ಸ್ನೇಹಿತರೇ ಗ್ರಹಲಕ್ಷ್ಮಿ ಯೋಜನೆ(Gruhalakshmi Yojana) ನಮೆಗೆಲ್ಲ ತಿಳಿದಿರುವ ಹಾಗೆ ರಾಜ್ಯದ ಪ್ರತಿಯೊಂದು ಕುಟುಂಬದ ಯಜುಮಾನಿಯ ಬ್ಯಾಂಕ್ ಖಾತೆಗೆ ಮಾಸಿಕ 2000 ರೂ ಜಮೆ ಮಾಡುತ್ತದೆ. ಈ ಗ್ರಹಲಕ್ಷ್ಮಿ ಯೋಜನೆ ಹಣದಿಂದ(Gruhalakshmi Yojana Money) ರಾಜ್ಯದ ಪ್ರತಿಯೊಂದು ಕುಟುಂಬದ ಮಹಿಳೆಯರು ಇಂದು ತಮ್ಮ ಕುಟುಂಬದ ಜೀವನ ಮಟ್ಟವನ್ನು, ಕೌಟುಂಬಿಕ ಖರ್ಚು ವೆಚ್ಚದ ಸಲುವಾಗಿ, ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಅಥವಾ ಇನ್ನಿತರ ವಸ್ತುಗಳ ಖರೀದಿಗೆ ಬಳಕೆ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಈ ಗ್ರಹಲಕ್ಷ್ಮಿ ಯೋಜನೆ ಹಣ(Gruhalakshmi Yojana Money) ಮಹಿಳೆಯರನ್ನು ಆರ್ಥಿಕವಾಗಿ ಸಂಪೂರ್ಣವಾಗಿ ಸ್ವಾವಲಂಬಿಗಳನ್ನಾಗಿ ಮಾಡಿಸಿದಿದ್ದರೂ, ತಕ್ಕಮಟ್ಟಿಗೆ ಇಂದು ಮಹಿಳೆಯರು ತಿಂಗಳ ಕೊನೆಯಲ್ಲಿ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗುವುದನ್ನು ಕಂಡು ಖುಷಿ ಪಡುತ್ತಿದ್ದಾರೆ.
ಇಷ್ಟೆಲ್ಲ ಪ್ರಾಮುಖ್ಯತೆಯನ್ನು ಪಡೆದಿರುವ ಗ್ರಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಪ್ರಕ್ರಿಯೆ ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಿದರೆ ಹೇಗೆನಿಸಬಹುದು? ಹೌದು ಕೆಲವು ದಿನಗಳಿಂದ ರಾಜ್ಯ ಸರ್ಕಾರ ಗ್ರಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯನ್ನು ನಿಲ್ಲಸಲಿದೆ ಅನ್ನುವ ಗಾಳಿ ಸುದ್ದಿ ರಾಜ್ಯದೆಲ್ಲಡೆ ಹರಿದಾಡುತ್ತಿದೆ. ಇದರಿಂದ ಗ್ರಹಲಕ್ಷ್ಮಿ ಯೋಜನೆ ಮಹಿಳೆಯರಲ್ಲಿ ಆತಂಕ ಉಂಟಾಗಿರುವುದಂತೂ ನಿಜ.
ಆದರೆ ಶುಭ ಸುದ್ದಿ ಏನೆಂದರೆ, ಗ್ರಹಲಕ್ಷ್ಮಿ ಮಹಿಳೆಯರು ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಮೂರ್ನಾಲ್ಕು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಳ್ಕಾರ್ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯಾವ ಒಂದು ಯೋಜನೆಯನ್ನು ಸಹ ನಿಲ್ಲಸಲಾಗುವುದಿಲ್ಲ ಅಂತ ಸ್ಪಷ್ಟವಾಗಿ ಮಾಧ್ಯಮಗಳಲ್ಲಿ ತಿಳಿಸಿದರು ಮತ್ತು ಗ್ರಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಕಂತಿನ ಹಣವನ್ನು ಟ್ರೆಷರಿಗೆ ಕಳುಹಿಸಲಾಗಿದ್ದು ಒಂದು ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.
ಗ್ರಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗುವ ಜಿಲ್ಲೆಗಳ ಪಟ್ಟಿ
ಹಾಗಾದರೆ ಯಾವ ಯಾವ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಗ್ರಹಲಕ್ಷ್ಮಿ ಯೋಜನೆ ಹಣವನ್ನು ಬಿಡುಗಡೆ(Gruhalakshmi Yojana Money release) ಮಾಡಲಿದೆ ಅಂತಾ ತಿಳಿಯೋನ ಬನ್ನಿ. ಉಡುಪಿ ಚಿಕ್ಕಮಗಳೂರು, ದಾವಣಗೆರೆ, ಮೈಸೂರು, ಧಾರವಾಡ, ಹಾವೇರಿ, ಕಲಬುರಗಿ, ತುಮಕೂರು, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುವುದು.
ಹಣ ಬರದೇ ಇದ್ದರೆ ತೆಗೆದುಕೊಳ್ಳಬೇಕಾದ ಕ್ರಮ ಏನು?
ಹೌದು ಸ್ನೇಹಿತರೇ ಕೆಲವು ಮಹಿಳೆಯರಿಗೆ ಗ್ರಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಅರ್ಹತೆಯನ್ನು ಹೊಂದಿದ್ದರೂ ಇನ್ನೂ ಸಹ ಹಣ ಅವರ ಖಾತೆಗೆ ಹಣ ವರ್ಗಾವಣೆ ಆಗಿರುವುದಿಲ್ಲ. ಇನ್ನೂ ಕೆಲ ಮಹಿಳೆಯರಿಗೆ ಗ್ರಹಲಕ್ಷ್ಮಿ ಯೋಜನೆಯ ಮೂರ್ರ್ನಾಲ್ಕು ಕಂತುಗಳ ಹಣ ಜಮೆ ಆಗಿಬೇಕಾಗಿರುವುದು ಬಾಕಿ ಉಳಿದಿರುತ್ತದೆ ಮತ್ತು ಉಳಿದವರಿಗೆ ಮಾತ್ರ ಇಲ್ಲಿಯವರಿಗೆ ಬಿಡುಗಡೆ ಆಗಿರುವ ಎಲ್ಲ ಕಂತುಗಳ ಹಣ ಖಾತೆಯಲ್ಲಿ ಜಮೆ ಆಗಿರುತ್ತದೆ.
ಹಾಗಾದರೆ ಗ್ರಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ನಾವು ಅನುಸರಿಸ ಬೇಕಾದ ಕ್ರಮಗಳಾದರೂ ಏನು? ನೋಡೋಣ ಬನ್ನಿ
- ಬ್ಯಾಂಕ್ ಖಾತೆಯ ಕೆವೈಸಿ ಮಾಡಿಸಿಕೊಳ್ಳಿ
- ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಬೇಕು
- ಫಲಾನುಭವಿಯ ಎಲ್ಲ ದಾಖಲೆಗಳಳ್ಳಿ ಒಂದೇ ತರಹದ ಹೆಸರಿನ ವಿವರಗಳಿರುವ ಹಾಗೆ ನೋಡಿಕೊಳ್ಳಬೇಕು
- ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆ ಇದ್ದರೆ, ಹೊಸ ಬ್ಯಾಂಕ್ ಪಾಸ್ ಬುಕ್ ಮಾಡಿಸಿಕೊಳ್ಳಬೇಕು