ಸ್ನೇಹಿತರೇ ನಿವೇನಾದರೂ ಹೊಸ ಬಿಪಿಎಲ್ ರೇಷನ್ ಕಾರ್ಡ್ (New BPL Ration Card) ಪಡೆಯುವ ನಿರೀಕ್ಷೆಯಲ್ಲಿದ್ದರೆ, ನಿಮಗೊಂದು ಶುಭ ಸುದ್ದಿ ಇದೆ. ಈ ಹಿಂದೆ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ಸರ್ಕಾರ ಬಿಡುಗಡೆ ಮಾಡಲಿದ್ದು, ಯಾವ ಯಾವ ಜಿಲ್ಲೆಯ ಅರ್ಜಿದಾರರಿಗೆ ಮೊದಲ ಹಂತದಲ್ಲಿ ರೇಷನ್ ಕಾರ್ಡ್ ಬಿಡುಗಡೆ ಮಾಡಲಿದೆ ಅನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ (Ration Card) ಪ್ರಮುಖ ದಾಖಲೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಸರ್ಕಾರ ಈ ದಾಖಲೆಯನ್ನು ವಿಲೇವಾರಿ ಮಾಡುತ್ತದೆ.
ರಾಜ್ಯ ಸರ್ಕಾರ ಸಾರ್ವತ್ರಿಕ ಚುನಾವಣೆಯ ಕಾರಣದಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿಲೆವಾರಿಯನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಮತ್ತೆ ಅರ್ಹ ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ ಅವಕಾಶವನ್ನು ಮಾಡಿಕೊಟ್ಟಿದ್ದು, ರಾಜ್ಯ ಸರ್ಕಾರ ಮೊನ್ನೆಯಷ್ಟೇ ಹೊಸದಾಗಿ ಮನೆ ಮಾಡಿಸಿದವರಿಗೆ ಮತ್ತು ಹೊಸದಾಗಿ ಮದುವೆಯಾದ ಅರ್ಹ ಸದಸ್ಯರಿಗೆ ಈ ಅವಕಾಶವನ್ನು ನೀಡಿತ್ತು.
ಇನ್ನೂ 2.3 ಲಕ್ಷ ಹೊಸ ರೇಷನ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ?
ಸ್ನೇಹಿತರೇ ಈ ಹಿಂದೆ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಸದಸ್ಯರಿಗೆ ಮೊದಲು ರೇಷನ್ ಕಾರ್ಡ್ ವಿಲೆವಾರಿಯನ್ನು ಮಾಡಿ ನಂತರ ಬಾಕಿ ಉಳಿದ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಿದ ಅರ್ಹ ಸದಸ್ಯರಿಗೆ ರೇಷನ್ ಕಾರ್ಡ್ ನೀಡಲಾಗುವುದು. ರಾಜ್ಯ ಸರ್ಕಾರದ ವರದಿಯ ಪ್ರಕಾರ ಇನ್ನೂ 2.3 ಲಕ್ಷ ಅರ್ಜಿಗಳಿಗೆ ಬಿಪಿಎಲ್ ಕಾರ್ಡ್(BPL Card) ವಿಲೇವಾರಿ ಕೆಲಸ ಬಾಕಿ ಉಳಿದಿದೆ.
ಮೊದಲು ರೇಷನ್ ಕಾರ್ಡ್ ಸಿಗಲಿರುವ ಜಿಲ್ಲೆಗಳ ಪಟ್ಟಿ?
ಸರ್ಕಾರ ಬಾಕಿ ಉಳಿದಿರುವ ಹಳೆಯ ಬಿಪಿಎಲ್ ಕಾರ್ಡ್ ವಿಲೇವಾರಿ ಬಳಿಕ ಹೊಸ ಬಿಪಿಎಲ್ ಕಾರ್ಡ್(New BPL Card) ವಿತರಿಸಬಹುದು ಎನ್ನಲಾಗಿದೆ. ಸರ್ಕಾರವು ಮೊದಲ ಹಂತದಲ್ಲಿ ಚಿತ್ರದುರ್ಗ,ದಾವಣಗೆರೆ,ದಕ್ಷಿಣ ಕನ್ನಡ, ಬಾಗಲಕೋಟೆ,ಹಾವೇರಿ, ಬೀದರ್,ರಾಯಚೂರು, ಕೊಪ್ಪಳ,ಯಾದಗಿರಿ,ವಿಜಯಪುರ ಜಿಲ್ಲೆಯ ಹೊಸ ಬಿಪಿಎಲ್ ಕಾರ್ಡನ್ನು (New BPL Card) ಶೀಘ್ರದಲ್ಲೇ ವಿತರಿಸಲಿದೆ ಅಂತ ಪ್ರಮುಖ ಮಾಧ್ಯಮಗಳು ಮಾಹಿತಿ ಸಂಗ್ರಹಿಸಿವೆ.