ಗ್ರಹಲಕ್ಷ್ಮಿ ಹಣ ಬಿಡುಗಡೆಗೆ ಸರ್ಕಾರದಿಂದ ಮಹೂರ್ತ ಫಿಕ್ಸ್! ಈ ದಿನ ಜಮೆ ಆಗಲಿದೆ ನೋಡಿ ಗ್ರಹಲಕ್ಷ್ಮಿ ಹಣ
ಸ್ನೇಹಿತರೇ ಗ್ರಹಲಕ್ಷ್ಮಿ ಹಣ ಬಿಡುಗಡೆಯ ಸಂಬಂದಿತ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಗ್ರಹಲಕ್ಷ್ಮಿ ಹಣ ಯಾವಾಗ ಬಿಡುಗಡೆಯಾಗಲಿದೆ ಅನ್ನುವ ಗೊಂದಲ ನಿಮ್ಮಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆಯ ಈಗಾಗಲೇ 12 ಕಂತುಗಳು ಪೂರ್ಣಗೊಂಡಿದ್ದು, ಈ ಯೋಜನೆಯ ಮೂಲಕ ಸರ್ಕಾರ ಮನೆ ಯಜುಮಾನಿಯ ಖಾತೆಗೆ ಮಾಸಿಕ ರೂ 2,000 ಯನ್ನು ಡಿಬಿಟಿ ಮುಖಾಂತರ ಜಮೆ ಮಾಡುತ್ತದೆ . ಆದರೆ ಕಳೆದ ಎರಡು ತಿಂಗಳಿನಿಂದ ಯಾವುದೇ ಹಣ ಜಮೆ ಆಗದಿರುವುದು ಗ್ರಹಲಕ್ಷ್ಮಿ ಮಹಿಳೆಯರ ಆತಂಕಕ್ಕೆ ಕಾರಣವಾಗಿದೆ.
ಹೌದು ಸ್ನೇಹಿತರೇ ಕಳೆದ ಬಾರಿ ಮೇ 05 ರಂದು ಕೊನೆಯದಾಗಿ ಗ್ರಹಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ ಈ ಮಧ್ಯೆ ಎರಡು ತಿಂಗಳು ಕಳೆದರು ಖಾತೆಯಲ್ಲಿ ಹಣ ಜಮೆಯಾಗಲಿಲ್ಲ ಅನ್ನುವ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದಾರೆ.
ಬೆಳಗಾವಿ ಭೇಟಿಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗ್ರಹಲಕ್ಷ್ಮಿ ಫಲಾನುಭವಿಗಳು ಚಿಂತಿಸುವುದು ಬೇಡಾ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಗ್ರಹಲಕ್ಷ್ಮಿ ಬಿಡುಗಡೆಯನ್ನು ನಿಲ್ಲುಸುವುದಿಲ್ಲ ಮತ್ತು ಆರಂಭದಿಂದಲೂ ನಮ್ಮ ಸರ್ಕಾರ ಗ್ರಹಲಕ್ಷ್ಮಿ ಹಣವನ್ನು ಸಮಯಕ್ಕೆ ಸರಿಯಾಗಿ ಜಮೆ ಮಾಡುತ್ತಲೆ ಬಂದಿದೆ. ಆದಾಗ್ಯೂ ಈ ಬಾರಿ ಹಣ ಬಿಡುಗಡೆಯ ವಿಚಾರದಲ್ಲಿ ವಿಳಂಬ ಆಗಿದೆ. ಆದರೆ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಇನ್ನೂ ಕೇವಲ ಹತ್ತು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಹಣ ಬಿಡುಗಡೆಯ ಮುಂಚಿತವಾಗಿ ನಿಮ್ಮ ಖಾತೆಯಲ್ಲಿ ಹಣ ಬರಲು ಗ್ರಹಲಕ್ಷ್ಮಿ ಮಹಿಳೆಯರು ಈ ಕ್ರಮಗಳನ್ನು ಅನುಸರಿಸಬೇಕು.
ಮೊದಲನೆಯದಾಗಿ ನಿಮ್ಮ ರೇಷನ್ ಕಾರ್ಡಿನ ಕೆವೈಸಿ ಮಾಡಿಸಿಕೊಳ್ಳಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದರೆ ಕೂಡಲೇ ಅಪ್ಡೇಟ್ ಮಾಡಿಸಿಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿದ್ದರೆ ಹಣ ಬರದೇ ಇರುವುದಕ್ಕೆ ಕಾರಣವಾಗಬಹುದು.
ಫಲಾನುಭವಿಯ ಹೆಸರಿನ ವಿಳಾಸ ಮತ್ತು ಇನ್ನಿತರ ವಿಳಾಸವು ಎಲ್ಲ ದಾಖಲಾ ಪತ್ರಗಳಲ್ಲಿ (ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಆಧಾರ್ ಕಾರ್ಡ್) ಒಂದೇ ತರಹ ಇಲ್ಲದೆ ಇದ್ದರೆ ಹಣ ಬರುವುದಿಲ್ಲ. ಹೀಗಾಗಿ ಕೂಡಲೇ ಸಂಬಂದಿತ ಕಚೇರಿಗೆ ಭೇಟಿ ನೀಡಿ ಎಲ್ಲ ವಿಳಾಸಗಳು ಸಮನಾಗಿ ಇರುವಂತೆ ಖಾತರಿಪಡಿಸಿಕೊಳ್ಳಿ.