ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ ಸಭೆ: ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ 15000 ಸ್ಕಾಲರ್ಷಿಪ್ ಕೊಡಲು ನಿರ್ಧಾರ

ಸ್ನೇಹಿತರೇ ಎರಡು ದಿನಗಳ ಹಿಂದೆ ನಡೆದ ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ (SCSP/TSP) ರಾಜ್ಯ ಪರಿಷತ್ ಸಭೆಯಲ್ಲಿ ಪರಿಶಿಷ್ಟರ ಅಭ್ಯುದಯಕ್ಕೆ ಒಟ್ಟು 39,121 ಕೋಟಿ ವೆಚ್ಚವನ್ನು ನೀಡಲಾಗಿದ್ದು, ಅದರಲ್ಲಿ ಎಸ್‌ಸಿ‌ಎಸ್‌ಪಿ ಸಮುದಾಯಕ್ಕೆ 27,673 ಕೋಟಿ ಮತ್ತು ಟಿ‌ಎಸ್‌ಪಿ ಸಮುದಾಯಕ್ಕೆ 11,447 ಕೋಟಿ ರೂ ಅನುದಾನವನ್ನು ನೀಡಲಾಗಿದೆ.

ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ ರಾಜ್ಯ ಪರಿಷತ್ ಸಭೆಯಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ ಸಭೆಯಲ್ಲಿ ಕೈಗೊಂಡ ಪ್ರಮುಖ ಅಂಶಗಳು ಏನು ಅಂತ ತಿಳಿಯಲು ಲೇಖವನ್ನು ಪೂರ್ತಿಯಾಗಿ ಓದಿರಿ.

ಹೌದು, ವಿದ್ಯಾರ್ಥಿಗಳು ಐ‌ಏ‌ಎಸ್, ಐ‌ಆರ್‌ಎಸ್ ನಂತಹ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಲು ಕೇಂದ್ರ ಲೋಕಸೇವಾ ಆಯೋಗ ನಡೆಸುವಂತಹ ಯೂ‌ಪಿ‌ಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಬೇಕಾಗುತ್ತದೆ. ಇಂತಹ ಪರೀಕ್ಷೆಗಳು ತುಂಬಾ ಕಠಿಣವಾಗಿದ್ದು, ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುವುದು ಅನಿವಾರ್ಯವಾಗಿರುತ್ತದೆ.

ಹಾಗಾಗಿ ದೇಶದ ರಾಜಧಾನಿ ದೆಹಲಿ ಯಂತಹ ನಗರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಬಡ ಕುಟುಂಬದ ವಿಧ್ಯಾರ್ಥಿಗಳು ವಾಸಮಾಡಿ ಓದುವುದು ಸುಲಭದ ಮಾತಲ್ಲ. ಇಂತಹ ಹಿನ್ನೆಲೆಯನ್ನು ಹೊಂದಿರುವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

ಎಸ್‌ಸಿ‌ಎಸ್‌ಪಿ ಮತ್ತು ಟಿ‌ಎಸ್‌ಪಿ ಸಭೆಯಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಪರ ಕೈಗೊಂಡ ನಿರ್ಧಾರಗಳು

  • ಐ‌ಏ‌ಎಸ್ ಮತ್ತು ಐ‌ಆರ್‌ಎಸ್ ಮತ್ತಿತ್ತರ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆಗಳಿಗಾಗಿ ದೆಹಲಿಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಮಕ್ಕಳಿಗೆ ಉಚಿತ ಹಾಸ್ಟೆಲ್ ಸ್ಥಾಪನೆ.
  • ಎಸ್‌ಸಿ/ಎಸ್‌ಟಿ ಸಮುದಾಯದ ಮಕ್ಕಳಿಗೆ ಈ ಹಿಂದೆ ನೀಡುತ್ತಿದ್ದ ತಿಂಗಳ 10,000 ರೂ ವಿದ್ಯಾರ್ಥಿವೇತನವನ್ನು 15,000 ರೂ ಮಾಡಲಾಗುವುದು.
  • ದೇಶದ ರಾಜಧಾನಿ ದೆಹಲಿಯಲ್ಲಿ ನಿರ್ಮಾಣವಾಗುವ ಹಾಸ್ಟೆಲ್ ನಲ್ಲಿ ಹೈಟೆಕ್ ಲೈಬ್ರರಿ ಸ್ಥಾಪನೆ ಮಾಡಲಾಗುವುದು.
  • ಲೈಬ್ರರಿಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಕೆಗೆ ಅಗತ್ಯವಿರುವ ಎಲ್ಲ ತರಹದ ಪುಸ್ತಕಗಳನ್ನು ಒದಗಿಸುವುದು.

Leave a Comment