ಭಾರತೀಯ ವಾಯುಪಡೆ ನೇಮಕಾತಿ 2024: 182 ಹಿಂದಿ ಟೈಪಿಸ್ಟ್ ಮತ್ತು ಲೋವರ್ ಡಿವಿಷನ್ ಕ್ಲಾರ್ಕ್ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ

ಭಾರತೀಯ ವಾಯುಪಡೆ ನೇಮಕಾತಿ 2024: 182 ಹಿಂದಿ ಟೈಪಿಸ್ಟ್ ಮತ್ತು ಲೋವರ್ ಡಿವಿಷನ್ ಕ್ಲಾರ್ಕ್ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ

ಸ್ನೇಹಿತರೇ ಭಾರತೀಯ ವಾಯುಪಡೆ 182 ಹಿಂದಿ ಟೈಪಿಸ್ಟ್, ಲೋವರ್ ಡಿವಿಷನ್ ಕ್ಲರ್ಕ್ ಮತ್ತು ನಾಗರಿಕ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಪ್ರಕಟಗೊಳಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 02, 2024 ರ ಒಳಗಾಗಿ ಆಫ್ಲೈನ್ ಅರ್ಜಿ ಸಲ್ಲಿಸಬಹುದು

ಐ‌ಏ‌ಎಫ್ ನೇಮಕಾತಿ 2024 ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆಗಳು ವಿವಿಧವಾಗಿವೆ. ಹಿಂದಿ ಟೈಪಿಸ್ಟ್ ಮತ್ತು ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಅರ್ಜಿ ಹಾಕುವವರು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ನಾಗರಿಕ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ ಹುದ್ದೆಗೆ ಅರ್ಜಿ ಹಾಕುವವರು 10 ನೇ ತರಗತಿ ಪಾಸಾಗಿದ್ದರೆ ಸಾಕು.

ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 25 ವರ್ಷದೊಳಗಿರಬೇಕು. ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿಶೇಷ ವರ್ಸ್ಗದ ಅಭ್ಯರ್ಥಿಗಳಿಗೆ ವಯೋ ಸದಳಿಕೆ ನೀಡಲಾಗಿದೂ ಓ‌ಬಿ‌ಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿ‌ಎಚ್(ಯೂ‌ಆರ್) ಅಭ್ಯರ್ಥಿಗಳಿಗೆ 10 ವರ್ಷ, ಪಿ‌ಎಚ್(ಓ‌ಬಿ‌ಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿ‌ಎಚ್(ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷ ವಯೋ ಸಡಳಿಕೆಯನ್ನು ನೀಡಲಾಗಿದೆ.

ಪರೀಕ್ಷೆ ಸಿಲೆಬಸ್: ಅಭ್ಯರ್ಥಿಗಳಿಗೆ ಹಿಂದಿ ಟೈಪಿಸ್ಟ್/ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜನ್ಸ್, ಇಂಗ್ಲಿಷ್ ಭಾಷೆ, ನ್ಯೂಮೆರಿಕಲ್ ಆಪ್ಟಿಟ್ಯೂಡ್, ಜನರಲ್ ಆವೇರ್ನೆಸ್ ಮತ್ತು ನಾಗರಿಕ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ ನ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜನ್ಸ್, ಇಂಗ್ಲಿಷ್ ಭಾಷೆ, ನ್ಯೂಮೆರಿಕಲ್ ಆಪ್ಟಿಟ್ಯೂಡ್, ಜನರಲ್ ಆವೇರ್ನೆಸ್ ಮತ್ತು ಟ್ರೇಡ್ ಸಂಬಂದಿತ ವಿಷಯಗಳಲ್ಲಿನ ಪ್ರಶ್ನೆಗಳನ್ನು ಕೇಳಲಾಗುವುದು.

ಆಯ್ಕೆ ಪ್ರಕ್ರಿಯೆ: 2024 ನೇ ಸಾಲಿನ ಐ‌ಏ‌ಎಫ್ ನೇಮಕಾತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ವಿವಿಧ ಹಂತಗಳಲ್ಲಿ ಕೈಗೊಳ್ಳಲಾಗುವುದು. ಮೊದಲು ಲಿಖಿತ ಪರೀಕ್ಷೆ, ಕೌಶಲ್ಯ/ ಪ್ರಾಯೋಗಿಕ/ಶಾರೀರಿಕ ಪರೀಕ್ಷೆಯನ್ನು ನಡೆಸಿ ಕೊನೆಯಲ್ಲಿ ಸಂದರ್ಶನ ತೆಗೆದುಕೊಳ್ಳಲಾಗುದು. ಹೀಗಾಗಿ ಅಭ್ಯರ್ಥಿಗಳು ಹಂತ ಹಂತವಾಗಿ ತಯಾರಿ ನಡೆಸಿ ಆಯ್ಕೆ ಪ್ರಕ್ರಿಯಲ್ಲಿ ಪಾಲ್ಗೊಳ್ಳಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಮೊದಲು ಐ‌ಏ‌ಎಫ್ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅಧಿಕ್ರತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅರ್ಜಿ ನಮೂನೆಯಲ್ಲಿ ಸೂಚಿಸಿದ ಎಲ್ಲ ವಿವರಗಳನ್ನು ತಪ್ಪದೆ ನಮೂದಿಸಿ ಅಗತ್ಯ ದಾಖಲೆಗಳೊಂದಿಗೆ ಸಂಬಂದಿತ ವಾಯುಪಡೆ ಸ್ಟೇಷನ್ ಗಳಿಗೆ (ಪಶ್ಚಿಮ ಕಮಾಂಡ್/ತರಬೇತಿ ಕಮಾಂಡ್/ಮೆಂಟೆನೆನ್ಸ್ ಕಮಾಂಡ್/ ಕೇಂದ್ರ ವಾಯು ಕಮಾಂಡ್/ ಪೂರ್ವ ಕಮಾಂಡ್) ನೋಂದಾಯಿತ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಗಳ ಮೂಲಕ ಸೆಪ್ಟೆಂಬರ್ 02, 2024 ರ ಒಳಗೆ ಕಳುಹಿಸಿ

ಐ‌ಏ‌ಎಫ್ ನೇಮಕಾತಿ 2024 ರ ಆಫ್ಲೈನ್ ಅರ್ಜಿ ಸಲ್ಲಿಕೆ 03-08-2024 ರಂದು ಪ್ರಾರಂಭವಾಗಲಿದ್ದು 02-09-204 ರಂದು ಕೊನೆಗೊಳ್ಳಲಿದೆ ಹೀಗಾಗಿ ಆಸಕ್ತರು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು.

ಪ್ರಮುಖ ಲಿಂಕುಗಳು

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಅಧಿಕ್ರ್ತ ಪೋರ್ಟಲ್ ಗೆ ಭೇಟಿ ನೀಡಬೇಕು.

Leave a Comment