IBPS RRB 2024 Notification, Exam Date (Out), PO & Clerk Vacancies.ಭರ್ಜರಿ ನೇಮಕಾತಿ

IBPS RRB 2024 Notification, Exam Date (Out), PO & Clerk Vacancies.ಭರ್ಜರಿ ನೇಮಕಾತಿ

ಸ್ನೇಹಿತರೇ ಪ್ರತಿ ವರ್ಷ, ದೇಶಾದ್ಯಂತ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) ಸಂಸ್ಥೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಅನ್ನು ಹೊಂದಿರುವ ಎಲ್ಲಾ ಪ್ರಾದೇಶಿಕ ರೂರಲ್ ಬ್ಯಾಂಕುಗಳಿಗೆ (ಸ್ಕೇಲ್ I, ಸ್ಕೇಲ್ II ಮತ್ತು ಸ್ಕೇಲ್ III) ಮತ್ತು ಕಛೇರಿ ಸಹಾಯಕರ ಸುಮಾರು ಹುದ್ದೆಗಳನ್ನು ಭರ್ತಿ ಮಾಡಲು ಆಹ್ವಾನ ನೀಡುತ್ತದೆ.ಹಾಗಾಗಿ ಈ ವರ್ಷವೂ ಸಹ ಭಾಗಶ ಜೂನ್ ತಿಂಗಳಲ್ಲಿ ಅರ್ಜಿ ಆಹ್ವಾನ ಪ್ರಕಟಣೆ ಮಾಡಲಿದ್ದು ವಿದ್ಯಾರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯನ್ನು ಮಾಡಬಹುದು

ಈ ವರ್ಷ 9000 ಕ್ಕೂ ಹೆಚ್ಚು ಹುದ್ದೆಗಳನ್ನು ಬಿಡುಗಡೆ ಮಾಡಲಿದ್ದು ಈ ಲೇಖನದಲ್ಲಿ ವಿದ್ಯಾರ್ಥಿಗಳ ಅರ್ಜಿ ಸಲ್ಲಿಕೆಗೆ ಬೇಕಾಗುವಂತ ವಯೋಮಿತಿ,ವಿದ್ಯಾರ್ಹತೆ ,ಅರ್ಜಿ ಶುಲ್ಕ ,ಆಯ್ಕೆ ವಿಧಾನ ಇನ್ನಿತರ ಅಂಶಗಳನ್ನು ವಿವರಿಸಲಾಗಿದೆ. ಪೂರ್ತಿ ಲೇಖನವನ್ನು ಓದಿ ಪರೀಕ್ಷೆಗೆ ತಯಾರಿ ನಡೆಸಿ.

IBPS RRB ವರ್ಷವಾರು ನೇಮಕಾತಿ

  • 2018 ರಲ್ಲಿ IBPS RRB VII ವತಿಯಿಂದ 10,190 ಹುದ್ದೆಗಳ ಆಹ್ವಾನ ಮಾಡಲಾಗಿತ್ತು
  • 2019 ರಲ್ಲಿ IBPS RRB VIII ವತಿಯಿಂದ 9,363 ಹುದ್ದೆಗಳ ಆಹ್ವಾನ ಮಾಡಲಾಗಿತ್ತು
  • 2020 ರಲ್ಲಿ IBPS RRB IX 9,600+ಹುದ್ದೆಗಳ ಆಹ್ವಾನ ಮಾಡಲಾಗಿತ್ತು
  • 2021 ರಲ್ಲಿ IBPS RRB X 10,729 sಹುದ್ದೆಗಳ ಆಹ್ವಾನ ಮಾಡಲಾಗಿತ್ತು
  • 2022 ರಲ್ಲಿ IBPS RRB XI 8,106 ಹುದ್ದೆಗಳ ಆಹ್ವಾನ ಮಾಡಲಾಗಿತ್ತು
  • 2023 ರಲ್ಲಿ IBPS RRB XII 8,938 ಹುದ್ದೆಗಳ ಆಹ್ವಾನ ಮಾಡಲಾಗಿತ್ತು
  • 2024 ರಲ್ಲಿ IBPS RRB XIII 9000+ ಹುದ್ದೆಗಳ ಆಹ್ವಾನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ

ವಯೋಮಿತಿ(age limit)

  1. ಅಧಿಕಾರಿ ಶ್ರೇಣಿ-III (ಸೀನಿಯರ್ ಮ್ಯಾನೇಜರ್): 21 ರಿಂದ 40 ವರ್ಷಗಳು.
  2. ಅಧಿಕಾರಿ ಶ್ರೇಣಿ-II (ಮ್ಯಾನೇಜರ್): 21 ರಿಂದ 32 ವರ್ಷಗಳು.
  3. ಅಧಿಕಾರಿ ಶ್ರೇಣಿ-I (ಸಹಾಯಕ ಮೇನೇಜರ್): 18 ರಿಂದ 30 ವರ್ಷಗಳು.
  4. ಕಾರ್ಯಾಲಯ ಸಹಾಯಕ (ಬಹುಉದ್ದೇಶಿ): 18 ರಿಂದ 28 ವರ್ಷಗಳು.

ವಿವಿಧ ಹುದ್ದೆಗಳಿಗೆ ವಿದ್ಯಾರ್ಹತೆ

ಕಚೇರಿ ಸಹಾಯಕ (ಬಹುಉದ್ದೇಶಿ):

  • ಮಾನ್ಯತಾ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು .
  • ಕಂಪ್ಯೂಟರ್‌ನ ಕೆಲಸದ ಜ್ಞಾನ ಹೊಂದಿರುವವರು ಹೆಚ್ಚು ಅರ್ಹರಾಗಿರುತ್ತಾರೆ

ಅಧಿಕಾರಿ ಶ್ರೇಣಿ-I:

  • ಯಾವುದೇ ವಿಭಾಗದಲ್ಲಿ ಶೇಖಡಾ 50 ಅಂಕಗಳೊಂದಿಗೆ ಉತ್ತೀರ್ಣ ಆಗಿರುವ ಪದವಿ..
  • ಕಂಪ್ಯೂಟರ್‌ನ ಕೆಲಸದ ಜ್ಞಾನ ಹೊಂದಿರುವವರು ಹೆಚ್ಚು ಅರ್ಹರಾಗಿರುತ್ತಾರೆ

ಅಧಿಕಾರಿ ಶ್ರೇಣಿ-II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ):

  • ಯಾವುದೇ ವಿಭಾಗದಲ್ಲಿ ಶೇಖಡಾ 50 ಅಂಕಗಳೊಂದಿಗೆ ಉತ್ತೀರ್ಣ ಆಗಿರುವ ಪದವಿ
  • 2 ವರ್ಷಗಳ ಕಾಲ ಬ್ಯಾಂಕ್‌ನಲ್ಲಿ ಅಡಿಕಾರಿಯಾಗಿ ಕೆಲಸ ಮಾಡಿದ ಅನುಭವ

ಅಧಿಕಾರಿ ಶ್ರೇಣಿ-II (ಇನ್‌ಫಾರ್ಮೇಷನ್‌ ತಂತ್ರಜ್ಞ):

  • ಇಲೆಕ್ಟ್ರಾನಿಕ್ಸ್ / ಸಂಚಾರ / ಕಂಪ್ಯೂಟರ್ ವಿಜ್ಞಾನ / ಇನ್‌ಫಾರ್ಮೇಶನ್ ಟೆಕ್ನಾಲಜಿ ಇತ್ಯಾದಿಯಲ್ಲಿ ಡಿಗ್ರಿ.
  • ಪ್ರೋಗ್ರಾಮ್ ಸ್ಕಿಲ್ಸ್ ಪಡೆದ ಸರ್ಟಿಫಿಕೇಟ್‌ಗಳು ಇರುವುದು ಅನುಭವಕ್ಕೆ ಸಹಕಾರಿ(ASP, PHP, C++, Java)
  • ಒಂದು ವರ್ಷದ ಅನುಭವ ಅಗತ್ಯ.

ಅಧಿಕಾರಿ ಶ್ರೇಣಿ-II (ಚಾರ್ಟರ್ಡ್ ಅಕೌಂಟೆಂಟ್):

  • ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ಸ್ಟಿಟ್ಯೂಟ್ ನಿಂದ ಸರ್ಟಿಫೈಡ್ ಪಡೆದಿರಬೇಕು
  • ಚಾರ್ಟರ್ಡ್ ಅಕೌಂಟೆಂಟ್ ಆಗಿ ಒಂದು ವರ್ಷದ ಅನುಭವ ಇರಬೇಕು .

ಅಧಿಕಾರಿ ಶ್ರೇಣಿ-II (ವಕಾಲತ್ ಅಧಿಕಾರಿ):

  • ನ್ಯಾಯಶಾಸ್ತ್ರದಲ್ಲಿ ಡಿಗ್ರಿ.
  • ಎರಡು ವರ್ಷಗಳ ಅನುಭವ ಅಥವಾ ಬ್ಯಾಂಕ್‌ಗಳಲ್ಲಿ ನ್ಯಾಯವಾದಿ ಆಗಿ ಅಥವಾ ಹಣಕಾಸು ಸಂಸ್ತೆಯಲ್ಲಿ ವಕಾಲತ್ ಅಧಿಕಾರಿಯಾಗಿ ಕೆಲಸ ಮಾಡಿರಬೇಕು.

ಅಧಿಕಾರಿ ಶ್ರೇಣಿ-II (ಖಜಾನಾ ಮೇನೇಜರ್):

  • ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ಸ್ಟಿಟ್ಯೂಟ್ ನಿಂದ ಅಥವಾ ಫೈನಾನ್ಸ್‌ನಲ್ಲಿ ಎಂಬಿಎ ಡಿಗ್ರಿ ಪಡೆದಿರಬೇಕು
  • ಮೇಲಿನ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವ ಅಗತ್ಯ.

ಅಧಿಕಾರಿ ಶ್ರೇಣಿ-II (ಮಾರ್ಕೆಟಿಂಗ್ ಅಧಿಕಾರಿ):

  • ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಮುಗಿಸಿರಬೇಕು
  • ಮೇಲಿನ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವ ಅಗತ್ಯ.

ಅಧಿಕಾರಿ ಶ್ರೇಣಿ-II (ಕೃಷಿ ಅಧಿಕಾರಿ):

  • ಕೃಷಿ / ಉದ್ಯಾನಶಾಸ್ತ್ರ / ಡೈರಿ / ಪ್ರಾಣಿಸಂಗ್ರಹ / ವಾಣಿಜ್ಯ ವಿಭಾಗದಲ್ಲಿ ಪದವಿ
  • ಮೇಲಿನ ಕ್ಷೇತ್ರಗಳಲ್ಲಿ ಎರಡು ವರ್ಷಗಳ ಅನುಭವ ಅಗತ್ಯ.

ನೇಮಕಾತಿ ವಿಧಾನ

  • ಮೊದಲಿಗೆ ಪ್ರಾರಂಭಿಕ ಪರೀಕ್ಷೆ (ಅಧಿಕಾರಿ ಸ್ಕೇಲ್-I ಮತ್ತು ಕಛೇರಿ ಸಹಾಯಕ ಹುದ್ದೆಗಳಿಗಾಗಿ)
  • ನಂತರ ಮುಖ್ಯ ಪರೀಕ್ಷೆ (ಅಧಿಕಾರಿ ಸ್ಕೇಲ್-I, II, III ಮತ್ತು ಕಛೇರಿ ಸಹಾಯಕ ಹುದ್ದೆಗಳಿಗಾಗಿ)
  • ಸಂದರ್ಶನ(Interview)

ಅರ್ಜಿ ಶುಲ್ಕ (fees)

  • General / OBC: ₹ 850/-
  • SC / ST / PWBD / EXSM: ₹ 175/-

ಪ್ರಮುಖ ದಿನಾಂಕಗಳು

  • Opening date : 2nd Week of June 2024
  • Last date : Last Week of June 2024

ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ

https://www.ibps.in

ಇನ್ನಷ್ಟು ಓದಿರಿ

SSLC ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ.ಕೊನೆಯ ದಿನಾಂಕ ?

CBSE ಮಂಡಳಿಯಿಂದ ವಿಶೇಷ DigiLocker Code ಬಿಡುಗಡೆ.ಈ ಕೋಡ್ ಇಲ್ಲದೆ ಫಲಿತಾಂಶ ವೀಕ್ಷಿಸಲು ಸಾಧ್ಯವಿಲ್ಲ

KPSC Group C (RPC) Recruitment 2024.ಭರ್ಜರಿ ನೇಮಕಾತಿ.ಕೊನೆಯ ದಿನಾಂಕ?

Leave a Comment