ಐಬಿಪಿಎಸ್ ನೇಮಕಾತಿ 2024: 5351 ಪ್ರೊಬೇಷನರಿ ಆಫೀಸರ್ಸ್ ಮತ್ತು ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಐಬಿಪಿಎಸ್ ನೇಮಕಾತಿ 2024: 5351 ಪ್ರೊಬೇಷನರಿ ಆಫೀಸರ್ಸ್ ಮತ್ತು ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ 2024 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರೋಬೆಷನರಿ ಆಫೀಸರ್ಸ್/ ಮ್ಯಾನೇಜಿಂಗ್ ಟ್ರೈನಿಸ್(PO/MT) ಮತ್ತು ಸ್ಪೇಶಲಿಸ್ಟ್ ಆಫೀಸರ್ಸ್ ನ ಒಟ್ಟು 5351 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದಾದ್ಯಂತ ವಿವಿಧ ಬ್ಯಾಂಕ್ ಗಳಲ್ಲಿ ನಿಯೋಜಿಸಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಐ‌ಬಿ‌ಪಿ‌ಎಸ್ ನೇಮಕಾತಿಗೆ ಆಗಸ್ಟ್ 21, 2024 ರ ಒಳಗಾಗಿ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು.

ಐ‌ಬಿ‌ಪಿ‌ಎಸ್ ಹುದ್ದೆಗಳ ವಿವರ: ನೇಮಕಾತಿ ಅಧಿಸೂಚನೆಯಲ್ಲಿ ನೀಡಿರುವಂತೆ ಲಭ್ಯವಿರುವ ಹುದ್ದೆಗಳನ್ನು ಇಲ್ಲಿ ನೀಡಲಾಗಿದೆ. ಐಟಿ ಆಫೀಸರ್ (170 ಹುದ್ದೆಗಳು), ಕೃಷಿ ಕ್ಷೇತ್ರ ಅಧಿಕಾರಿ (346 ಹುದ್ದೆಗಳು), ರಾಜ್ಯಭಾಷಾ ಅಧಿಕಾರಿ (25 ಹುದ್ದೆಗಳು), ಕಾನೂನು ಅಧಿಕಾರಿ (125 ಹುದ್ದೆಗಳು), ಎಚ್‌ಆರ್/ವೈಯಕ್ತಿಕ ಅಧಿಕಾರಿ (25 ಹುದ್ದೆಗಳು), ಮಾರ್ಕೆಟಿಂಗ್ ಅಧಿಕಾರಿ (205 ಹುದ್ದೆಗಳು), ಮತ್ತು ಪ್ರೊಬೇಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೇನೀಸ್ (4455 ಹುದ್ದೆಗಳು).

ಐ‌ಬಿ‌ಪಿ‌ಎಸ್ ವಿವಿಧ ಬ್ಯಾಂಕಿನ ಆಧಾರದ ಮೇಲೆ ಹುದ್ದೆಗಳ ಹಂಚಿಕೆ: ಐ‌ಬಿ‌ಪಿ‌ಎಸ್ ನೇಮಕಾತಿ 2024 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಈ ಕೆಳಗೆ ಸೂಚಿಸಲಾದ ಬ್ಯಾಂಕ್ ಗಳಲ್ಲಿ ನಿಯೋಜಿಸಲಾಗುವುದು. ಬ್ಯಾಂಕ್ ಆಫ್ ಇಂಡಿಯಾ 900 ಹುದ್ದೆಗಳು, ಕ್ಯಾನರಾ ಬ್ಯಾಂಕ್ 755 ಹುದ್ದೆಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2000 ಹುದ್ದೆಗಳು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 300 ಹುದ್ದೆಗಳು, ಪಂಜಾಬ್ ನ್ಯಾಷನಲ್ ಬ್ಯಾಂಕ್ 1000 ಹುದ್ದೆಗಳು, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ 360 ಹುದ್ದೆಗಳು, ಮತ್ತು ಯುಸಿಒ ಬ್ಯಾಂಕ್ 36 ಹುದ್ದೆಗಳು.

ವಿದ್ಯಾರ್ಹತೆ: ಐ‌ಬಿ‌ಪಿ‌ಎಸ್ ನೇಮಕಾತಿ ವಿದ್ಯಾರ್ಹತೆ: ಐಟಿ ಆಫೀಸರ್ ಹುದ್ದೆಗೆ ಡಿಗ್ರಿ, ಸ್ನಾತಕೋತ್ತರ ಪದವಿ, ಬಿ.ಇ ಅಥವಾ ಬಿ.ಟೆಕ್, ಅಥವಾ ಪಿಜಿ ಡಿಪ್ಲೊಮಾ ಹೊಂದಿರಬೇಕು. ಕೃಷಿ ಕ್ಷೇತ್ರ ಅಧಿಕಾರಿ (AFO) ಹುದ್ದೆಗೆ, ಕೃಷಿ ಶಾಖೆಯಲ್ಲಿ ಡಿಗ್ರಿ ಹೊಂದಿರಬೇಕು. ರಾಜ್ಯಭಾಷಾ ಅಧಿಕಾರಿ ಹುದ್ದೆಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಕಾನೂನು ಅಧಿಕಾರಿ ಹುದ್ದೆಗೆ ಕಾನೂನು (ಎಲ್‌ಎಲ್‌ಬಿ) ಪದವಿ ಹೊಂದಿರಬೇಕು. ಎಚ್‌ಆರ್/ವೈಯಕ್ತಿಕ ಅಧಿಕಾರಿ ಹುದ್ದೆಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು. ಮಾರ್ಕೆಟಿಂಗ್ ಅಧಿಕಾರಿ (MO) ಹುದ್ದೆಗೆ ಸ್ನಾತಕೋತ್ತರ ಪದವಿ, ಎಮ್‌ಎಂ‌ಎಸ್, ಎಮ್‌ಬಿಎ, PGDBA, PGDBM, PGPM, or PGDM ಪದವಿ ಪೂರ್ಣಗೊಳಿಸಿರಬೇಕು. ಪ್ರೊಬೇಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೇನೀಸ್ (PO/MT) ಹುದ್ದೆಗೆ, ಅಭ್ಯರ್ಥಿಗಳು ಪದವಿ ಹೊಂದಿರಬೇಕು.

ವಯೋಮಿತಿ: ಐ‌ಬಿ‌ಪಿ‌ಎಸ್ ನೇಮಕಾತಿ 2024 ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷಗಳು.

ವಯೋ ಸಡಳಿಕೆ: ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ (PWBD) ಅಭ್ಯರ್ಥಿಗಳಿಗೆ 10 ವರ್ಷಗಳ ವಯಸ್ಸಿನ ಸಡಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.175/-, ಮತ್ತು ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ ರೂ.850/-. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಪ್ರಿಲಿಮ್ಸ್ ಲಿಖಿತ ಪರೀಕ್ಷೆ, ಮೇನ್ಸ್ ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ, ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡ ನಾಲ್ಕು ಹಂತಗಳಲ್ಲಿ ನಡೆಸಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ: ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ತಪ್ಪದೆ ಭರ್ತಿ ಮಾಡಿರಿ. ಅಗತ್ಯವಿರುವ ದಾಖಲೆಗಳನ್ನು, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಕಲುಗಳನ್ನು ಅಪ್ಲೋಡ್ ಮಾಡಿರಿ. ಅಂತಿಮವಾಗಿ ನಿಮ್ಮ ವರ್ಗಕ್ಕೆ ಸೂಚಿಸಿರುವ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಪ್ರಮುಖ ದಿನಾಂಕಗಳು: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ 01-08-2024 ರಂದು ಪ್ರಾರಂಭಗೊಂಡು ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಆಗಸ್ಟ್ 21, 2024 ಆಗಿರುತ್ತದೆ. ಹೀಗಾಗಿ ಆಸಕ್ತರು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಬೇಕು. ಇನ್ನಿತರ ಪ್ರಮುಖ ಪರೀಕ್ಷೆಗಳ ದಿನಾಂಕಗಳ ಮಾಹಿತಿಗೆ ಅಭ್ಯರ್ಥಿಗಳು ದಿನನಿತ್ಯ ಐ‌ಬಿ‌ಪಿ‌ಎಸ್ ಅಧಿಕ್ರತ ಪೋರ್ಟಲ್ ಭೇಟಿ ಕೊಡುತ್ತಿರಬೇಕು.

ಪ್ರಮುಖ ಲಿಂಕುಗಳು

Leave a Comment