ನಿಮಗೆ ಪಿ‌ಎಮ್ ಕಿಸಾನ್ ಹಣ ಇನ್ನೂ ಬಂದಿಲ್ವಾ? ಹಾಗಾದರೆ ತಕ್ಷಣವೇ ಈ ಮೂರು ಕ್ರಮಗಳನ್ನು ಅನುಸರಿಸಿ

ನಿಮಗೆ ಪಿ‌ಎಮ್ ಕಿಸಾನ್ ಹಣ ಇನ್ನೂ ಬಂದಿಲ್ವಾ? ಹಾಗಾದರೆ ತಕ್ಷಣವೇ ಈ ಮೂರು ಕ್ರಮಗಳನ್ನು ಅನುಸರಿಸಿ

ಸ್ನೇಹಿತರೇ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ರೈತ ಸಮಾರೋಪ ಕಾರ್ಯಕ್ರಮದಿಂದ ಪಿ‌ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಮಾಡಿದರು. ಈ ಮೂಲಕ ಪಿ‌ಎಮ್ ಕಿಸಾನ್ ಯೋಜನೆಯ ಅರ್ಹ ರೈತರ ಖಾತೆಗೆ ನೇರವಾಗಿ 17ನೇ ಕಂತಿನ 2000ರೂ ಅನ್ನು ವರ್ಗಾವಣೆ ಮಾಡಲಾಯಿತು ಆದರೆ ಕೆಲವು ರೈತರ ಖಾತೆಯಲ್ಲಿ ಈ ಹಣ ತಲುಪಿಲ್ಲ.

ನಿಮಗೂ ಸಹ ಪಿ‌ಎಮ್ ಕಿಸಾನ್ ಯೋಜನೆಯ ಹಣ ಇನ್ನೂ ಖಾತೆಯಲ್ಲಿ ತಲುಪಿಲ್ಲವೆಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ, ಖಾತೆಗೆ ಹಣ ಬರಲು ನಾವು ಅನುಸರಿಸಬೇಕಾದ ಕ್ರಮಗಳನ್ನು ಇಲ್ಲಿ ನೀಡಲಾಗಿದ್ದು, ಇವುಗಳನ್ನು ತಿಳಿಯುವುದು ಬಹಳ ಉಪಯೋಗಕಾರಿಯಾಗಲಿದೆ.

ಪಿ‌ಎಮ್ ಕಿಸಾನ್ ಹಣ ಬರಲು ಅನುಸರಿಸಬೇಕಾದ 3 ಕ್ರಮಗಳು

ಈ- ಕೆ‌ವೈ‌ಸಿ (e-kyc)

ಮೊದಲು ರೈತರು ಈ-ಕೆ‌ವೈ‌ಸಿ ಅನ್ನು ಮಾಡಿಸಿರಬೇಕು. ಒಂದು ವೇಳೆ ನೀವು ಈ-ಕೆ‌ವೈ‌ಸಿ ಪೂರ್ಣಗೊಳಿಸದೆ ಇದ್ದರೆ ರೈತರ ಖಾತೆಗೆ ಹಣ ಬರುವುದಿಲ್ಲ. ಇದನ್ನು ರೈತರು ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪೂರ್ಣಗೊಳಿಸಲು ಅವಕಾಶವಿರುತ್ತದೆ

ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಲಿಂಕ್

ರೈತರು ತಮ್ಮ ಆಧಾರ್ ಕಾರ್ಡ್ ಅನ್ನು ಪಿ‌ಎಮ್ ಕಿಸಾನ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ. ಇದನ್ನು ಬ್ಯಾಂಕ್ ಕಚೇರಿಗೆ ಭೇಟಿ ನೀಡಿ ಲಿಂಕ್ ಮಾಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಇದನ್ನು ಮಾಡಿಸದೆ ಇದ್ದರೆ ಹಣ ಬರುವುದಿಲ್ಲ.

ದಾಖಲೆಗಳ ಪರಿಶೀಲನೆ

ರೈತರು ಭೂ ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಒಮ್ಮೆ ಅವುಗಳು ಸರಿಯಾಗಿ ಇವೆಯಾ ಅಂತ ಪರಿಶೀಲಿಸಿ ನಂತರ ಸಲ್ಲಿಸಬೇಕು.

ಈ ಎಲ್ಲ ಕ್ರಮಗಳನ್ನು ಅನುಸರಿಸಿ ನಂತರವೂ ಹಣ ಬಂದಿಲ್ಲವೆನಿಸಿದರೆ ನೀವು ಪಿ‌ಎಮ್ ಕಿಸಾನ್ ಸಹಾಯವಾಣಿ 011-24300606 ಕರೆ ಮಾಡಿ ದೂರು ಸಲ್ಲಿಸಬಹುದು ಅಥವಾ ರೈತರು 180011266 ಟೋಲ್ ಫ್ರೀ ಸಂಖ್ಯೆಗೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದು.

Leave a Comment