ವಾಹನ ಸವಾರರಿಗೆ ಮತ್ತಷ್ಟು ರಿಲೀಫ್ ನೀಡಿದ ರಾಜ್ಯ ಸರ್ಕಾರ.HSRP ನಂಬರ್ ಪ್ಲೇಟ್ ಅಳವಡಿಕೆ ಸಂಬದಿತ ಹೊಸ ಆದೇಶ

ವಾಹನ ಸವಾರರಿಗೆ ಮತ್ತಷ್ಟು ರಿಲೀಫ್ ನೀಡಿದ ರಾಜ್ಯ ಸರ್ಕಾರ.HSRP ನಂಬರ್ ಪ್ಲೇಟ್ ಅಳವಡಿಕೆ ಸಂಬದಿತ ಹೊಸ ಆದೇಶ

ಸ್ನೇಹಿತರೇ ವಾಹನ ಸವಾರರಿಗೆ ಒಂದಿಷ್ಟು ರಿಲೀಫ್ ಸಿಕ್ಕಿದಂತಾಗಿದೆ ಏಕೆಂದರೆ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಅಳವಡಿಕೆಗೆ ಆದೇಶ ನೀಡಿತ್ತು,ಆದರೆ ಸರ್ಕಾರ ವಾಹನ ಸವಾರರಿಗೆ ಮತ್ತೊಂದು ಆದೇಶ ಹೊರಡಿಸಿ ಒಂದಿಷ್ಟು ರಿಲೀಫ್ ನೀಡಿದೆ

ಹಾಗಾದರೆ ಏನಿದು ಹೊಸ ಆದೇಶ? ನಿಮ್ಮ ಮನೆಯಲ್ಲಿ ಹಳೆಯ ವಾಹನವಿದ್ದರೆ ಮತ್ತು ನೀವು ಅದರ ಮೇಲೆ ದಿನನಿತ್ಯ ಸವಾರ ಮಾಡುತ್ತಿದ್ದರೆ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ

ಅತೀ ಸುರಕ್ಷಿತ ನೋಂದಣಿ ಫಲಕ ಅಂದರೆ HSRP ನಂಬರ್ ಪ್ಲೇಟ್ ಕಡ್ಡಾಯ ಅಳವಡಿಕೆಗೆ ರಾಜ್ಯ ಸರ್ಕಾರ ಮೇ 31 ರ ವರೆಗೆ ಗಡುವು ನೀಡಿತ್ತು.ಆದರೆ ಇದೀಗ ಇದನ್ನು ವಿಸ್ತರಿಸಿ ಜೂನ್ 12 ರವರೆಗೆ ಮಾಡಲಾಗಿದೆ.ಈ ವಿಷಯದ ಬಗ್ಗೆ ಹೈಕೋರ್ಟ್ ನಲ್ಲಿ ಚರ್ಚೆಗಳು ನಡೆದಿದ್ದು ಸ್ವತಃ ರಾಜ್ಯ ಸರ್ಕಾರವೇ ಈ ವಿಷಯವನ್ನು ಕೋರ್ಟ್ ನಲ್ಲಿ ಹೇಳಿಕೊಂಡಿದೆ. ಹಾಗಾಗಿ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳುವರಿಗೆ ಜೂನ್ 12 ರವರೆಗೆ ರಿಲೀಫ್ ಸಿಕ್ಕಂತಾಗಿದೆ.

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆ ಈ ಮೊದಲು ನವೆಂಬರ್ 17,2023 ಗಡುವು ನೀಡಿತ್ತು.ಅದರ ನಂತರ 2024 ಫೆಬ್ರುವರಿ 17ರ ತನಕ ವಿಸ್ತರಣೆ ಮಾಡಿತು. ನಂತರ ಮತ್ತೆ ಇದನ್ನು ಮೇ 31ರ ತನಕ ವಿಸ್ತರಿಸಲಾಯಿತು.ಆದರೆ ಈದಿಗ ರಾಜ್ಯ ಸರ್ಕಾರ ಹೈಕೋರ್ಟ್ ಇದನ್ನು ಮತ್ತಷ್ಟು ವಿಸ್ತರಿಸಬೇಕು ಅನ್ನುವ ರಿಟ್ ಅರ್ಜಿ ಸಲ್ಲಿಸುವುದರಿಂದ ಇದನ್ನು ಜೂನ್ 12 ರವರೆಗೆ ವಿಸ್ತರಿಸಲಾಗಿದೆ.

ವಾಹನ ಸವಾರರು ತಮ್ಮ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಜೂನ್ 12 ರವರೆಗೆ ಅಳವಡಿಕೆ ಮಾಡದೆ ಇದ್ದರೆ ಅಂತಹ ವಾಹನಗಳಿಗೆ ಕಾನೂನಾತ್ಮಕವಾಗಿ ದಂಡ ವಿಧಿಸಲಾಗುವುದು ಅಂತಾ ರಾಜ್ಯ ಸರ್ಕಾರ ಆದೇಶ ನೀಡಿದೆ.

Leave a Comment