ಬೋಗಸ್ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ! ಈ ದಾಖಲೆಗಳಿದ್ದರೆ ಸಾಕು ನಿಮ್ಮ ರೇಷನ್ ಕಾರ್ಡ್ ರದ್ದಾಗುವುದಿಲ್ಲ
ಸ್ನೇಹಿತರೇ ರಾಜ್ಯದಲ್ಲಿ ರೇಷನ್ ಕಾರ್ಡ್ ವಿತರಣೆಯ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಅನರ್ಹರ ಬಿಪಿಎಲ್ ರೇಷನ್ ಕಾರ್ಡನ್ನು ರದ್ದು ಮಾಡಲು ಮುಂದಾಗಿದೆ.
ಹೌದು ಸರ್ಕಾರದ ವರದಿಯ ಪ್ರಕಾರ ರಾಜ್ಯಾದಲ್ಲಿ ಬಡತನ ತೀವ್ರವಾಗಿ ಇಳಿಕೆಯಾಗಿದ್ದರೂ ಸಹ ಬಿಪಿಎಲ್ ರೇಷನ್ ಕಾರ್ಡ್ ಬಳಕೆದಾರರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಡೆ ಇರುವ ಜನರ ಸಂಖ್ಯೆ ಇನ್ನೂ 4.47 ಕೋಟಿ.
ಆಹಾರ ಇಲಾಖೆಯ ಮಾಹಿತಿಯ ಪ್ರಕಾರ ರಾಜ್ಯದ ಒಟ್ಟು 1.67 ಕುಟುಂಬದ 4.47 ಕೋಟಿ ಜನರು ಬಿಪಿಎಲ್ ರೇಷನ್ ಕಾರ್ಡ್ ಅನೂಕೂಲವನ್ನು ಪಡೆಯುತ್ತಿದ್ದು, 2.7 ಲಕ್ಷಕ್ಕೂ ಹೆಚ್ಚು ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆಯ ಅರ್ಜಿಗಳು ಪೆಂಡಿಂಗ್ ಇರುವುದು ಗಮನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 80% ಅಧಿಕ ಜನ ಅದರಲ್ಲಿ ಕೆಲವರು ನೈಜ ದಾಖಲೆಗಳ್ಳಿದೆ ಬೋಗಸ್ ದಾಖಲೆಗಳನ್ನು ಮುಂದಿಟ್ಟು ಯೋಜನೆಯ ಲಾಭ ಪಡೆಯುತ್ತಿರುವುದನ್ನು ಕಂಡು ಕಳವಳ ವ್ಯಕ್ತ ಪಡಿಸಿದ್ದಾರೆ.
ಹೌದು, ಬಿಪಿಎಲ್ ರೇಷನ್ ಕಾರ್ಡ್ ಯೋಜನೆಯನ್ನು ಕೇವಲ ಆದ್ಯತಾ ವಲಯ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಜನರ ಉನ್ನತಿಗೆ ಸರ್ಕಾರದಿಂದ ಜಾರಿಗೊಳಿಸಿರುವ ಕಾರ್ಯಕ್ರಮ ಆಗಿದ್ದು, ರಾಜ್ಯದಲ್ಲಿ ಬಹುತೇಕ ಜನರು ಸರ್ಕಾರದ ಅನ್ನಭಾಗ್ಯಯಂತಹ ಯೋಜನೆಗಳ ಲಾಭ ಪಡೆಯಲು ಅನಧೀಕ್ರತವಾಗಿ, ನೈಜ ದಾಖಲೆಗಳಿಲ್ಲದೆ ಸ್ಥಳೀಯ ರಾಜಕೀಯ ನಾಯಕರ ಸಹಾಯದಿಂದ ಅಥವಾ ಅಧಿಕಾರಿಗಳಿಗೆ ಲಂಚ ನೀಡುವುದರ ಮುಖಾಂತರ ಬೋಗಸ್ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುತ್ತಾರೆ.
ರಾಜ್ಯ ಸರ್ಕಾರ ಇಂತಹ ಬೋಗಸ್ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು ಸದ್ಯದಲ್ಲೇ ಅನಧೀಕ್ರತ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುವುದು ಖಚಿತವಾಗಿದೆ. ನಿಮ್ಮ ಬಳಿ ಈ ನೈಜ ದಾಖಲೆಗಳಿದ್ದರೆ ಅಧಿಕಾರಿಗಳು ಬಿಪಿಎಲ್ ರೇಷನ್ ಕಾರ್ಡ ಪಡೆಯಲು ಅರ್ಹ ಎಂದು ಘೋಷಿಸುತ್ತಾರೆ.
- ಫಲಾನುಭವಿಯು ಬಿಪಿಎಲ್ ರೇಷನ್ ಹೊಂದಿರಲು ಸರ್ಕಾರದಿಂದ ಘೋಷಿತ ಆದಾಯಕ್ಕಿಂತ ಕಡಿಮೆ ಕುಟುಂಬ ಆದಾಯವನ್ನು ಹೊಂದಿರುವ ನೈಜ ದಾಖಲೆಗಳು (ಆದಾಯ ಪ್ರಮಾಣ ಪತ್ರ)
- ಕುಟುಂಬದ ಸದಸ್ಯರಲ್ಲಿ ಯಾರು ಸಹ ಸರ್ಕಾರಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರಬಾರದು
- ಮನೆ ತೆರಿಗೆಯನ್ನು ಪಾವತಿಸಿರುವ ದಾಖಲೆಗಳು
- ಫಲಾನುಭವಿಯು ದೊಡ್ಡ ವಾಹನಗಳ ಮಾಲಿಕರಾಗಿದ್ದಾರೆ ಅವರ ರೇಷನ್ ಕಾರ್ಡನ್ನು ರದ್ದುಗೊಳಿಸಲಾಗುವುದು
- ನೀವು ಇನ್ನಿತರ ವ್ಯವಹಾರಗಳಲ್ಲಿ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಲ್ಲಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲಾಗುವುದು