ಈಪಿಎಫ್‌ಓ ನೇಮಕಾತಿ 2024: 26 ವಿಜಿಲನ್ಸ್ ಅಸಿಸ್ಟಂಟ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಸ್ನೇಹಿತರೇ ಈಪಿಎಫ್‌ಓ 2024 ನೇ ಸಾಲಿನ 26 ವಿಜಿಲನ್ಸ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 09, 2024 ರ ಮೊದಲು ವಿಜಿಲನ್ಸ್ ಅಸಿಸ್ಟಂಟ್ ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾರೆಲ್ಲಾ ವಿಜಿಲನ್ಸ್ ಕ್ಷೇತ್ರದಲ್ಲಿ ಇ ಮೊದಲು ಸೇವೆ ಸಲ್ಲಿಸಿ ಅನುಭವ ಹೊಂದಿರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು.
ಈಪಿಎಫ್‌ಓ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಜುಲೈ ಅಲ್ಲಿ ಬಿಡುಗಡೆ ಮಾಡಲಾದ ಅಧಿಸೂಚನೆಯ ಮೂಲಕ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ವಿಜಿಲನ್ಸ್ ಹುದ್ದೆಯಲ್ಲಿ ನಿಯೋಜಿಸಲಾಗುವುದು. ಅಭ್ಯರ್ಥಿಗಳ ವೇತನವು ತಿಂಗಳಿಗೆ ರೂ 9,300 ರಿಂದ ರೂ 34,000 ರವರೆಗೆ ಇರುವುದು.
ವಯೋಮಿತಿ: ಈಪಿಎಫ್‌ಓ ನಿಯಮಾನುಸಾರ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು 09 ಸೆಪ್ಟೆಂಬರ್ 2024 ರ ಒಳಗಾಗಿ 56 ವರ್ಷಗಳಾಗಿರಬೇಕು.
ಆಯ್ಕೆ ಪ್ರಕ್ರಿಯೆ: ಈಪಿಎಫ್‌ಓ ವಿಜಿಲನ್ಸ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಯ ಆಯ್ಕೆಯನ್ನು ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಿ ನಂತರ ಸಂದರ್ಶನದ ತೆಗೆದುಕೊಳ್ಳಲಾಗುವುದು. ಎರಡು ಹಂತಗಳಲ್ಲಿ ನಿಮ್ಮ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ತಾವು ಎಲ್ಲ ಮಾನದಂಡಗಳನ್ನು ಪೂರೈಸಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ನಂತರ ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳನ್ನು ಅಂದರೆ ಮೊಬೈಲ್ ಸಂಖ್ಯೆ, ಇ-ಮೇಲ್, ಶೈಕ್ಷಣಿಕ ಪ್ರಮಾಣಪತ್ರ, ರೆಸ್ಯೂಮೇ ಮುಂತಾದವು ತಯಾರಿಯಲ್ಲಿಡಬೇಕು.
ಅರ್ಜಿ ಸಲ್ಲಿಕೆ ವಿಳಾಸ: ಅರ್ಜಿಯನ್ನು ಸಲ್ಲಿಸಲು ಈಪಿಎಫ್‌ಓ ಅಧಿಕ್ರತ ನೋಟಿಫಿಕೇಶನ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ. ಅರ್ಜಿ ನಮೂನೆಯಲ್ಲಿ ಕೇಳಿರುವ ಪ್ರತಿಯೊಂದು ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅದರೊಂದಿಗೆ ಅಟ್ಯಾಚ್ ಮಾಡಿ ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಗಳ ಮುಖಾಂತರ “ಶ್ರಿ. ದೀಪಕ್ ಆರ್ಯ, ರಿಜೆನಿಯುಲ್ ಪೂರಕ ನಿಧಿ ಆಯುಕ್ತ-II (ನೇಮಕಾತಿ/ಪರೀಕ್ಷಾ ವಿಭಾಗ), ಪ್ಲೇಟ್ ಎ, ನೆಲದ ಮಹಡಿ, ಬ್ಲಾಕ್ II, ಇಸ್ಟ್ ಕಿಡ್ವೈ ನಗರ, ನ್ಯೂ ದಿಲ್ಲಿ-110023” ವಿಳಾಸಕ್ಕೆ ಕಳುಹಿಸಬೇಕು.
ಪ್ರಮುಖ ಲಿಂಕ್ ಗಳು
- ಅರ್ಜಿ ಸಲ್ಲಿಕೆ ಮತ್ತು ನೋಟಿಫಿಕೇಶನ್: ಇಲ್ಲಿ ಒತ್ತಿ
- ಅಧಿಕ್ರತ ಪೋರ್ಟಲ್: ಇಲ್ಲಿ ಒತ್ತಿ
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು EPFO ಅಧಿಕೃತ ವೆಬ್‌ಸೈಟ್ epfindia.gov.in ಅನ್ನು ಭೇಟಿಕೊಡಿ.