ರಸ್ತುತ ಇದರ ವಿತರಣೆ ಸ್ಥಗಿತಗೊಳಿಸಿದ್ದು ಶೀಘ್ರದಲ್ಲೇ ಇದರ ವಿತರಣೆ ಆರಂಭಗೊಳ್ಳಲಿದೆ. ಹೀಗಾಗಿ ನೀವು ಸಹ ಪಿ‌ಎಮ್ ವಿಶ್ವಕರ್ಮ ಯೋಜನೆಯ ಲಾಭ ಪಡೆದುಕೊಳ್ಳಲು ಬಯಸಿದ್ದರೆ, ಈ ಯೋಜನೆಗೆಸಂಬದಿತ ಅರ್ಹತೆಗಳು, ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಅಂತಾ ತಿಳಿದುಕೊಳ್ಳುವುದು ಬಹುಮುಖ್ಯ.

ಪಿ‌ಎಮ್ ವಿಶ್ವಕರ್ಮ ಯೋಜನೆ

ಪಿ‌ಎಮ್ ವಿಶ್ವಕರ್ಮ ಯೋಜನೆ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ದೇಶದೆಲ್ಲಡೆ ಇರುವ 18 ವರ್ಷ ಮೇಲ್ಪಟ್ಟ ಕುಶಲಕರ್ಮಿಗಳಿಗೆ ಅಂದರೆ ಕೈ ಉಪಕರಣಗಳನ್ನು ಬಳಸಿ ಜೀವನ ಸಾಗಿಸುವ, ಈ ಉದ್ಯೋಗವನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ (ಕುಂಬಾರಕ, ಹಗ್ಗ ತಯಾರಕ, ಕ್ಷೌರಿಕ, ಮಾಲೆ ತಯಾರಕರು, ಬಡಗಿ ಮುಂತಾದವರು) ವ್ಯಕ್ತಿಗಳಿಗೆ ಉದ್ಯೋಗ ಸಂಬಂದಿತ ಉಪಕರಣಗಳನ್ನು ಖರೀದಿಸಲು ರೂ 15,000 ಆರ್ಥಿಕ ನೆರವು ಒದಗಿಸುತ್ತಿದೆ.

ಅರ್ಜಿ ಸಲ್ಲಿಸಿದ ಅರ್ಹ ಕುಶಲಕರ್ಮಿಗಳಿಗೆ ರೂ 15,000 ಸಹಾಯಧನವನ್ನು ನೀಡುವುದಲ್ಲದೆ, ಅಗತ್ಯವಿದ್ದರೆ ಅರ್ಜಿ ಸಲ್ಲಿಸಿದವರಿಗೆ ಪ್ರತಿಶತ 5% ಬಡ್ಡಿದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಸಹ ನೀಡುತ್ತಿದೆ. ಅರ್ಜಿ ಹಾಕಿದ ಕುಶಲಕರ್ಮಿಗಳ ದಾಖಲೆಗಳ ಪರಿಶೀಲನೆ ನಡೆಸಿ ಅರ್ಜಿದಾರರು ಅರ್ಹತೆಯನ್ನು ಪಡೆದಿದ್ದರೆ, ಅವರ ಖಾತೆಗೆ ನೇರವಾಗಿ 15,000 ರೂ ಜಮೆ ಮಾಡಲಾಗುವುದು.

ಯಾವೆಲ್ಲ ಸಾಂಪ್ರದಾಯಿಕ ವಹಿವಾಟುಗಳು  ಪಿ‌ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವುದು?

  • ಚಮ್ಮಾರ ಪಾದರಕ್ಷೆ ತಯಾರಕ
  • ಗಾರೆ ಮೇಸ್ತ್ರಿ
  • ಬುಟ್ಟಿ/ ಚಾಪೆ/ ಹಿಡಿಸೂಡಿ ತಯಾರಿಕರು
  • ಸೆಣಬು ನೇಕಾರರು
  • ಗೊಂಬೆ ಮತ್ತು ಆಟಿಕೆ ತಯಾರಕ
  • ಕ್ಷೌರಿಕ
  • ಬಡಗಿ
  • ದೋಣಿ ತಯಾರಕ 
  • ರಕ್ಷಾಕವಚ ತಯಾರಕ 
  • ಕಮ್ಮಾರ 
  • ಸುತ್ತಿಗೆ ತಯಾರಿಕ
  • ಅಕ್ಕಸಾಲಿಗರು
  • ಕಮ್ಮಾರ
  • ಕಲ್ಲು ಒಡೆಯುವವನು

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

  • ಗುರುತಿನ ಚೀಟಿ (ಆಧಾರ್ ಕಾರ್ಡ್)
  • ಪ್ಯಾನ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಭಾವಚಿತ್ರ
  • ಉದ್ಯೋಗ ಸಂಬದಿತ ಪತ್ರ ಅಥವಾ ದಾಖಲೆಗಳು

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ, ನಿಮ್ಮ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಅಲ್ಲಿರುವ ಕ್ಯಾಪ್ಚ ಕೋಡ್ ನಮೂದಿಸಿ
  • ನಿಮ್ಮ ಆಧಾರ್ ಸಂಖ್ಯೆಯ ವಿವರವನ್ನು ನಮೂದಿಸಿ
  • ಈಗ ರಿಜಿಸ್ಟ್ರೇಷನ್ ಫಾರ್ಮ್ ಅನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿರಿ
  • ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಡಿಜಿಟಲ್ ತರಬೇತಿ ನೀಡಿ, ಪ್ರಮಾಣ ಪಾತ್ರವನ್ನು ನೀಡಲಾಗುವುದು
  • ಕೆಲ ದಿನಗಳ ನಂತರ ನಿಮ್ಮ ಖಾತೆಗೆ 15,000 ರೂ ಜಮೆ ಮಾಡಲಾಗುವುದು

Leave a Comment