ಕರ್ನಾಟಕ ಸರಕಾರದಿಂದ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಇವತ್ತೆ ಪಡೆದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ..!

ಕರ್ನಾಟಕ ಸರಕಾರದಿಂದ 5 ಲಕ್ಷದವರೆಗೆ ಉಚಿತ ಚಿಕಿತ್ಸೆ
ಕರ್ನಾಟಕ ಸರಕಾರದಿಂದ 5 ಲಕ್ಷದವರೆಗೆ ಉಚಿತ ಚಿಕಿತ್ಸೆ

ಕರ್ನಾಟಕ ಸರಕಾರದಿಂದ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಇವತ್ತೆ ಪಡೆದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ..!

ಹೌದು ಸ್ನೇಹಿತರೆ ಈ ಯೋಜನೆಯು ಸಹಕಾರ ಸಂಘಗಳ ಸದಸ್ಯರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ರೂಪಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಆಗಿದೆ .

ಹಾಗಾದರೆ ಯಾರೆಲ್ಲ ಈ ಯೋಜನೆಗೆ ಅರ್ಹರು ಎಂದು ನೋಡೋಣ

  • ರಾಜ್ಯದಲ್ಲಿನ ಯಾವುದೇ ಸಹಕಾರ ಸಂಘದ (ಗ್ರಾಮೀಣ ಮತ್ತು ನಗರ) ಸದಸ್ಯರು
  • ಸ್ವ-ಸಹಾಯ ಗುಂಪುಗಳ ಸದಸ್ಯರು, (ಸಹಕಾರ ಸಂಸ್ಥೆಗಳಿಂದ ರಚಿತವಾಗಿರುವ)
  • ಸಹಕಾರಿ ಮೀನುಗಾರರು
  • ಸಹಕಾರಿ ಬೀಡಿ ಕಾರ್ಮಿಕರು
  • ಸಹಕಾರಿ ನೇಕಾರರು
  • ಸಹಕಾರಿ ಸದಸ್ಯರಾಗಿ ಮೂರು ತಿಂಗಳು ಗತಿಸಿದ್ದಲ್ಲಿ ನಿಗದಿತ ವಾರ್ಷಿಕ ವಂತಿಗೆ ಪಾವತಿಸಿ ಯಾವುದೇ ವಯೋಮಿತಿ ನಿರ್ಬಂಧ ಇಲ್ಲದೇ ಯಶಸ್ವಿನಿ ಯೋಜನೆಯ ಸದಸ್ಯರಾಗಬಹುದಾಗಿದೆ.
  • ಪ್ರಧಾನ ಅರ್ಜಿದಾರರ ಅರ್ಹಕುಟುಂಬದ ಸದಸ್ಯರು ಸಹ ನಿಗದಿತ ವಂತಿಗೆ ಪಾವತಿಸಿ ಯಶಸ್ವಿನಿ ಯೋಜನೆಯ ಸದಸ್ಯರಾಗಲು ಅವಕಾಶ ಕಲ್ಪಿಸಿದೆ.
  • ಅವಲಂಬಿತ ಕುಟುಂಬದ ಸದಸ್ಯರು ಸಹಕಾರ ಸಂಘದ ಸದಸ್ಯರಾಗಬೆಕಾಗಿಲ್ಲ.

“ಕುಟುಂಬ” ಎಂದರೆ ಪ್ರಧಾನ ಅರ್ಜಿದಾರರ ತಂದೆ/ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು,
ಸೊಸೆಯಂದಿರು ಮತ್ತು ಮೊಮ್ಮಕ್ಕಳು ಎಂದು ಅರ್ಥೈಯಿಸುವುದು.ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿ ರೂ.5.00/- ಲಕ್ಷಕ್ಕೆ ನಿಗದಿಪಡಿಸಿದೆ.

ನೋಂದಾಯಿತ ಸದಸ್ಯರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಪ್ಲಾಸ್ಟಿಕ್ ಕಾರ್ಡ್‍ನ್ನು ಒದಗಿಸಲಾಗುತ್ತಿದ್ದು, ಅದನ್ನು ಬಳಸಿ, ಯೋಜನೆಯಡಿ ಗುರುತಿಸಿದ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ (ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅಳವಡಿಸಿಕೊಂಡಿರುವ) 1650 ಚಿಕಿತ್ಸೆಗಳು ಮತ್ತು 478 ಐಸಿಯು ಸೇರಿ ಒಟ್ಟು 2128 ಚಿಕಿತ್ಸ್ಸೆಗಳನ್ನು ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಯಾವ ಯಾವ ಚಿಕಿತ್ಸೆಯನ್ನು ಪಡೆಯಬಹುದು..!


ಈ ಯೋಜನೆಯಡಿ ಮುಖ್ಯವಾಗಿ
•ಹೃದಯಕ್ಕೆ ಸಂಬಂಧಿಸಿದ ರೋಗಗಳು
•ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು
•ನರಗಳಿಗೆ ಸಂಬಂಧಿಸಿದ ಖಾಯಿಲೆಗಳು
•ಕಣ್ಣಿನ ಖಾಯಿಲೆಗಳು
•ಮೂಳೆ ರೋಗಗಳು •ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆ ಇತ್ಯಾದಿ ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.

ಹೇಗೆ ಅರ್ಜಿ ಸಲ್ಲಿಸುವುದು?

  • SAHAKARA SINDHU(ಸಹಕಾರ ಸಿಂಧು )ಸಹಕಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಂತರ ಸಹಕಾರ ಸಂಘವನ್ನು ನೋಂದಾಯಿಸಿ.
  • ಯಶಸ್ವಿನಿ ಆರೋಗ್ಯ ಕಾರ್ಡ್ ಆನ್‌ಲೈನ್‌ಗೆ ಅಪ್ಲಿ ಮಾಡಿ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಫಾರ್ಮ್‌ನೊಂದಿಗೆ ನೊಂದಣಿ ಮಾಡಿದ ನಂತರ, ನಿಮಗೆ ಒದಗಿದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.

ಬೇಕಾಗಿರುವ ದಾಖಲೆಗಳು

  • ವಿಳಾಸ ಪ್ರಮಾಣ
  • ವಯಸ್ಸಿನ ಪ್ರಮಾಣ
  • ವ್ಯಕ್ತಿಯು ಗ್ರಾಮೀಣ ಅಥವಾ ನಾಗರೀಕ ಸಹಕಾರ ಸಂಘದ ಸದಸ್ಯನೆಂದು ಸಾಬೀತು ಪಡಿಸುವ ಪ್ರಮಾಣ ಪತ್ರ.

ಇಂದೇ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಿ.

ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಉಪಾಗೋಗಿಸಿ

ಲಿಂಕ್-https://sahakarasindhu.karnataka.gov.in/

ಇನ್ನಷ್ಟು ಓದಿ : NEET UG EXAM 2024 CITY INTIMATION SLIP ಪಡೆದುಕೊಳ್ಳಿ..!!

ಇನ್ನಷ್ಟು ಓದಿ : ಕಾರ್ಮಿಕ ಕಾರ್ಡ್ ಇದ್ದವರಿವೆ ಸರ್ಕಾರದಿಂದ ಹೊಸ ಆದೇಶ, ಪಾಲಿಸದಿದ್ದರೆ ಕಾರ್ಮಿಕ ಕಾರ್ಡ್ ಬಂದ್ ಆಗಬಹುದು ? ಇಲ್ಲಿದೆ ಸಂಪೂರ್ಣ ಮಾಹಿತಿ..!

Leave a Comment