ಮತ್ತೆ LPG ಗ್ಯಾಸ್ ದರ ಬದಲಾಯಿಸಲು ಸರ್ಕಾರದ ನಿರ್ಧಾರ.ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗಿದೆ ಅಂತ ಮಾಹಿತಿ ಪಡೆಯಿರಿ
ಸ್ನೇಹಿತರೇ ಭಾರತ ದೇಶದಲ್ಲಿ LPG ಗ್ಯಾಸ್ ಅನ್ನು ಭಾಗಶಃ ಎಲ್ಲರೂ ಬಳಸುತ್ತಾರೆ ಹಾಗಾಗಿ ಇದರ ಕಾಲಕಾಲಕ್ಕೆ ಬದಲಾಗುವ ದರದ ಮಾಹಿತಿಯನ್ನು ತಿಳಿಯುವುದು ಉತ್ತಮ.ಕೆಲವೊಮ್ಮೆ ಇದರ ದರವು ಕುಸಿಯುವುದು ಮತ್ತು ಕೆಲವೊಂದು ಸಾರಿ ಈ ದರವು ಹೆಚ್ಚಾಗುತ್ತದೆ.
ದೇಶದಲ್ಲಿ LPG ಸೇವೆಯನ್ನು ಕೆಲವರು ನೇರವಾಗಿ ಪಡೆದರೆ ಇನ್ನೂ ಕೆಲವರು ಅಂದರೆ BPL ಕಾರ್ಡ್ ಹೊಂದಿದವರು ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆಯುತ್ತಿದ್ದಾರೆ .ಸದ್ಯದ ಕಾಲಘಟ್ಟದಲ್ಲಿ ಗ್ಯಾಸ್ ಬೆಳೆಯು ಇಳಿಕೆಯಾಗಿದ್ದು ಗ್ರಾಹಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರವು ಗ್ರಾಹಕರಿಗೆ ಗ್ಯಾಸ್ ಸಬ್ಸಿಡಿಯನ್ನು ಒದಗಿಸಿದ್ದು ಸರ್ಕಾರದ ಈ ನಿರ್ಧಾರಕ್ಕೆ ಗ್ಯಾಸ್ ಸಿಲಿಂಡರ್ ಬಳಕೆದಾರರು ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.ಈ ಕೆಳಗಿನ ಲೇಖನದಲ್ಲಿ ಗ್ಯಾಸ್ ಸಬ್ಸಿಡಿಯ ಅಥವಾ ದರದ ಬಗ್ಗೆ ಪೂರ್ತಿ ಮಾಹಿತಿಯನ್ನು ನೀಡಿದ್ದು ತಪ್ಪದೆ ಪೂರ್ತಿಯಾಗಿ ಓದಿರಿ.
ಗ್ಯಾಸ್ ಸಬ್ಸಿಡಿ
ಈ ಹಿಂದೆ ಗ್ಯಾಸ್ ಸಿಲಿಂಡರ್ ದರ ಗಗನಕ್ಕೆರಿರುವುದನ್ನು ನಾವು ಗಮನಿಸಿದ್ದೇವೆ.ಹಾಗಾಗಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯನ್ನು ಮಾಡಲು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿಯನ್ನು ಘೋಷಣೆ ಮಾಡಿತು.ಈ ಘೋಷಣೆಯಲ್ಲಿ ವಾಣಿಜ್ಯ ಅನಿಲದ ದರವನ್ನು ಏಪ್ರಿಲ್ 01 ರಿಂದ ಕಡಿಮೆ ಮಾಡಲಾಗಿದ್ದು,ಈಗ ಗ್ಯಾಸ್ ಸಿಲಿಂಡರ್ ದರದಲ್ಲಿ ರೂ 30 ಕ್ಕೂ ಹೆಚ್ಚು ಕಡಿಮೆ ಆಗಿದೆ.ಒಟ್ಟು ಈ ಸಬ್ಸಿಡಿಯು ರೂ 300 ರವರೆಗೆ ಇರುತ್ತದೆ
ಮೊದಲು ಸಬ್ಸಿಡಿಯನ್ನು ಮಾರ್ಚ್ 2024 ರವರೆಗೆ ಮಾತ್ರ ನಿಗದಿಗೊಳಿಸಲಾಗಿತ್ತು ನಂತರ ಇದನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗಿದೆ.ಇದರಿಂದ ಕೋಟ್ಯಾಂತರ ಗ್ಯಾಸ್ ಸಿಲಿಂಡರ್ ಗ್ರಾಹಕರು ದರಾ ಇಳಿಕೆಯ ಲಾಭವನ್ನು ಪಡೆಯಲಿದ್ದಾರೆ.
LPG ಗ್ಯಾಸ್ ದರ ತಿಳಿಯುವ ವಿಧಾನ
LPG ಗ್ಯಾಸ್ ಬೆಲೆಯನ್ನು ನಾವು ಎರಡು ಅಂದರೆ ಆನ್ಲೈನ್ ಮತ್ತು ಆಫ್ಲೈನ್ ಮಾರ್ಗದ ಮೂಲಕ ಗೊತ್ತುಪಡಿಸಬಹುದು.
- ಆನ್ಲೈನ್ ಮೂಲಕ ತಿಳಿಯಲು ಇದರ ಅಡಿಕ್ರತ ವೆಬ್ಸೈಟ್ ಗೆ ಭೇಟಿ ನೀಡಿ
- ಆಫ್ಲೈನ್ ಮೂಲಕ ತಿಳಿಯಲು ನೀವು ಹತ್ತಿರದ ಗ್ಯಾಸ್ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ