ಎಫ್‌ಡಿ: ಈ ಎರಡು ಬ್ಯಾಂಕಿನಲ್ಲಿ ಎಫ್‌ಡಿ ಮಾಡಿಸಿದರೆ ಯಾವ ಬ್ಯಾಂಕ್ ನಿಮಗೆ ಹೆಚ್ಚು ಲಾಭ ಕೊಡುತ್ತೇ ಗೊತ್ತಾ?

ಎಫ್‌ಡಿ: ಈ ಎರಡು ಬ್ಯಾಂಕಿನಲ್ಲಿ ಎಫ್‌ಡಿ ಮಾಡಿಸಿದರೆ ಯಾವ ಬ್ಯಾಂಕ್ ನಿಮಗೆ ಹೆಚ್ಚು ಲಾಭ ಕೊಡುತ್ತೇ ಗೊತ್ತಾ?

ಸ್ನೇಹಿತರೇ ನೀವು ಸಹ ಎಫ್‌ಡಿ ಮಾಡಿಸಲು ಬಯಸಿದ್ದರೆ, ಅಥವಾ ಯಾವ ಬ್ಯಾಂಕ್ ನಲ್ಲಿ ಎಫ್‌ಡಿ ಮಾಡಿಸಿದರೆ ನಮಗೆ ಹೆಚ್ಚು ಉಳಿತಾಯವನ್ನು ಗಳಿಸಿಕೊಡುತ್ತದೆ ಅನ್ನುವ ಗೊಂದಲದಲ್ಲಿದ್ದರೆ, ಈ ಲೇಖನವು ನಿಮಗೆ ತುಂಬಾ ಉಪಯೋಗಕಾರಿಯಾಗಲಿದೆ.

ದೇಶದಲ್ಲಿನ ಹಣಕಾಸು ಸಂಸ್ಥೆಗಳು ಇಂದು ಬಡ ವರ್ಗದ ಅಥವಾ ಮಧ್ಯಮ ವರ್ಗದ ಜನರಿಗೆ ಅಥವಾ ಹೆಚ್ಚು ಆದಾಯವನ್ನು ಹೊಂದಿರುವ ಜನರ ಗುಂಪಿನ ಹಣದ ಸುರಕ್ಷತೆ ಮತ್ತು ಆ ಹಣದ ಮೇಲೆ ಉತ್ತಮ ಉಳಿತಾಯವನ್ನು ಗಳಿಸಿಕೊಡುವ ಕಾರ್ಯವನ್ನು ಮಾಡುತ್ತವೆ.

ಈ ಲೇಖನದಲ್ಲಿ ದೇಶದ ಎರಡು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಾಗಿರುವ ಎಸ್‌ಬಿ‌ಐ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಫಿಕ್ಸೆಡ್ ಡೆಪಾಸೀಟ್(fixed deposit) ಮೇಲೆ ಒದಗಿಸುತ್ತಿರುವ ಬಡ್ಡಿದರದ(interest rates) ಮಾಹಿತಿಯನ್ನು ನೀಡಲಾಗಿದ್ದು, ಯಾವ ಬ್ಯಾಂಕ್ ಎಫ್‌ಡಿ ಹೂಡಿಕೆಯ ಮೇಲೆ ಹೆಚ್ಚು ಬಡ್ಡಿದರವನ್ನು(highest fd rates) ಒದಗಿಸುತ್ತಿದೆ ಅಂತ ತಿಳಿಯಬಹುದು

ಎಫ್‌ಡಿ ಎಂದರೆ ಏನು?

ಎಫ್‌ಡಿ ಎಂದರೆ ಸ್ಥಿರ ಠೇವಣಿ. ಇದು ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ತನ್ನ ಗ್ರಾಹಕರಿಗೆ ಒದಗಿಸಲಾದ ಹಣಕಾಸಿನ ಉಳಿತಾಯ ಯೋಜನೆಯಾಗಿದ್ದು, ಇಲ್ಲಿ ನೀವು ಪೂರ್ವನಿರ್ಧರಿತ ಬಡ್ಡಿ ದರದಲ್ಲಿ ಒಂದು ನಿರ್ದಿಷ್ಟ ಅವಧಿಗೆ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.

ಕೆನರಾ ಬ್ಯಾಂಕ್ ಎಫ್‌ಡಿ ರೇಟ್ಸ್ (canara bank fd rates)

  • 270 ದಿನಗಳವರೆಗೂ ಮತ್ತು 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿಯನ್ನು ನೀಡುತ್ತದೆ
  • 1 ವರ್ಷದ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿಯನ್ನು ನೀಡುತ್ತದೆ
  • 444 ದಿನದ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 7.25% ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿಯನ್ನು ನೀಡುತ್ತದೆ
  • 1 ವರ್ಷಕ್ಕಿಂತ ಹೆಚ್ಚು ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿಯನ್ನು ನೀಡುತ್ತದೆ
  • 2 ವರ್ಷಕ್ಕಿಂತ ಹೆಚ್ಚು ಮತ್ತು 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿಯನ್ನು ನೀಡುತ್ತದೆ
  • 3 ವರ್ಷಕ್ಕಿಂತ ಹೆಚ್ಚು ಮತ್ತು 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.80% ಮತ್ತು ಹಿರಿಯ ನಾಗರಿಕರಿಗೆ 7.30% ಬಡ್ಡಿಯನ್ನು ನೀಡುತ್ತದೆ
  • 5 ವರ್ಷಕ್ಕಿಂತ ಹೆಚ್ಚು ಮತ್ತು 10 ವರ್ಷಗಳ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.70% ಮತ್ತು ಹಿರಿಯ ನಾಗರಿಕರಿಗೆ 7.20% ಬಡ್ಡಿಯನ್ನು ನೀಡುತ್ತದೆ

ಎಸ್‌ಬಿ‌ಐ ಬ್ಯಾಂಕ್ ಎಫ್‌ಡಿ ರೇಟ್ಸ್ (SBI bank fd rates)

  • 7-45 ದಿನದ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 3.50% ಮತ್ತು ಹಿರಿಯ ನಾಗರಿಕರಿಗೂ ಸಹ 4.00% ಬಡ್ಡಿಯನ್ನು ನೀಡುತ್ತದೆ
  • 46-179 ದಿನದ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 5.50% ಮತ್ತು ಹಿರಿಯ ನಾಗರಿಕರಿಗೆ 6.00% ಬಡ್ಡಿಯನ್ನು ನೀಡುತ್ತದೆ
  • 180-210 ದಿನದ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.00% ಮತ್ತು ಹಿರಿಯ ನಾಗರಿಕರಿಗೆ 6.50% ಬಡ್ಡಿಯನ್ನು ನೀಡುತ್ತದೆ
  • 211 ದಿನಗಳವರೆಗೂ ಮತ್ತು 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.25% ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿಯನ್ನು ನೀಡುತ್ತದೆ
  • 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.80% ಮತ್ತು ಹಿರಿಯ ನಾಗರಿಕರಿಗೆ 7.30% ಬಡ್ಡಿಯನ್ನು ನೀಡುತ್ತದೆ
  • 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 7.00% ಮತ್ತು ಹಿರಿಯ ನಾಗರಿಕರಿಗೆ 7.50% ಬಡ್ಡಿಯನ್ನು ನೀಡುತ್ತದೆ
  • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.75% ಮತ್ತು ಹಿರಿಯ ನಾಗರಿಕರಿಗೆ 7.25% ಬಡ್ಡಿಯನ್ನು ನೀಡುತ್ತದೆ
  • 5 ವರ್ಷದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ಜನರಿಗೆ 6.50% ಮತ್ತು ಹಿರಿಯ ನಾಗರಿಕರಿಗೆ 7.50% ಬಡ್ಡಿಯನ್ನು ನೀಡುತ್ತದೆ

Leave a Comment