ಅಬ್ಬಬ್ಬಾ! ಐ‌ಬಿ‌ಪಿ‌ಎಸ್ ನಿಂದ 6128 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

ಅಬ್ಬಬ್ಬಾ! ಐ‌ಬಿ‌ಪಿ‌ಎಸ್ ನಿಂದ 6128 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

ಸ್ನೇಹಿತರೇ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (IBPS) ವತಿಯಿಂದ 6128 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಕ್ರತ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಐ‌ಬಿ‌ಪಿ‌ಎಸ್ ಕ್ಲರ್ಕ್ ನೇಮಕಾತಿ 2024(IBPS clerck recruitment 2024) ನ ಅರ್ಹತಾ ಮಾನದಂಡಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.

ಈ ಲೇಖನದಲ್ಲಿ ಅಭ್ಯರ್ಥಿಗಳಿಗೆ ಐ‌ಬಿ‌ಪಿ‌ಎಸ್ ಕ್ಲರ್ಕ್ ನೇಮಕಾತಿ 2024 ರ ಅರ್ಜಿ ಸಲ್ಲಿಕೆಗೆ ವಿಧ್ಯಾರ್ಥಿಗಳಿಗೆ ಬೇಕಾಗುವ ವಿಧ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಹುದ್ದುಗಳ ವಿವರ ಮತ್ತು ಹುದ್ದೆಗೆ ಸಂಬಂದಿತ ಇನ್ನಿತರ ಮಾಹಿತಿಯನ್ನು ನೀಡಲಾಗಿದ್ದು, ಲೇಖನವನ್ನು ಪೂರ್ತಿಯಾಗಿ ಓದಿ ಅರ್ಜಿ ಆಸಕ್ತರು ಆರ್ಜಿ ಸಲ್ಲಿಕೆಯನ್ನು ಮಾಡಿರಿ

ಹುದ್ದೆಗಳು

ಸ್ನೇಹಿತರೇ ಒಟ್ಟು 6128 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ

ವಯೋಮಿತಿ

ಐ‌ಬಿ‌ಪಿ‌ಎಸ್ ನೇಮಕಾತಿ 2024 ರ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು

ಇದರಲ್ಲಿ ಓ‌ಬಿ‌ಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಲಿಕೆ ಇರುತ್ತದೆ

ವಿಧ್ಯಾರ್ಹತೆ

ಅಭ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವ ವಿಧ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು

ಅರ್ಜಿ ಶುಲ್ಕ

ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಕೇವಲ ರೂ175 ಆಗಿರುತ್ತದೆ.

ಆಯ್ಕೆ ವಿಧಾನ

ಮೊದಲು ಫ್ರೀಲಿಮ್ಸ್ ಪರೀಕ್ಷೆಯನ್ನು ನಡೆಸಿ ನಂತರ ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆಯನ್ನು ನಡೆಸಲಾಗುವುದು. ಮೂರನೇ ಹಂತದಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು

ಪ್ರಮುಖ ದಿನಾಂಕಗಳು

ಐ‌ಬಿ‌ಪಿ‌ಎಸ್ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ ಜುಲೈ 07, 2024 ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 21, 2024 ಆಗಿರುತ್ತದೆ

ಅರ್ಜಿ ಸಲ್ಲಿಕೆಯ ಲಿಂಕನ್ನು ಕೆಳಗಡೆ ನೀಡಲಾಗಿದ್ದು ಆಸಕ್ತರು ಜುಲೈ 07 ರ ನಂತರ ಅರ್ಜಿ ಸಲ್ಲಿಸಬಹುದು.

Leave a Comment