Gruha Lakshmi: ಗ್ರಹಲಕ್ಷ್ಮಿ ಪೆಂಡಿಂಗ್ ಹಣ ಈ ಜಿಲ್ಲೆಗಳಿಗೆ ಬಿಡುಗಡೆ!
ಸ್ನೇಹಿತರೇ ಕೆಲ ದಿನಗಳಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಅನ್ನುವ ಸುದ್ದಿಯು ರಾಜ್ಯದ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಅದರಲ್ಲೂ ಗ್ರಹಲಕ್ಷ್ಮಿ ಮಹಿಳೆಯರು ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ 2000ರೂ ಎಲ್ಲಿ ನಿಲ್ಲಿಸಿ ಬಿಡುತ್ತೋ ಅನ್ನುವ ಸಂಕೋಚದಲ್ಲಿದ್ದಾರೆ.
ಇದೀಗ ರಾಜ್ಯ ಸರ್ಕಾರ ಗ್ರಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವನ್ನು ಕೆಲ ದಿನಗಳ ಬಿಡುಗಡೆ ಮಾಡಿದ್ದು, ಗ್ರಹಲಕ್ಷ್ಮಿ ಮಹಿಳೆಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಆದರೆ ಗ್ರಹಲಕ್ಷ್ಮಿ ಯೋಜನೆಗೆ ಅರ್ಹರಿದ್ದೂ ಸಹ ಕೆಲ ಮಹಿಳೆಯರಿಗೆ ಹಣ ಜಮೆ ಆಗಿರುವುದಿಲ್ಲ.
ಕೆಲವು ಮಹಿಳೆರಿಗೆ ಈವರೆಗೆ ಗ್ರಹಲಕ್ಷ್ಮಿ ಯೋಜನೆಯ 11 ಕಂತುಗಳು ಮುಗಿದಿದ್ದರೂ ಒಂದು ಕಂತಿನ ಹಣವು ಜಮೆ ಆಗಿರುವುದಿಲ್ಲ. ಇನ್ನೂ ಕೆಲ ಗ್ರಹಲಕ್ಷ್ಮಿ ಮಹಿಳೆಯರಿಗೆ ಕಳೆದ ಎರಡು ಮೂರು ಕಂತಿನ ಹಣ ಜಮೆ ಆಗುವುದು ಬಾಕಿ ಉಳಿದಿರುತ್ತದೆ. ಗ್ರಹಲಕ್ಷ್ಮಿ ಯೋಜನೆಗೆ ನೋಂದಣಿ ಆಗಿಯು ಹಣ ಜಮೆ ಆಗದಿರುವುದಕ್ಕೆ ಮಹಿಳೆಯರು ಸರ್ಕಾರದ ಮೇಲೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಇದ್ದಿಗ ಸಿಹಿ ಸುದ್ದಿ ಏನೆಂದರೆ ಕೆಲವು ಜಿಲ್ಲೆಯ ಮಹಿಳೆಯರಿಗೆ ಗ್ರಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸೂಚಿಸಿದ್ದು ಒಟ್ಟು 4000ರೂ ಬಿಡುಗಡೆಯಾಗಲಿದೆ. ಈ ಪಟ್ಟಿಯಲ್ಲಿ ಹಾಸನ, ಉಡುಪಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ಮಂಡ್ಯ, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಚಿಕ್ಕ ಮಗಳೂರು ಇನ್ನಿತರ ಜಿಲ್ಲೆಗಳು ಸೇರಿವೆ.
ಗ್ರಹಲಕ್ಷ್ಮಿ ಯೋಜನೆಗೆ ನೊಂದಣಿಯಾಗಿ ಖಾತೆಗೆ ಹಣ ಜಮೆ ಆಗದಿರುವ ಮಹಿಳೆಯರು ಮೊದಲು ರೇಷನ್ ಕಾರ್ಡಿನ ಕೆವೈಸಿ ಯನ್ನು ಮಾಡಿಸಿಕೊಳ್ಳಿ. ಇದರ ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಮಾದೌವುದು ಕಡ್ಡಾಯವಾಗಿರುತ್ತದೆ.ಮತ್ತು ಮನೆ ಯಜುಮಾನಿಜ ಹೆಸರು ಎಲ್ಲ ದಾಖಲೆಗಳಳ್ಳಿ ಒಂದೇ ತರನಾಗಿ ಇದೆಯೇ ಎಂದು ಪರಿಶೀಲಿಸಿ.